ತ್ರಿಶೂರ್(ಕೇರಳ) : ಒಂದು ಗಂಡು ಒಂದು ಹೆಣ್ಣು ದಾಂಪತ್ಯಕ್ಕೆ ಕಾಲಿಡುವ ಮಧುರ ಕ್ಷಣಕ್ಕೆ ಮದುವೆ ಅಂತೀವಿ. ಹಾಗೇ, ಭೂಮಿಯ ಮೇಲೆ ಬಗೆಬಗೆಯ ಮದುವೆಗಳನ್ನು ನೋಡಿದ್ದೀರಿ. ಕಂಡು, ಕೇಳಿದ್ದೀರಿ. ಆದರೆ, ಇಲ್ಲೊಂದು ವಿಭಿನ್ನ ವಿವಾಹ ನೆರವೇರಿದೆ.
ಕೇರಳದ ತ್ರಿಶೂರ್ನಲ್ಲಿ ಶ್ವಾನಗಳ ವಿವಾಹ ಮಹೋತ್ಸವ ಜರುಗಿದೆ. ದುಬಾರಿ ರೆಸಾರ್ಟ್ನಲ್ಲಿ ವಧು ಮತ್ತು ವರರ ಸಮಾಗಮವಾಗಿದೆ. ರೆಸಾರ್ಟ್ ಮಾಲೀಕ ಆಕಾಶ್ ಶೆಲ್ಲಿ ಮಾಲೀಕತ್ವದ ನಾಯಿಗಳ ಮದುವೆ ಜರುಗಿದೆ.
ವರ ಆಸಿಡ್ ಮತ್ತು ವಧು ಜಾನ್ವಿಯ ಅದ್ಧೂರಿ ವಿವಾಹ ಸಮಾರಂಭ ನಡೆಯಿತು. ಬಹುಶಃ ಕೇರಳದಲ್ಲಿ ಇದೇ ಮೊದಲ ಬಾರಿಗೆ ಇಂತಹದ್ದೊಂದು ಮದುವೆ ಜರುಗಿರಬಹುದು. ಕೋವಿಡ್ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಅತಿಥಿಗಳನ್ನು ನಿಗದಿತ ಸಂಖ್ಯೆಗೆ ಸೀಮಿತಗೊಳಿಸಲಾಗಿತ್ತು.
ಮದುವೆಯ ಕರೆಯೋಲೆ, ದಿಬ್ಬಣ, ಕೇಕ್, ಭೂರಿ ಭೋಜನದ ವ್ಯವಸ್ಥೆ ಸಹ ಈ ನಾಯಿಗಳ ಮದುವೆಯಲ್ಲಿ ಆಕರ್ಷಣೀಯವಾಗಿತ್ತು. ಸದ್ಯ ಈ ಶ್ವಾನಗಳ ವಿವಾಹದ ಫೋಟೋಗಳು ನೆಟ್ಟಿಗರ ಮನಗೆಲ್ಲುತ್ತಿವೆ.
ಓದಿ: ಬ್ರಿಗೇಡಿಯರ್ ಎಸ್ ವಿ ಸರಸ್ವತಿಗೆ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ 2020..