ETV Bharat / bharat

Low Back Pain Sciatica: ಗರ್ಭಾವಸ್ಥೆ ವೇಳೆ ಸೊಂಟ ನೋವು, ಇಲ್ಲಿವೆ ಕೆಲ ಸಲಹೆಗಳು..

author img

By

Published : Nov 18, 2021, 4:01 PM IST

ಸೊಂಟ, ತೊಡೆ, ಕಾಲು ಹೀಗೆ ಬೆನ್ನಿನ ಕೆಳಭಾಗ ಬರುವ ನೋವಿಗೆ ಸಿಯಾಟಿಕಾ ನೋವು ಅಥವಾ ಸೊಂಟದ ಬೆನ್ನುಮೂಳೆಯ ನೋವು ಎಂದು ಕರೆಯಲಾಗುತ್ತದೆ. ಗರ್ಭಿಣಿಯರನ್ನು ಕಾಡುವ ಅತಿದೊಡ್ಡ ಸಮಸ್ಯೆಗಳಲ್ಲಿ ಇದೂ ಕೂಡ ಒಂದಾಗಿದೆ. ಇದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ..

Low Back Pain Sciatica
Low Back Pain Sciatica

ಶೇ.50 ರಿಂದ ಶೇ.80ರಷ್ಟು ಗರ್ಭಿಣಿಯರು ಸೊಂಟ ನೋವು ಅಥವಾ ಬೆನ್ನಿನ ಕೆಳಭಾಗದಲ್ಲಿ ನೋವು (Low Back Pain During Pregnancy) ಅನುಭವಿಸುತ್ತಾರೆ. ಗರ್ಭಾವಸ್ಥೆ ವೇಳೆ ತೂಕ ಹೆಚ್ಚಳವಾಗುವುದರಿಂದ ಸ್ನಾಯುಗಳ ಮೇಲೆ ಹೆಚ್ಚು ಒತ್ತಡ ಉಂಟಾಗುತ್ತದೆ. ಗರ್ಭಾವಸ್ಥೆಯ ವೇಳೆ ಬರುವ ಈ ರೀತಿಯ ನೋವಿಗೆ ಸ್ನಾಯುಗಳ ಒತ್ತಡ, ಹಾರ್ಮೋನ್​ಗಳ ಬದಲಾವಣೆ ಸೇರಿ ಹಲವಾರು ಕಾರಣಗಳಿವೆ.

ಸಿಯಾಟಿಕಾ ನೋವು (Sciatica Pain)

ಸೊಂಟ, ತೊಡೆ, ಕಾಲು ಹೀಗೆ ಬೆನ್ನಿನ ಕೆಳಭಾಗ ಬರುವ ನೋವಿಗೆ ಸಿಯಾಟಿಕಾ ನೋವು ಅಥವಾ ಸೊಂಟದ ಬೆನ್ನುಮೂಳೆಯ ನೋವು ಎಂದು ಕರೆಯಲಾಗುತ್ತದೆ. ಸಿಯಾಟಿಕಾವನ್ನು ಲುಂಬೊಸ್ಯಾಕ್ರಲ್ ರೇಡಿಕ್ಯುಲರ್ ಸಿಂಡ್ರೋಮ್ ಎಂದೂ ಕರೆಯಲಾಗುತ್ತದೆ. ಗರ್ಭಿಣಿಯರನ್ನು ಕಾಡುವ ಅತಿದೊಡ್ಡ ಸಮಸ್ಯೆಗಳಲ್ಲಿ ಇದೂ ಕೂಡ ಒಂದಾಗಿದೆ. ಇದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಷ್ಟು..

ಗರ್ಭಾವಸ್ಥೆಯಲ್ಲಿ ಸಿಯಾಟಿಕ್ ನೋವಿನ ಲಕ್ಷಣಗಳು

  • ನಿಮ್ಮ ಕೆಳ ಬೆನ್ನಿನಿಂದ ಪೃಷ್ಠ, ಪೃಷ್ಠದಿಂದ ತೊಡೆ, ತೊಡೆಯಿಂದ ಪಾದದ ಭಾಗಗಳಲ್ಲಿ ಆಗಾಗ ಅಥವಾ ನಿರಂತರ ನೋವು ಬರುವುದು
  • ತೀಕ್ಷ್ಣವಾದ ಅಥವಾ ಸುಡುವ ನೋವು, ಮರಗಟ್ಟುವಿಕೆ, ಪಾದದಲ್ಲಿ ದೌರ್ಬಲ್ಯ
  • ನಡೆಯಲು, ನಿಲ್ಲಲು ಅಥವಾ ಕುಳಿತುಕೊಳ್ಳಲು ತೊಂದರೆ

ಸಿಯಾಟಿಕ್ ನೋವಿಗೆ ಕಾರಣಗಳು

  • ಶ್ರೋಣಿಯ ಮೂಳೆ ನೋವು
  • ಪಿರಿಫಾರ್ಮಿಸ್ ಸಿಂಡ್ರೋಮ್
  • ದೇಹದ ತೂಕ ಹೆಚ್ಚಳ
  • ಸ್ನಾಯುಗಳ ಒತ್ತಡ
  • ಪಿರಿಫಾರ್ಮಿಸ್ ಸಿಂಡ್ರೋಮ್
  • ಬೆನ್ನುಮೂಳೆಯ ಕಿರಿದಾಗುವಿಕೆ
  • ಹರ್ನಿಯೇಟೆಡ್ ಡಿಸ್ಕ್‌

ಇದನ್ನೂ ಓದಿ: ಲೈಂಗಿಕ ಕ್ರಿಯೆ ನಡುವೆ ಅಂತರ.. ನಿಮ್ಮ ಸಂಬಂಧದಲ್ಲಿ ಪ್ರಣಯ, ತಾಜಾತನ ಮರಳಿ ತರಬಹುದು

ಶ್ರೋಣಿಯ ಮೂಳೆ ನೋವು (Pelvic Girdle Pain)

ಇದು ಶ್ರೋಣಿಯ ಕವಚವನ್ನು ರೂಪಿಸುವ ಕೀಲುಗಳಲ್ಲಿನ ನೋವಾಗಿದೆ. ಇದು ಮುಂಭಾಗದಲ್ಲಿ ಸಿಂಫಿಸಿಸ್ ಪ್ಯೂಬಿಸ್ ಜಾಯಿಂಟ್ (SPJ) ಮತ್ತು ಹಿಂಭಾಗದಲ್ಲಿ ಸ್ಯಾಕ್ರೊಲಿಯಾಕ್ ಕೀಲುಗಳನ್ನು (SIJ) ಒಳಗೊಂಡಿದೆ. ಗರ್ಭಾವಸ್ಥೆಗೆ ಸಂಬಂಧಿಸಿದ ಬನ್ನಿನ ಕೆಳಭಾಗದ ನೋವೇ ಶ್ರೋಣಿಯ ಮೂಳೆ ನೋವು (PGP) ಆಗಿದೆ. ಈ ನೋವು ನಿಮ್ಮ ಹೊಟ್ಟೆಯ ಕೆಳಗೆ ಅಥವಾ ನಿಮ್ಮ ಕೆಳಗಿನ ಬೆನ್ನಿನ ಒಂದು ಬದಿಯಲ್ಲಿ ಅಥವಾ ಎರಡೂ ಬದಿಗಳಲ್ಲಿ ಕಂಡುಬರುತ್ತದೆ.

ಈ ನೋವಿನ ಲಕ್ಷಣಗಳು

  • ನಡೆಯಲು, ವಾಹನಗಳಲ್ಲಿ ಕುಳಿತು ಚಲಿಸಲು ತೊಂದರೆ
  • ಒಂದು ಕಾಲಿನ ಮೇಲೆ ನಿಂತಿರುವಾಗ ನೋವು (ಉದಾಹರಣೆ ಮೆಟ್ಟಿಲುಗಳನ್ನು ಹತ್ತುವಾಗ)
  • ಸೊಂಟದ ಚಲನೆ ವೇಳೆ ನೋವು (ಹಾಸಿಗೆಯಲ್ಲಿ ಅತ್ತ ತಿರುಗಿ ಇತ್ತೆ ತಿರುಗಿ ಮಲಗುವ ವೇಳೆ)
  • ದೈನಂದಿನ ಜೀವನದ ಸಾಮಾನ್ಯ ಚಟುವಟಿಕೆಗಳಲ್ಲಿ ನೋವು
  • ಲೈಂಗಿಕ ಸಂಭೋಗದ ಸಮಯದಲ್ಲಿ ನೋವು

ಪಿರಿಫಾರ್ಮಿಸ್ ಸಿಂಡ್ರೋಮ್ (Piriformis syndrome)

ಇದು ಪೃಷ್ಠದ ಸ್ನಾಯುಗಳಲ್ಲಿ ಬರುವ ಒಂದು ಸಮಸ್ಯೆಯಾಗಿದೆ. ಗರ್ಭಾವಸ್ಥೆಯಲ್ಲಿ ಸಿಯಾಟಿಕ್ ನೋವಿಗೆ ಇದು ಸಾಮಾನ್ಯ ಕಾರಣವಾಗಿದೆ. ಶ್ರೋಣಿಯ ಮೂಳೆ ನೋವಿನ ಜೊತೆಯಲ್ಲಿಯೇ ಪೃಷ್ಠದ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುವುದರಿಂದ ನಿಮಗೆ ಕಿರಿಕಿರಿ ಹೆಚ್ಚಾಗಬಹುದು. ಇದು ಸ್ನಾಯುವಿನ ಬಿಗಿತ ಮತ್ತು ಗರ್ಭಾವಸ್ಥೆಯಲ್ಲಿ ಭಂಗಿಯಲ್ಲಿನ ಬದಲಾವಣೆಯಿಂದಾಗಿ ಬರುತ್ತದೆ.

ಮಗುವಿನ ತೂಕ-ಸ್ಥಾನದ ಮೇಲೆಯೂ ಪೃಷ್ಠದ ಸ್ನಾಯುಗಳಲ್ಲಿ ನೋವು ಸಂಬಂಧ ಹೊಂದಿರುತ್ತದೆ. ಸೊಂಟ ಮತ್ತು ಸೊಂಟದ ಕೀಲುಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ. ಹೀಗಾಗಿ ದೀರ್ಘಕಾಲ ಕುಳಿತುಕೊಳ್ಳುವುದು ಸಿಯಾಟಿಕ್ ನೋವಿನ ಅಪಾಯವನ್ನು ಹೆಚ್ಚಿಸುತ್ತದೆ. ಗರ್ಭಾವಸ್ಥೆಯಲ್ಲಿ ಪಡೆದ ತೂಕವನ್ನು ಒಳಗೊಂಡಂತೆ ತೂಕ ಹೆಚ್ಚಾಗುತ್ತದೆ.

ಇದನ್ನೂ ಓದಿ: Health Tips : ನೀವು ಸಕ್ಕರೆ ಪ್ರಿಯರೇ?.. ಅತಿ ಬಳಕೆಗೂ ಮೊದಲು ಕೊಂಚ ಯೋಚಿಸೋದು ಒಳ್ಳೇದು..

ಈ ಸಮಸ್ಯೆಗಳಿಗೆ ಪರಿಹಾರ/ಸಾಮಾನ್ಯ ಸಲಹೆಗಳು..

  • ದೀರ್ಘಕಾಲ ಕುಳಿತುಕೊಳ್ಳುವುದನ್ನು ತಪ್ಪಿಸಿ
  • ನೋವು ಉತ್ಪ್ರೇಕ್ಷಿತ ಚಟುವಟಿಕೆಯನ್ನು ಮಾಡುವುದನ್ನು ತಪ್ಪಿಸಿ
  • ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಭಾರವನ್ನು ಎತ್ತಬೇಡಿ
  • ನೇರವಾದ ಭಂಗಿಯಲ್ಲಿರಿ
  • ಪರಿಣಾಮ ಬೀರದ ಬದಿಯಲ್ಲಿ ಮಲಗುವುದು
  • ಬೆಂಬಲಕ್ಕಾಗಿ ದಿಂಬನ್ನು ಬಳಸಿ
  • ವೈದ್ಯರು ಸೂಚಿಸಿದ ಆಸನಗಳನ್ನು ಮಾಡಿ

ರೋಗಲಕ್ಷಣಗಳು ಮುಂದುವರಿದರೆ, ನಿಮ್ಮ ಪ್ರಸೂತಿ ವೈದ್ಯರನ್ನು ಸಂಪರ್ಕಿಸಿ. ಈ ನೋವುಗಳನ್ನು ಸಾಮಾನ್ಯ ನೋವು ಎಂದು ನಿರ್ಲಕ್ಷ್ಯ ಮಾಡಬಾರದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.