ETV Bharat / bharat

ನಟ ಸೋನು ಸೂದ್​​ 20 ಕೋಟಿ ರೂ. ಆದಾಯ ತೆರಿಗೆ ವಂಚನೆ : ಕಂದಾಯ ಇಲಾಖೆ ಆರೋಪ

ಬಾಲಿವುಡ್​ ನಟ ಸೋನು ಸೂದ್ ಅವರ ಮನೆ, ಕಚೇರಿ ಮತ್ತು ಹೋಟೆಲ್​ಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಸತತವಾಗಿ ಶೋಧಕಾರ್ಯ ನಡೆಸಿದ್ದು, ಇದೀಗ ಮಹತ್ವದ ಮಾಹಿತಿ ಬಿಚ್ಚಿಟ್ಟಿದ್ದಾರೆ..

Sonu Sood
Sonu Sood
author img

By

Published : Sep 18, 2021, 3:17 PM IST

ನವದೆಹಲಿ : ಕಳೆದ ಮೂರು ದಿನಗಳಿಂದ ಬಾಲಿವುಡ್ ನಟ ಸೋನು ಸೂದ್​ ನಿವಾಸ, ಕಚೇರಿ ಸೇರಿ ವಿವಿಧ ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿರುವ ಕಂದಾಯ ಇಲಾಖೆ ಇದೀಗ ಮಹತ್ವದ ಮಾಹಿತಿ ಹಂಚಿಕೊಂಡಿದೆ. ನಟ 20 ಕೋಟಿ ರೂಪಾಯಿ ಆದಾಯ ತೆರಿಗೆ ವಂಚನೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಲ ಸಾಕ್ಷ್ಯಗಳು ಲಭ್ಯವಾಗಿವೆ ಎಂಬ ಮಾಹಿತಿ ಕೂಡ ಹಂಚಿಕೊಂಡಿದೆ.

ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡುವ ಮೂಲಕ ಅವರ ಜೀವನದಲ್ಲಿ ರಿಯಲ್​ ಹೀರೋ ಆಗಿ ಹೊರಹೊಮ್ಮಿದ್ದ ನಟ ಸೋನು ಸೂದ್​ ಕಳೆದ ಕೆಲ ದಿನಗಳ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರನ್ನ ಭೇಟಿ ಮಾಡಿದ್ದರು. ಈ ವೇಳೆ ಅವರನ್ನ ಅಲ್ಲಿನ ಸರ್ಕಾರಿ ಕಾರ್ಯಕ್ರಮಗಳಿಗೆ ಬ್ರಾಂಡ್​ ಅಂಬಾಸಿಡರ್​ ಆಗಿ ನೇಮಕ ಮಾಡಲಾಗಿತ್ತು. ಇದರ ಬೆನ್ನಲ್ಲೇ ಐಟಿ ಇಲಾಖೆ ಅವರಿಗೆ ಶಾಕ್​ ನೀಡಿತ್ತು.

ಇದನ್ನೂ ಓದಿರಿ: 'ಕರ್ಮ' ವಿಸರ್ಜನೆ ವೇಳೆ ಅವಘಡ... ನೀರಿನಲ್ಲಿ ಮುಳುಗಿ ಏಳು ಬಾಲಕಿಯರ ದುರ್ಮರಣ

ಪ್ರಮುಖವಾಗಿ ಮುಂಬೈ, ಲಖನೌ, ಕಾನ್ಪುರ್​, ಜೈಪುರ, ದೆಹಲಿ ಮತ್ತು ಗುರುಗ್ರಾಮ್​ಗಳಲ್ಲಿನ ಒಟ್ಟು 28 ಕಚೇರಿಗಳು, ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಶೋಧಕಾರ್ಯ ನಡೆಸಿದ್ದರು.

ಕಂದಾಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಆಸ್ತಿಗಳನ್ನ ಸ್ವಾಧೀನಪಡಿಸಿಕೊಳ್ಳಲು ಮತ್ತು ಅವುಗಳ ಮೇಲೆ ಹೂಡಿಕೆ ಮಾಡಲು ಅಸ್ತಿತ್ವದಲ್ಲೇ ಇರದ ಸಂಸ್ಥೆಗಳಿಂದ ಸಾಲವನ್ನ ಪಡೆದುಕೊಳ್ಳಲಾಗಿದ್ದು, ಇದಕ್ಕಾಗಿ ಕೆಲ ನಕಲಿ ದಾಖಲೆ ಸೃಷ್ಠಿಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಹೀಗಾಗಿ, ಅವರು ಕಂದಾಯ ಇಲಾಖೆಗೆ ಸುಮಾರು 20 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ವರದಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.