ಶ್ರೀಹರಿಕೋಟ(ಆಂಧ್ರಪ್ರದೇಶ): ಮಹತ್ವಾಕಾಂಕ್ಷೆಯ ಭೂ ಸರ್ವೇಕ್ಷಣಾ ಉಪಗ್ರಹ EOS-04 ಸೇರಿದಂತೆ ಮತ್ತೆರಡು ಉಪಗ್ರಹಗಳಿದ್ದ ಪಿಎಸ್‌ಎಲ್‌ವಿ ಸಿ-52 ರಾಕೆಟ್ ಅನ್ನು ಇಂದು ಬೆಳ್ಳಬೆಳಗ್ಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಸ್ರೋ ಯಶಸ್ವಿಯಾಗಿ ಉಡ್ಡಯನ ಮಾಡಿದೆ.
ಬೆಳಗ್ಗೆ 5.59ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ರಾಕೆಟ್ ನಭಕ್ಕೆ ಚಿಮ್ಮಿತು. ಈ ಉಡ್ಡಯನದ 25 ಗಂಟೆಗಳ ಕೌಂಟ್‌ಡೌನ್ ಮುಗಿಯುತ್ತಿದ್ದಂತೆ ನಿಗದಿಯಂತೆ ಇಸ್ರೋದ ನಂಬಿಕಸ್ಥ ರಾಕೆಟ್ ಪಿಎಸ್‌ಎಲ್‌ವಿ ಬಾಹ್ಯಾಕಾಶದತ್ತ ಪ್ರಯಾಣ ನಡೆಸಿತು.
ಉಪಗ್ರಹ EOS-04 10 ವರ್ಷಗಳಷ್ಟು ಬಾಳ್ವಿಕೆ ಇರಲಿದೆ. ಈ ಭೂ ವೀಕ್ಷಣಾ ಉಪಗ್ರಹ ಕೃಷಿ, ಅರಣ್ಯ ಮತ್ತು ತೋಟಗಳು, ಮಣ್ಣಿನ ತೇವಾಂಶ ಮತ್ತು ಜಲವಿಜ್ಞಾನ ಮತ್ತು ಪ್ರವಾಹ ಮ್ಯಾಪಿಂಗ್‌ನಂತಹ ಅಪ್ಲಿಕೇಷನ್ಗಳಿಗಾಗಿ ಕೆಲಸ ಮಾಡಲಿದೆ. ಎಂಥಹದ್ದೇ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಕೂಡಾ ಉತ್ತಮ ಗುಣಮಟ್ಟದ ಚಿತ್ರಗಳನ್ನು ಭೂಮಿಗೆ ರವಾನಿಸುವಂತೆ ವಿನ್ಯಾಸ ಮಾಡಲಾಗಿದೆ.
-
#WATCH | Indian Space Research Organisation launches PSLV-C52/EOS-04 from Satish Dhawan Space Centre, Sriharikota
— ANI (@ANI) February 14, 2022 " class="align-text-top noRightClick twitterSection" data="
(Source: ISRO) pic.twitter.com/g92XSaHP9r
">#WATCH | Indian Space Research Organisation launches PSLV-C52/EOS-04 from Satish Dhawan Space Centre, Sriharikota
— ANI (@ANI) February 14, 2022
(Source: ISRO) pic.twitter.com/g92XSaHP9r#WATCH | Indian Space Research Organisation launches PSLV-C52/EOS-04 from Satish Dhawan Space Centre, Sriharikota
— ANI (@ANI) February 14, 2022
(Source: ISRO) pic.twitter.com/g92XSaHP9r
ಇದೇ ರಾಕೆಟ್‌ನಲ್ಲಿ INSPIREsat-1 ಮತ್ತು INS-2TD ಎಂಬ ಸಣ್ಣ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಇಸ್ರೋ ಕಳುಹಿಸಿದೆ.