ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತನ್ನ ಬಹುನಿರೀಕ್ಷಿತ ಪರೀಕ್ಷಾರ್ಥ ಗಗನಯಾನ ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದರ ಬೆನ್ನಲ್ಲೇ ಗಗನಯಾನ್ ಟಿವಿ-ಡಿ 1 ಟೆಸ್ಟ್ ವೆಹಿಕಲ್ ಉಡಾವಣೆಯ ವಿಡಿಯೋವೊಂದನ್ನು ಇಸ್ರೋ ಹಂಚಿಕೊಂಡಿದೆ. ಪರೀಕ್ಷಾರ್ಥ ಕ್ರೂ ಮಾಡ್ಯೂಲ್ ಗಗನಯಾನವನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಈ ಮೂಲಕ ಭಾರತವು ಗಗನಯಾನಿಗಳನ್ನು ಒಳಗೊಂಡ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿರುವ ದೇಶಗಳ ಪಟ್ಟಿಗೆ ಸೇರ್ಪಡೆಯಾಗಿದೆ.
-
TV D1 Onboard video https://t.co/3hedjrLgiA https://t.co/QRhVQ0chB7
— ISRO (@isro) October 22, 2023 " class="align-text-top noRightClick twitterSection" data="
">TV D1 Onboard video https://t.co/3hedjrLgiA https://t.co/QRhVQ0chB7
— ISRO (@isro) October 22, 2023TV D1 Onboard video https://t.co/3hedjrLgiA https://t.co/QRhVQ0chB7
— ISRO (@isro) October 22, 2023
ಕೆಲವು ಆರಂಭಿಕ ಸವಾಲು ಮತ್ತು ವಿಳಂಬಗಳ ಹೊರತಾಗಿಯೂ ಇಸ್ರೋ ಭಾನುವಾರ ತನ್ನ ಪರೀಕ್ಷಾರ್ಥ ನೌಕೆ ಯಶಸ್ವಿಯಾಗಿ ಪೂರೈಸಿತು. ಈ ವೇಳೆ, ಸಿಬ್ಬಂದಿ ತಪ್ಪಿಸಿಕೊಳ್ಳುವ ವ್ಯವಸ್ಥೆಯು ಉಡಾವಣಾ ವಾಹನದಿಂದ ಯಶಸ್ವಿಯಾಗಿ ಬೇರ್ಪಟ್ಟಿತು. ಬಳಿಕ ಕ್ರೂ ಮಾಡೆಲ್ ಪ್ಯಾರಾಚೂಟ್ಗಳ ಸಹಾಯದಿಂದ ಸಮುದ್ರದ ಮೇಲ್ಮೈ ಮೇಲೆ ಸುರಕ್ಷಿತವಾಗಿ ಇಳಿಯಲ್ಪಟ್ಟಿತು.
’’ಈ ಯೋಜನೆಯ ಮುಖ್ಯ ಉದ್ದೇಶ ಎಂದರೆ, ಉಡಾವಣಾ ವಾಹನದಿಂದ (ಕ್ರ್ಯೂ ಎಸ್ಕೇಪ್ ಸಿಸ್ಟಂ) ಸಿಬ್ಬಂದಿ ಸುರಕ್ಷಿತವಾಗಿ ಬೇರ್ಪಡುವ ವ್ಯವಸ್ಥೆ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸುವುದಾಗಿತ್ತು. ಈ ಪರೀಕ್ಷೆಯಲ್ಲಿ ಇಸ್ರೋ ಯಶಸ್ವಿಯಾಗಿದೆ. ಗಗನಯಾನ ಪರೀಕ್ಷಾರ್ಥ ಮಿಷನ್ ಯಶಸ್ವಿಯಾಗಿದ್ದಕ್ಕೆ ತುಂಬಾ ಸಂತೋಷವಾಗಿದೆ‘‘ ಎಂದು ಇಸ್ರೋ ಅಧ್ಯಕ್ಷರು ಹೇಳಿದ್ದಾರೆ.
’’ಈ ಯೋಜನೆಯು ಪ್ರಮುಖವಾಗಿ ಸಿಬ್ಬಂದಿಯನ್ನು ಉಡಾವಣಾ ವಾಹನದಿಂದ ಬೇರ್ಪಡಿಸಿ, ನಿಗದಿತ ಕಕ್ಷೆಯಲ್ಲಿ ನೆಲೆಗೊಳಿಸಿ, ಆ ಬಳಿಕ ಮತ್ತೆ ಭೂಮಿಗೆ ವಾಪಸ್ ಕರೆ ತರುವ ವ್ಯವಸ್ಥೆಯನ್ನು ಪರೀಕ್ಷೆ ಮಾಡುವುದಾಗಿತ್ತು. ಅಂದ ಹಾಗೆ ಈ ಉಡಾವಣಾ ವಾಹನವು ಶಬ್ದಕ್ಕಿಂತ ಹೆಚ್ಚಿನ ವೇಗದಲ್ಲಿ, ಬಾಹ್ಯಾಕಾಶಕ್ಕೆ ನೆಗೆಯುತ್ತದೆ. ಇಂತಹ ಸಂದರ್ಭದಲ್ಲಿ ಕ್ರ್ಯೂ ಎಸ್ಕೇಪ್ ಸಿಸ್ಟಂ ಉಡಾವಣಾ ವಾಹನದಿಂದ ಬೇರ್ಪಡಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ನಾವೀಗ ಯಶಸ್ವಿಯಾಗಿದ್ದೇವೆ.
ಈ ಪರೀಕ್ಷಾರ್ಥ ಗಗನಯಾನ ಯೋಜನೆಯು ಹಲವು ಉದ್ದೇಶಗಳನ್ನು ಹೊಂದಿತ್ತು. ಈ ಉಡಾವಣೆ ಮೂಲಕ ನಾವು ಎಲ್ಲ ಉದ್ದೇಶಗಳನ್ನು ಪೂರೈಸಿದ್ದೇವೆ. ಇಲ್ಲಿ ಪ್ರಮುಖವಾಗಿ ಹಾರಾಟದ ಸಂದರ್ಭದಲ್ಲಿ ಪರೀಕ್ಷಾ ವಾಹನದ ಉಪ ವ್ಯವಸ್ಥೆಗಳ ಸಾಮರ್ಥ್ಯವನ್ನು ಮೌಲ್ಯ ಮಾಪನ ಮಾಡಲಾಗಿದೆ. ಸಿಬ್ಬಂದಿ ಇರುವ ಕ್ರ್ಯೂ ಎಸ್ಕೇಪ್ ಸಿಸ್ಟಂ ಅನ್ನು ಮೌಲ್ಯಮಾಪನ ಮತ್ತು ಪರೀಕ್ಷಿಸುವುದು, ಜೊತೆಗೆ ಕ್ರೂ ಮಾಡೆಲ್ನ ಸಾಮರ್ಥ್ಯವನ್ನು ಪ್ರದರ್ಶಿಸುವುದು ಇಸ್ರೋ ಮುಂದಿರುವ ಸವಾಲಾಗಿತ್ತು. ಈಗ ನಾವು ಈ ಸವಾಲಿನಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.
ಈ ಪರೀಕ್ಷಾರ್ಥ ಯೋಜನೆಗೆ ಏಕ ಹಂತದ ರಾಕೆಟ್ನ್ನು ಅಭಿವೃದ್ಧಿಪಡಿಸಲಾಗಿತ್ತು. ಇದರಲ್ಲಿರುವ ಪೇ ಲೋಡ್ಗಳು ಕ್ರೂ ಮಾಡ್ಯೂಲ್ ಮತ್ತು ಕ್ರೂ ಎಸ್ಕೇಪ್ ಸಿಸ್ಟಮ್ಗಳನ್ನು ಹೊಂದಿತ್ತು. ಈ ಯೋಜನೆಯ ಯಶಸ್ವಿಯು ಮಾನವ ಸಹಿತ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಹೊಸ ಮೈಲಿಗಲ್ಲಾಗಲಿದೆ.
ಈ ಗಗನಯಾನ ಯೋಜನೆಯು 3 ದಿನಗಳ ಕಾರ್ಯಾಚರಣೆಗೆ ಭೂಮಿಯಿಂದ ಬಾಹ್ಯಾಕಾಶಕ್ಕೆ 400 ಕಿಮೀ ಎತ್ತರಕ್ಕೆ ಸಿಬ್ಬಂದಿ ಸಮೇತ ನೌಕೆಯನ್ನು ಉಡಾವಣೆ ಮಾಡಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ಮರಳಿ ಕರೆತರುವ ಯೋಜನೆಯಾಗಿದೆ. ಈ ಯೋಜನೆ ಬಳಿಕ ಮಾನವ ಸಹಿತ ಬಾಹ್ಯಾಕಾಶ ಯಾನ ಮಾಡಿದ ಅಮೆರಿಕ, ರಷ್ಯಾ, ಚೀನಾದ ಸಾಲಿಗೆ ಭಾರತವು ಸೇರ್ಪಡೆಯಾಗಲಿದೆ.
ಇದನ್ನೂ ಓದಿ : Gaganyaan TV D1 Mission success: ಗಗನಯಾನದ ಮೊದಲ ಪರೀಕಾರ್ಥ ಯಶಸ್ವಿ.. ಸಂತಸ ಹಂಚಿಕೊಂಡ ಇಸ್ರೋ ಅಧ್ಯಕ್ಷ