ETV Bharat / bharat

30 ವರ್ಷಗಳ ಭಾರತ-ಇಸ್ರೇಲ್ ದ್ವಿಪಕ್ಷೀಯ ಸಂಬಂಧ ಶ್ಲಾಘಿಸಿದ ಪ್ರಧಾನಿ ಮೋದಿ - ಭಾರತ-ಇಸ್ರೇಲ್ ದ್ವಿಪಕ್ಷೀಯ ಸಂಬಂಧಗಳ 30 ನೇ ವಾರ್ಷಿಕೋತ್ಸವ

ಭಾರತ-ಇಸ್ರೇಲ್ ದ್ವಿಪಕ್ಷೀಯ ಸಂಬಂಧಗಳ 30ನೇ ವಾರ್ಷಿಕೋತ್ಸವದ ಕುರಿತು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

ಪ್ರಧಾನಿ ಮೋದಿ
ಪ್ರಧಾನಿ ಮೋದಿ
author img

By

Published : Jan 30, 2022, 11:54 AM IST

ನವದೆಹಲಿ : ಭಾರತ ಮತ್ತು ಇಸ್ರೇಲ್ ನಡುವಿನ ಮೂವತ್ತು ವರ್ಷಗಳ ಬಾಂಧವ್ಯವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಭಾರತ-ಇಸ್ರೇಲ್ ದ್ವಿಪಕ್ಷೀಯ ಸಂಬಂಧಗಳ 30ನೇ ವಾರ್ಷಿಕೋತ್ಸವದ ಕುರಿತು ಮಾತನಾಡಿರುವ ಮೋದಿ, ಉಭಯ ದೇಶಗಳ ನಡುವಿನ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯಲು ಹಾಗೂ ಹೊಸ ಯೋಜನೆಗಳನ್ನು ರೂಪಿಸಲು ಇದಕ್ಕಿಂತ ಉತ್ತಮ ಸಮಯವಿಲ್ಲ.

ಭಾರತ-ಇಸ್ರೇಲ್‌ ನಡುವಿನ ರಾಜತಾಂತ್ರಿಕ ಸಂಬಂಧ 30 ವರ್ಷದ ಮೈಲುಗಲ್ಲನ್ನು ತಲುಪಿದೆ. ಮೂವತ್ತು ವರ್ಷಗಳ ಹಿಂದೆ ಈ ದಿನ ದ್ವಿಪಕ್ಷೀಯ ಸಂಬಂಧದ ಹೊಸ ಪ್ರಯಾಣವನ್ನು ಅಧಿಕೃತವಾಗಿ ಪ್ರಾರಂಭಿಸಿದ್ದೆವು ಎಂದಿದ್ದಾರೆ.

ಯಹೂದಿ ಸಮುದಾಯವು ಯಾವಾಗಲೂ ಭಾರತೀಯ ಸಮಾಜದ ಅವಿಭಾಜ್ಯ ಅಂಗವಾಗಿದೆ. ಶತಮಾನಗಳಿಂದಲೂ ಅಭಿವೃದ್ಧಿಯ ಪಯಣದಲ್ಲಿ ಪಾಲುದಾರರಾಗಿದ್ದಾರೆ. ಪ್ರಸ್ತುತ ಜಾಗತಿಕ ರಾಜತಾಂತ್ರಿಕ ವಾತಾವರಣದಲ್ಲಿ ತ್ವರಿತ ಬದಲಾವಣೆಗಳು ಸಂಭವಿಸುತ್ತಿರುವುದರಿಂದ ಭಾರತವು ದ್ವಿಪಕ್ಷೀಯ ಸಹಕಾರದ ಹೊಸ ಗುರಿಗಳನ್ನು ಹೊಂದಿಸಲು ಇದು ಉತ್ತಮ ಸಮಯವಾಗಿದೆ ಎಂದು ಹೇಳಿದ್ದಾರೆ.

ಜೂನ್ 14, 2021ರಂದು ಇಸ್ರೇಲ್‌ನ ಪ್ರಧಾನಮಂತ್ರಿ ನಫ್ತಾಲಿ ಬೆನೆಟ್ ಅವರು ಅಧಿಕಾರ ವಹಿಸಿಕೊಂಡಾಗ ಅವರನ್ನು ಮೋದಿ ಅಭಿನಂದಿಸಿದ್ದರು. ಜುಲೈ 2017ರಲ್ಲಿ ಮೋದಿ ಇಸ್ರೇಲ್‌ಗೆ ನೀಡಿದ್ದ ಐತಿಹಾಸಿಕ ಮೊದಲ ಭೇಟಿಯ ಸಂದರ್ಭದಲ್ಲಿ ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆ ಕುರಿತು ಸಹಿ ಹಾಕಿದ್ದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.