ನವದೆಹಲಿ: "ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್"(ಇಸ್ಕಾನ್) ವಿಶ್ವದಲ್ಲೇ ಪ್ರಥಮ ಬಾರಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು(ವರ್ಚುವಲ್) ಆಯೋಜಿಸಲು ದೊಡ್ಡ ಮಟ್ಟದ ಸಿದ್ಧತೆಗಳನ್ನು ಮಾಡುತ್ತಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷತೆಯನ್ನು ಜಗತ್ತಿಗೆ ತಿಳಿಸಲು ಆಗಸ್ಟ್ 1 ರಿಂದ 20 ರವರೆಗೆ ಸಾಂಸ್ಕೃತಿಕ ಹಬ್ಬ/ಕಾರ್ಯಕ್ರಮ (Cultural fest) ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ. 7 ಖಂಡಗಳ 80 ದೇಶಗಳ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ನಿಮ್ಮೆಲ್ಲರಿಗೂ ಸ್ವಾಗತ, ನೀವೆಲ್ಲರೂ ಭಾಗವಹಿಸುವ ನಿರೀಕ್ಷೆಯಿದೆ ಎಂದು ಇಸ್ಕಾನ್ ಆಮಂತ್ರಣ ನೀಡಿದೆ.
ಈ ಆಚರಣೆಯ ಅಂಗವಾಗಿ 50ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಇದರಲ್ಲಿ 300ಕ್ಕೂ ಹೆಚ್ಚು ಉಪವಿಭಾಗಗಳಿವೆ. 4 ವರ್ಷದ ಮಕ್ಕಳಿಂದ ಹಿಡಿದು 80 ವರ್ಷ ವಯಸ್ಸಿನವರು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಇದಕ್ಕೆ ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಮಾಡಬೇಕಾಗಿರುವುದು-ಅವರ ಆಯ್ಕೆಯ ಯಾವುದೇ ವಿಷಯದ ಕುರಿತು ವಿಡಿಯೋವನ್ನು ರಚಿಸಿ ಮತ್ತು ಅದನ್ನು ಆನ್‌ಲೈನ್‌ನಲ್ಲಿ ಕಳುಹಿಸುವುದು.
ಇದನ್ನೂ ಓದಿ: ಈ ಮಹಿಳಾ ಪೊಲೀಸ್ ಠಾಣೆಗೆ ರಾತ್ರಿ 8 ಗಂಟೆಯ ನಂತರ ಪುರುಷರಿಗೆ ನೋ ಎಂಟ್ರಿ!
ಅವುಗಳನ್ನು ಪರಿಶೀಲಿಸಿ ವಿಜೇತರನ್ನು ಘೋಷಿಸಲಾಗುವುದು. ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ವಿಜೇತರಿಗೆ ಪ್ರಮಾಣ ಪತ್ರದೊಂದಿಗೆ ಬಹುಮಾನ ನೀಡಲಾಗುವುದು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗಾಗಿ- 8919717982, 9701839381, ಮೈಲ್- cmkdasa@gmail.com ಗೆ ಸಂಪರ್ಕಿಸಲು ಸೂಚಿಸಲಾಗಿದೆ.