ETV Bharat / bharat

ಜಯಲಲಿತಾ ವಿಚಾರ: ಪಿಎಂಕೆ ವಿರುದ್ಧ ಆರೋಪ ಹೊರಿಸಿದ ಡಿಎಂಕೆ

ತಮಿಳುನಾಡು ವಿಧಾನಸಭಾ ಚುನಾವಣೆ ಭಾರಿ ಕುತೂಹಲ ಕೆರಳಿಸಿದ್ದು, ಚುನಾವಣಾ ಪ್ರಚಾರ ಕೂಡ ಜೋರಾಗಿಯೇ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಆರೋಪ -ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡಿವೆ.

ಆರ್.ಎಸ್.ಭಾರತಿ
RS Bharathi
author img

By

Published : Mar 18, 2021, 9:34 AM IST

ಚೆನ್ನೈ (ತಮಿಳುನಾಡು): ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಮೇಲೆ ಪಿಎಂಕೆ ಪಕ್ಷ ಹೆಚ್ಚಿನ ಒತ್ತಡ ಹೇರಿತ್ತೇ ಹೊರತು ಡಿಎಂಕೆ ಅಲ್ಲ. ಜಯಲಲಿತಾ ಅವರ ಸಾವಿನ ಪ್ರಕರಣ ಸಂಬಂಧ ಡಿಎಂಕೆ ಪಕ್ಷ ಕಾನೂನಿನಡಿ ಪ್ರಕರಣ ದಾಖಲಿಸಿ ತನಿಖೆಗೆ ಆಗ್ರಹಿಸಿತ್ತು. ಆದರೆ, ಪಿಎಂಕೆ ಹೆಚ್ಚಿನ ಒತ್ತಡವನ್ನು ಹೇರಿತ್ತು ಎಂದು ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್.ಭಾರತಿ ಆರೋಪಿಸಿದರು.

ಚೆನ್ನೈನ ಅನ್ನಾ ಅರಿವಲಯಂನಲ್ಲಿ ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್.ಭಾರತಿ ಮತ್ತು ರಾಜ್ಯ ಪರಿಷತ್ ಸದಸ್ಯ ಎನ್.ಆರ್.ಇಲಾಂಗೊ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪಿಎಂಕೆ ವಿರುದ್ಧ ಗುಡುಗಿದರು.

ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿಯವರು ಎಲ್ಲೆಲ್ಲಿ ಪ್ರಚಾರ ಹೋಗುತ್ತಿದ್ದರೋ ಅಲ್ಲೆಲ್ಲ ಸುಳ್ಳಿನ ಕಟ್ಟು ಕತೆಗಳನ್ನು ಹೇಳುತ್ತಿದ್ದಾರೆ. ಜಯಲಲಿತಾ ಅವರು ಸಾವಿಗೆ ಡಿಎಂಕೆ ಕಾರಣ. ಡಿಎಂಕೆ ಅವರ ನ್ಯಾಯಾಲಯದ ಪ್ರಕರಣಗಳಿಂದ ಖಿನ್ನತೆಗೆ ಒಳಗಾಗಿ ನಿಧನ ಹೊಂದಿದರು ಎಂದು ಆರೋಪಿಸಿದ್ದಾರೆ.

ಓದಿ: ಅಸ್ಸೋಂ, ಬಂಗಾಳದಲ್ಲಿಂದು ಪಿಎಂ ಮೋದಿ ಚುನಾವಣಾ ರ‍್ಯಾಲಿ

ಆದರೆ, ಜಯಲಲಿತಾ ಅವರ ಆಸ್ತಿ ಪ್ರಕರಣ ಸೇರಿದಂತೆ ಟ್ಯಾನ್ಸ್ ಪ್ರಕರಣದಿಂದ ಸುಪ್ರೀಂಕೋರ್ಟ್ ತೀರ್ಪಿನವರೆಗೆ ಎಲ್ಲವನ್ನೂ ಡಿಎಂಕೆ ಕಾನೂನುಬದ್ಧವಾಗಿ ನಿರ್ವಹಿಸಿದೆ ಎಂದೂ ಸಮರ್ಥಿಸಿಕೊಂಡರು.

ಕರ್ನಾಟಕ ಹೈಕೋರ್ಟ್ ಜಯಲಲಿತಾ ಅವರ ಪ್ರಕರಣವನ್ನು ಖುಲಾಸೆಗೊಳಿಸಿತ್ತು. ಆ ವೇಳೆ, ಡಿಎಂಕೆ ರಾಜಕೀಯವಾಗಿ ಯಾರನ್ನೂ ಸಂಪರ್ಕಿಸಲಿಲ್ಲ. ಆದರೆ ಪಿಎಂಕೆ ನಾಯಕ ಜಿಕೆ ಮಣಿ ಮತ್ತು ವಕೀಲ ಬಾಲು ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಮೇಲ್ಮನವಿ ಸಲ್ಲಿಸುವಂತೆ ಒತ್ತಾಯಿಸಿದರು. ಅಷ್ಟೇ ಅಲ್ಲದೆ ಪಿಎಂಕೆ ವಕೀಲ ಬಾಲು ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಜಯಲಲಿತಾ ಅವರ ಸ್ಮಾರಕದ ವಿರುದ್ಧ ಮಾತನಾಡಿದ್ದರು ಎಂದು ಇದೇ ವೇಳೆ ಆರೋಪಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.