ತಿರುವನಂತಪುರಂ : ಇಸ್ರೋ ಗೂಢಚರ್ಯೆ ಪ್ರಕರಣದ ದೂರುದಾರ ನಂಬಿ ನಾರಾಯಣನ್ ಮಂಗಳವಾರ (ಜೂನ್ 29) ದಂದು ಹಾಜರಾಗುವಂತೆ ದೆಹಲಿಯ ಸಿಬಿಐ ತನಿಖಾ ತಂಡ ನಿರ್ದೇಶಿಸಿದೆ. ಸಿಬಿಐ ಮುಂದೆ ಹಾಜರಾಗಲಿರುವ ನಂಬಿ ನಾರಾಯಣನ್ ಪ್ರಕರಣ ಸಂಬಂಧ ಸಾಕ್ಷ್ಯ ನೀಡಲಿದ್ದಾರೆ.
ಈ ಪ್ರಕರಣದಲ್ಲಿ 18 ಆರೋಪಿಗಳನ್ನು ಹೆಸರಿಸಲಾಗಿದೆ. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಮೇ ತಿಂಗಳಲ್ಲಿ ಸಿಬಿಐ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಈ ಕೇಸ್ನಲ್ಲಿ ಸಿಬಿಐ ತನಿಖೆ ಮೂಲಕ ನಂಬಿ ನಾರಾಯಣ್ ನಿರಪರಾಧಿ ಎಂದು ತಿಳಿದು ಬಂದಿದೆ.
ಎಸ್ ವಿಜಯನ್, ಪ್ರಕರಣದ ಸಮಯದಲ್ಲಿ ಪೆಟ್ಟಾ ಸಿಐ ಆಗಿದ್ದರಿಂದ ಅವರನ್ನು ಮೊದಲ ಆರೋಪಿಯನ್ನಾಗಿ (ಎ1) ಮಾಡಲಾಗಿದೆ. ಆಗಿನ ಪೆಟ್ಟಾ ಎಸ್‌ಐ ಥಾಂಪಿ ಎಸ್ ದುರ್ಗಾಥತ್ 2ನೇ ಆರೋಪಿ. ತಿರುವನಂತಪುರಂ ನಗರದ ಮಾಜಿ ಪೊಲೀಸ್ ಆಯುಕ್ತ ಬಿ ಆರ್ ರಾಜೀವನ್ ಮೂರನೇ ಆರೋಪಿ. ಮಾಜಿ ಡಿಐಜಿ ಸಿಬಿ ಮ್ಯಾಥ್ಯೂಸ್ ನಾಲ್ಕನೇ ಆರೋಪಿ ಮತ್ತು ಡಿವೈಎಸ್ಪಿ ಕೆ ಕೆ ಜೋಶುವಾ ಅವರನ್ನು ಐದನೇ ಆರೋಪಿಯನ್ನಾಗಿ ಮಾಡಲಾಗಿದೆ.
ಇದನ್ನೂ ಓದಿ:ಇಸ್ರೋ ಬೇಹುಗಾರಿಕೆ ಪ್ರಕರಣ: 18 ಅಧಿಕಾರಿಗಳೇ ಇಲ್ಲಿ ಆರೋಪಿಗಳು!