ರಾಯ್ಪುರ/ ಕೋಲ್ಕತಾ: ಅಮೆರಿಕ, ರಷ್ಯಾ ಹಾಗೂ ಚೀನಾ ದೇಶಗಳ ಸಾಲಿನಲ್ಲಿ ಭಾರತವನ್ನು ತಂದು ನಿಲ್ಲಿಸಿದ ಇಸ್ರೋದ ಯಶಸ್ವಿ ಚಂದ್ರಯಾನ-3 ಯೋಜನೆಯ ಗಗನನೌಕೆಯಂತೆ ಗಣೇಶ ಚೌತಿ ಹಬ್ಬದ ಪೆಂಡಾಲ್ ನಿರ್ಮಿಸಲಾಗುತ್ತಿದೆ. 120 ಅಡಿ ಎತ್ತರದಲ್ಲಿ ಗಗನ ನೌಕೆಯನ್ನು ಹೋಲುವ ವಿಶೇಷ ಪೆಂಡಾಲ್ ಅನ್ನು ಕೋಲ್ಕತಾದಲ್ಲಿ ಕುಶಲಕರ್ಮಿಗಳು ನಿರ್ಮಿಸಿದ್ದು, ಜನಾಕರ್ಷಣೆ ಪಡೆಯುತ್ತಿದೆ.
-
#WATCH | Chhattisgarh: A pandal based on the theme of ISRO's Chandrayaan-3 Moon mission has been prepared for Ganesh Chaturthi in Raipur. (18.09) pic.twitter.com/JQND2VQqOY
— ANI MP/CG/Rajasthan (@ANI_MP_CG_RJ) September 18, 2023 " class="align-text-top noRightClick twitterSection" data="
">#WATCH | Chhattisgarh: A pandal based on the theme of ISRO's Chandrayaan-3 Moon mission has been prepared for Ganesh Chaturthi in Raipur. (18.09) pic.twitter.com/JQND2VQqOY
— ANI MP/CG/Rajasthan (@ANI_MP_CG_RJ) September 18, 2023#WATCH | Chhattisgarh: A pandal based on the theme of ISRO's Chandrayaan-3 Moon mission has been prepared for Ganesh Chaturthi in Raipur. (18.09) pic.twitter.com/JQND2VQqOY
— ANI MP/CG/Rajasthan (@ANI_MP_CG_RJ) September 18, 2023
ಛತ್ತೀಸ್‌ಗಢದ ರಾಯ್ಪುರದಲ್ಲೂ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಗಣೇಶನಿಗೆ ತಾತ್ಕಾಲಿಕವಾಗಿ ನಿರ್ಮಿಸಿರುವ ಗುಡಿಯನ್ನು (ಪೆಂಡಾಲ್) ಚಂದ್ರಯಾನ ಮಾದರಿಯಲ್ಲಿ ರಚಿಸಲಾಗಿದೆ.
ದೇಶದ ವಿವಿಧೆಡೆ ಗಣೇಶೋತ್ಸವ ಸಮಿತಿಗಳು ವಿವಿಧ ಬಗೆಯ ಥೀಮ್‌ಗಳಲ್ಲಿ ಆಕರ್ಷಕ ಪೆಂಡಾಲ್‌ಗಳನ್ನು ವಿನ್ಯಾಸಗೊಳಿಸಿ, ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಆಚರಿಸಲಾಗುತ್ತಿದೆ. ಕೋಲ್ಕತಾದಲ್ಲಿ ಕಾಳಿ ಬರಿಯಲ್ಲಿ ಚಂದ್ರಯಾನ ಮಿಷನ್ ಬಿಂಬಿಸುವಂತಹ ಥೀಮ್ ಆಧಾರಿತ ಪೆಂಡಾಲ್ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಧಾವಿಸುತ್ತಿದ್ದಾರೆ. 120 ಅಡಿ ಎತ್ತರ ಮತ್ತು 70 ಅಡಿ ಅಗಲವಿರುವ ಪಿಎಸ್ಎಲ್‌ವಿ ರಾಕೆಟ್ ಪ್ರತಿಕೃತಿಯನ್ನು ಇಲ್ಲಿ ನೋಡಬಹುದು.
ಕೋಲ್ಕತಾದ ಮೂವತ್ತು ಕುಶಲಕರ್ಮಿಗಳು ಪೆಂಡಾಲ್ ನಿರ್ಮಿಸಿದ್ದು, ಸಾವಿರಾರು ಬಿದಿರಿನ ಕಂಬಗಳು ಹಾಗೂ ಪ್ಲೈವುಡ್ ಬಳಸಲಾಗಿದೆ. ಹಗಲಿರುಳು ಶ್ರಮಿಸಿರುವ ಕುಶಲಕರ್ಮಿಗಳು ಇದನ್ನು ರಚಿಸಲು 45 ದಿನಗಳನ್ನು ತೆಗೆದುಕೊಂಡಿದ್ದಾರೆ.
-
ISRO yet to provide any statement at the moment pic.twitter.com/YRHMfdyEHM
— sbider-man (@saiboihours) September 18, 2023 " class="align-text-top noRightClick twitterSection" data="
">ISRO yet to provide any statement at the moment pic.twitter.com/YRHMfdyEHM
— sbider-man (@saiboihours) September 18, 2023ISRO yet to provide any statement at the moment pic.twitter.com/YRHMfdyEHM
— sbider-man (@saiboihours) September 18, 2023
ರಾಕೆಟ್ ಮಾದರಿ ಪೆಂಡಾಲ್ ವೈರಲ್: ಚೆನ್ನೈನ ಕೀಲ್ಕತ್ತಲೈನಲ್ಲಿರುವ ಗಣೇಶ ಪೆಂಡಾಲ್ ಒಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಚಂದ್ರಯಾನ 3ರ ರಾಕೆಟ್ ಮಾದರಿಯ ಪೆಂಡಾಲ್ ರಚಿಸಲಾಗಿದೆ. ವಿಶೇಷವೆಂದರೆ, ಇದು ಚಲಿಸುವ ಮಾದರಿಯಾಗಿದೆ. ರಾಕೆಟ್ ಹೊಗೆ ಹಾಗೂ ಉಗಿ ಹೊರಸೂಸಿಕೊಂಡು ಬಾಹ್ಯಾಕಾಶಕ್ಕೆ ಉಡಾವಣೆಯಾಗುವ ರೀತಿಯಲ್ಲಿ ಈ ರಾಕೆಟ್ ಪೆಂಡಾಲ್ ವಿನ್ಯಾಸವಿದೆ.
-
#WATCH | Assam: A pandal based on the theme of ISRO's Chandrayaan-3 Moon mission has been prepared for Ganesh Chaturthi in Guwahati. (18.09) pic.twitter.com/NXCG1Je4TG
— ANI (@ANI) September 18, 2023 " class="align-text-top noRightClick twitterSection" data="
">#WATCH | Assam: A pandal based on the theme of ISRO's Chandrayaan-3 Moon mission has been prepared for Ganesh Chaturthi in Guwahati. (18.09) pic.twitter.com/NXCG1Je4TG
— ANI (@ANI) September 18, 2023#WATCH | Assam: A pandal based on the theme of ISRO's Chandrayaan-3 Moon mission has been prepared for Ganesh Chaturthi in Guwahati. (18.09) pic.twitter.com/NXCG1Je4TG
— ANI (@ANI) September 18, 2023
ಅಸ್ಸಾಂನ ಗುವಾಹಟಿಯಲ್ಲಿ ಗಣೇಶ ಚತುರ್ಥಿ ಹಬ್ಬಕ್ಕೆ ಚಂದ್ರಯಾನ 3 ಥೀಮ್ ಆಧಾರಿತ ಪೆಂಡಾಲ್ ರಚಿಸಲಾಗಿದೆ.
ಅಯೋಧ್ಯೆ ರಾಮಮಂದಿರದ ಥೀಮ್: ಮಹಾರಾಷ್ಟ್ರದ ಪುಣೆಯಲ್ಲಿ ಅಯೋಧ್ಯೆಯ ರಾಮ ಮಂದಿರ ಮಾದರಿಯಲ್ಲಿ ಗಣೇಶ ಪೆಂಡಾಲ್ ನಿರ್ಮಿಸಲಾಗಿದೆ. ಶ್ರೀಮಂತ್ ದಗ್ದುಶೇಟ್ ಸಾರ್ವಜನಿಕ ಗಣಪತಿ ಟ್ರಸ್ಟ್‌ನವರು ಈ ಥೀಮ್ ರಚಿಸಿದ್ದು, ಇಂದಿನಿಂದ ಗಣಪತಿ ಹಬ್ಬ ಆಚರಿಸಲಿದ್ದಾರೆ. ಕಳೆದ ಎರಡು ತಿಂಗಳುಗಳ ಕಾಲ ರಾಮಮಂದಿರ ಪೆಂಡಾಲ್ ನಿರ್ಮಾಣಕ್ಕೆ ಕೆಲಸ ನಡೆದಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅಧ್ಯಕ್ಷತೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ.
ಇದನ್ನೂ ಓದಿ : ನ್ಯೂಸ್ ಪೇಪರ್ನಲ್ಲೇ 12 ಅಡಿ ಗಣೇಶನನ್ನು ಪ್ರತಿಷ್ಠಾಪಿಸಿದ ಸಿದ್ದಗಂಗಾ ಶಾಲೆಯ ವಿದ್ಯಾರ್ಥಿಗಳು: ಪರಿಸರ ಪ್ರೇಮ ಮೆರೆದ ಮಕ್ಕಳು