ಬೆಂಗಳೂರು: ಚಂದ್ರಯಾನ-3 ರ ಯಶಸ್ಸಿನ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೂರ್ಯನ ವಾತಾವರಣದ ಸ್ಥಿತಿಗತಿಯನ್ನು ಅಧ್ಯಯನ ಮಾಡುವ ಉದ್ದೇಶಕ್ಕೆ 'ಆದಿತ್ಯ L1' ಯೋಜನೆಗೆ ತಯಾರಿ (ISRO Aditya L1 Mission) ನಡೆಸುತ್ತಿದೆ. ಈ ನಿಟ್ಟಿನಲ್ಲಿ ಉಡ್ಡಯನ ಪೂರ್ವಾಭ್ಯಾಸ ಮತ್ತು ರಾಕೆಟ್‌ನ ಆಂತರಿಕ ತಪಾಸಣಾ ಕಾರ್ಯ ಪೂರ್ಣಗೊಂಡಿದೆ ಎಂದು ಇಸ್ರೋ ತಿಳಿಸಿದೆ.
ಆಂಧ್ರ ಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್1 ಶನಿವಾರ (ಸೆಪ್ಟೆಂಬರ್ 2) ಬೆಳಗ್ಗೆ 11:50ಕ್ಕೆ ಉಡ್ಡಯನಗೊಳ್ಳಲಿದೆ. ಕರೋನಾಗ್ರಫಿ ಉಪಕರಣದ ಸಹಾಯದಿಂದ ಸೌರ ವಾತಾವರಣವನ್ನು ಆಳವಾಗಿ ಅಧ್ಯಯನ ಮಾಡುವುದು ಮಹತ್ವದ ಯೋಜನೆಯ ಹಿಂದಿನ ಉದ್ದೇಶ. ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಲಾಗ್ರೇಂಜ್ ಪಾಯಿಂಟ್ ಎಲ್-1 ಸುತ್ತ ಕಕ್ಷೆಗೆ ಈ ನೌಕೆಯನ್ನು ಹಾರಿಸಲಾಗುತ್ತದೆ. ಇದು ಸೂರ್ಯನ ಕುರಿತು ಸಂಶೋಧನೆಗಾಗಿ ಭಾರತದ ಮೊದಲ ವೀಕ್ಷಣಾಲಯವಾಗಿ ಕಾರ್ಯನಿರ್ವಹಿಸುತ್ತದೆ. ಆದಿತ್ಯ ಎಲ್-1 ಅನ್ನು ದೇಶದ ವಿವಿಧ ರಾಷ್ಟ್ರೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಇಸ್ರೋ ಇತ್ತೀಚೆಗೆ ಹೇಳಿದೆ.
-
PSLV-C57/Aditya-L1 Mission:
— ISRO (@isro) August 30, 2023 " class="align-text-top noRightClick twitterSection" data="
The preparations for the launch are progressing.
The Launch Rehearsal - Vehicle Internal Checks are completed.
Images and Media Registration Link https://t.co/V44U6X2L76 #AdityaL1 pic.twitter.com/jRqdo9E6oM
">PSLV-C57/Aditya-L1 Mission:
— ISRO (@isro) August 30, 2023
The preparations for the launch are progressing.
The Launch Rehearsal - Vehicle Internal Checks are completed.
Images and Media Registration Link https://t.co/V44U6X2L76 #AdityaL1 pic.twitter.com/jRqdo9E6oMPSLV-C57/Aditya-L1 Mission:
— ISRO (@isro) August 30, 2023
The preparations for the launch are progressing.
The Launch Rehearsal - Vehicle Internal Checks are completed.
Images and Media Registration Link https://t.co/V44U6X2L76 #AdityaL1 pic.twitter.com/jRqdo9E6oM
ಬೆಳಕಿನ ಪರಿಣಾಮದ ಅಧ್ಯಯನ: ಆದಿತ್ಯ ಎಲ್1, ಇದು 1,500 ಕೆ.ಜಿ ತೂಕವಿರುವ ಉಪಗ್ರಹ. ಸೌರ ಚಟುವಟಿಕೆ ಮತ್ತು ಬಾಹ್ಯಾಕಾಶ ವಾತಾವರಣವನ್ನು ಅಧ್ಯಯನ ಮಾಡಲಿದೆ. ನೌಕೆಯು 7 ಪೇಲೋಡ್‌ಗಳನ್ನು ಹೊಂದಿದೆ. ಇದರಲ್ಲಿ ಮುಖ್ಯವಾಗಿ, ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್, ಸೌರ ಅವೆಲೆಟ್ ಇಮೇಜಿಂಗ್ ಟೆಲಿಸ್ಕೋಪ್, ಆದಿತ್ಯ ಸೌರಮಾರುತ ಕಣ ಪ್ರಯೋಗ, ಆದಿತ್ಯಗಾಗಿ ಪ್ಲಾಸ್ಮಾ ವಿಶ್ಲೇಷಕ ಪ್ಯಾಕೇಜ್, ಸೌರ-ಕಡಿಮೆ-ಶಕ್ತಿಯ ಎಕ್ಸ್-ರೇ ಸ್ಪೆಕ್ಟ್ರೋಮೀಟರ್, ಹೈ ಎನರ್ಜಿ ಎಲ್-1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ ಮತ್ತು ಮ್ಯಾಗ್ನೆಟೋಮೀಟರ್ ಇರಲಿದೆ. ಈ ಪೇಲೋಡ್‌ಗಳನ್ನು ಸೂರ್ಯನಿಂದ ಹೊರಸೂಸುವ ಅತ್ಯಂತ ಶಕ್ತಿಶಾಲಿ ಬೆಳಕಿನ ಪರಿಣಾಮಗಳನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಲಾಗಿದೆ.
-
Chandrayaan-3 Mission:
— ISRO (@isro) August 30, 2023 " class="align-text-top noRightClick twitterSection" data="
Smile, please📸!
Pragyan Rover clicked an image of Vikram Lander this morning.
The 'image of the mission' was taken by the Navigation Camera onboard the Rover (NavCam).
NavCams for the Chandrayaan-3 Mission are developed by the Laboratory for… pic.twitter.com/Oece2bi6zE
">Chandrayaan-3 Mission:
— ISRO (@isro) August 30, 2023
Smile, please📸!
Pragyan Rover clicked an image of Vikram Lander this morning.
The 'image of the mission' was taken by the Navigation Camera onboard the Rover (NavCam).
NavCams for the Chandrayaan-3 Mission are developed by the Laboratory for… pic.twitter.com/Oece2bi6zEChandrayaan-3 Mission:
— ISRO (@isro) August 30, 2023
Smile, please📸!
Pragyan Rover clicked an image of Vikram Lander this morning.
The 'image of the mission' was taken by the Navigation Camera onboard the Rover (NavCam).
NavCams for the Chandrayaan-3 Mission are developed by the Laboratory for… pic.twitter.com/Oece2bi6zE
ಲ್ಯಾಂಡರ್ ಫೋಟೋ ತೆಗೆದ ರೋವರ್: ಮತ್ತೊಂದೆಡೆ, ಪ್ರಗ್ಯಾನ್ ರೋವರ್ ತನ್ನನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ ವಿಕ್ರಮ್ ಲ್ಯಾಂಡರ್ ಚಿತ್ರ ಕ್ಲಿಕ್ಕಿಸಿದೆ. ಈ ಫೋಟೋಗಳನ್ನು ಇಸ್ರೋ ಹಂಚಿಕೊಂಡಿದೆ. ರೋವರ್‌ನಲ್ಲಿರುವ ನ್ಯಾವಿಗೇಷನ್ ಕ್ಯಾಮರಾ ಚಿತ್ರಗಳನ್ನು ತೆಗೆದಿರುವುದಾಗಿ ಮಾಹಿತಿ ಒದಗಿಸಿದೆ.
ಇದನ್ನೂ ಓದಿ: Explained: ಇಸ್ರೋ ಮಹತ್ವಾಕಾಂಕ್ಷೆಯ ಆದಿತ್ಯ L1 ಮಿಷನ್ ಏನೆಲ್ಲ ಅಧ್ಯಯನ ನಡೆಸಲಿದೆ ಗೊತ್ತಾ?