ಹೈದರಾಬಾದ್: ದೇಶದಲ್ಲಿ ಇದೀಗ ಮತ್ತೊಮ್ಮೆ ಟೂಲ್‌ಕಿಟ್ ಹೆಸರು ಕೇಳಿ ಬಂದಿದೆ. ಈ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ರೈತ ವಿರೋಧ ಕಾಯ್ದೆಗಳ ವೇಳೆ ಭುಗಿಲೆದ್ದಿದ್ದ ಟೂಲ್‌ಕಿಟ್ ಸದ್ಯ ಬೇರೆ ರೂಪ ಪಡೆದುಕೊಂಡಿದ್ದು, ಕಾಂಗ್ರೆಸ್ ಹಾಗೂ ಆಡಳಿತ ಪಕ್ಷ ಬಿಜೆಪಿ ನಡುವೆ ವಾಕ್ಸಮರಕ್ಕೆ ಈ ಪದ ಕಾರಣವಾಗಿದೆ.
ಭಾರತದಲ್ಲಿ ಹುಟ್ಟಿಕೊಂಡಿರುವ ರೂಪಾಂತರಿ ಕೊರೊನಾ ವೈರಸ್ಗೆ ಮೋದಿ ರೂಪಾಂತರಿ ಎಂದು ಕರೆಯುವ ಮೂಲಕ ಕಾಂಗ್ರೆಸ್ ಪ್ರಧಾನಿ ಮೋದಿ ಅವರ ವರ್ಚಸ್ಸಿಗೆ ದಕ್ಕೆ ಉಂಟು ಮಾಡ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಕಾಂಗ್ರೆಸ್ ವಿರುದ್ಧ ಬಿಜೆಪಿ ಗರಂ
ಕಾಂಗ್ರೆಸ್ ಪಕ್ಷದ ಪ್ರಚಾರಕ್ಕಾಗಿ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡ್ತಿದ್ದು, ಅದಕ್ಕೋಸ್ಕರ ಪತ್ರಕರ್ತರ ಸಹಾಯ ಪಡೆದುಕೊಳ್ಳುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್ ರೂಪಾಂತರಿಗೆ ಇಂಡಿಯಾ ಮತ್ತು ಮೋದಿ ತಳಿ ಎಂದು ಕರೆಯುವಂತೆ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ನಿನ್ನೆ ಟ್ವೀಟರ್ನಲ್ಲಿ ದೂರಿದ್ದರು.
-
Friends yesterday Congress wanted to know who’s the Author of the toolkit.
— Sambit Patra (@sambitswaraj) May 19, 2021 " class="align-text-top noRightClick twitterSection" data="
Pls check the properties of the Paper.
Author: Saumya Varma
Who’s Saumya Varma ...
The Evidences speak for themselves:
Will Sonia Gandhi & Rahul Gandhi reply? pic.twitter.com/hMtwcuRVLW
">Friends yesterday Congress wanted to know who’s the Author of the toolkit.
— Sambit Patra (@sambitswaraj) May 19, 2021
Pls check the properties of the Paper.
Author: Saumya Varma
Who’s Saumya Varma ...
The Evidences speak for themselves:
Will Sonia Gandhi & Rahul Gandhi reply? pic.twitter.com/hMtwcuRVLWFriends yesterday Congress wanted to know who’s the Author of the toolkit.
— Sambit Patra (@sambitswaraj) May 19, 2021
Pls check the properties of the Paper.
Author: Saumya Varma
Who’s Saumya Varma ...
The Evidences speak for themselves:
Will Sonia Gandhi & Rahul Gandhi reply? pic.twitter.com/hMtwcuRVLW
ಬಿಜೆಪಿಯಿಂದ ಕೋವಿಡ್ ಪರಿಸ್ಥಿತಿ ದುರುಪಯೋಗ ಎಂದ ಕಾಂಗ್ರೆಸ್
ಇದಕ್ಕೆ ತಿರುಗೇಟು ನೀಡಿದ್ದ ಕಾಂಗ್ರೆಸ್ ಸಂಸೋಧನಾ ಇಲಾಖೆ ಮುಖ್ಯಸ್ಥ ರಾಜೀವ್ ಗೌಡ, ಬಿಜೆಪಿ ಕೋವಿಡ್ ಪರಿಸ್ಥಿತಿ ದುರುಪಯೋಗ ಪಡೆದುಕೊಳ್ಳಲು ಟೂಲ್‌ಕಿಟ್ ಪ್ರಚಾರ ಮಾಡ್ತಿದೆ. ಡೆಡ್ಲಿ ವೈರಸ್ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡುವ ಬದಲು ಸುಳ್ಳು ಆರೋಪ ಮಾಡುತ್ತಿದೆ ಎಂದಿದ್ದರು. ಅಂತಹ ಟೂಲ್‌ಕಿಟ್ ಇಲ್ಲ. ಅದು ಕೇವಲ ಬಿಜೆಪಿಯ ಕಪೋಲಕಲ್ಪಿತ ಪ್ರಚಾರ ಎಂದಿದೆ. ಜತೆಗೆ ಬಿಜೆಪಿ ಸಂಬಿತ್ ಪಾತ್ರಾ ವಿರುದ್ಧ ದೂರು ದಾಖಲು ಮಾಡುವುದಾಗಿ ತಿಳಿಸಿದ್ದರು.
ಭಾರತದಲ್ಲಿ ಸದ್ಯ ಕಂಡು ಬಂದಿರುವ ಬಿ.1.617 ವೈರಸ್ನ್ನ ಮೋದಿ ವೈರಸ್ ಎಂದು ಉಲ್ಲೇಖಿಸುವಂತೆ ಕಾಂಗ್ರೆಸ್ ತನ್ನ ಕಾರ್ಯಕರ್ತರಿಗೆ ತಿಳಿಸಿದೆ ಎಂದು ಹೇಳಲಾಗಿದೆ.
-
AICC Research Dept Chairman Shri @rajeevgowda & INC SM Chairman Shri @rohanrgupta have filed an FIR against BJP President Shri @JPNadda, BJP National Spokesperson Shri @sambitswaraj & others for forgery & fabricated content. #BJPLiesIndiaCries pic.twitter.com/fXmSmQm3ld
— Congress (@INCIndia) May 18, 2021 " class="align-text-top noRightClick twitterSection" data="
">AICC Research Dept Chairman Shri @rajeevgowda & INC SM Chairman Shri @rohanrgupta have filed an FIR against BJP President Shri @JPNadda, BJP National Spokesperson Shri @sambitswaraj & others for forgery & fabricated content. #BJPLiesIndiaCries pic.twitter.com/fXmSmQm3ld
— Congress (@INCIndia) May 18, 2021AICC Research Dept Chairman Shri @rajeevgowda & INC SM Chairman Shri @rohanrgupta have filed an FIR against BJP President Shri @JPNadda, BJP National Spokesperson Shri @sambitswaraj & others for forgery & fabricated content. #BJPLiesIndiaCries pic.twitter.com/fXmSmQm3ld
— Congress (@INCIndia) May 18, 2021
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಕೊರೊನಾ ವೈರಸ್ ಹುಟ್ಟಿದ್ದೇ ಚೀನಾದಲ್ಲಿ. ಆದರೆ ಕಾಂಗ್ರೆಸ್ ನಾಯಕರು ಅದಕ್ಕೆ ಚೀನಾ ವೈರಸ್ ಅನ್ನಲಿಲ್ಲ. ಪ್ರಧಾನಿ ಮೋದಿಯವರನ್ನ ತೇಜೋವಧೆ ಮಾಡುವ ಭರದಲ್ಲಿ ಈ ರೀತಿಯಾಗಿ ಹೇಳುತ್ತಿದ್ದಾರೆ ಎಂದಿದ್ದರು.
ಇದು ರಾಷ್ಟ್ರ ವಿರೋಧಿಗಳ ಟೂಲ್‌ಕಿಟ್ ಅಲ್ಲವೇ: ಬಿಜೆಪಿ ಪ್ರಶ್ನೆ
ಇದೇ ವಿಷಯವನ್ನಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಭಾರತೀಯ ಜನತಾ ಪಾರ್ಟಿ ವಾಗ್ದಾಳಿ ನಡೆಸಿದೆ. ಪಕ್ಷದ ವಕ್ತಾರ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಸುನಿಲ್ ದಿಯೋಧರ್, ವಿರೋಧ ಪಕ್ಷವು ತನ್ನ ರಾಜಕೀಯ ಮಹತ್ವಾಕಾಂಕ್ಷೆಗಳನ್ನ ಹೇಗೆ ಬಲಪಡಿಸಲು ಪ್ರಯತ್ನಿಸುತ್ತಿದೆ ಎಂಬುದನ್ನ ಜನರು ನೋಡಬಹುದು. ಆರೋಗ್ಯ ಬಿಕ್ಕಟ್ಟಿನ ಮಧ್ಯೆ, ಇದು ರಾಷ್ಟ್ರ ವಿರೋಧಿಗಳ ಟೂಲ್‌ಕಿಟ್ ಅಲ್ಲವೇ? ಕೋವಿಡ್ ವಿರುದ್ಧ ಹೋರಾಡುವ ಬದಲು ಮೋದಿ ವಿರುದ್ಧ ಹೋರಾಡುವುದು ಮತ್ತು ಭಾರತವನ್ನ ಅಪ ಪ್ರಚಾರ ಮಾಡುವುದು ಕಾಂಗ್ರೆಸ್ನ ಕಾರ್ಯಸೂಚಿಯಾಗಿದೆ ಎಂದಿದ್ದಾರೆ.
-
BJP is propagating a fake "toolkit" on “COVID-19 mismanagement” & attributing it to AICC Research Department. We are filing an FIR for forgery against @jpnadda & @sambitswaraj
— Rajeev Gowda (@rajeevgowda) May 18, 2021 " class="align-text-top noRightClick twitterSection" data="
When our country is devastated by COVID, instead of providing relief, BJP shamelessly concocts forgeries
">BJP is propagating a fake "toolkit" on “COVID-19 mismanagement” & attributing it to AICC Research Department. We are filing an FIR for forgery against @jpnadda & @sambitswaraj
— Rajeev Gowda (@rajeevgowda) May 18, 2021
When our country is devastated by COVID, instead of providing relief, BJP shamelessly concocts forgeriesBJP is propagating a fake "toolkit" on “COVID-19 mismanagement” & attributing it to AICC Research Department. We are filing an FIR for forgery against @jpnadda & @sambitswaraj
— Rajeev Gowda (@rajeevgowda) May 18, 2021
When our country is devastated by COVID, instead of providing relief, BJP shamelessly concocts forgeries
ಎನ್ಐಎ ತನಿಖೆ ನಡೆಸುವಂತೆ ಪಿಐಎಲ್
ಕೋವಿಡ್ ಸಾಂಕ್ರಾಮಿಕ ರೋಗದ ಬಗ್ಗೆ ಟೂಲ್‌ಕಿಟ್ ಪ್ರಸ್ತಾಪವಾಗಿದ್ದು, ಈ ಬಗ್ಗೆ ರಾಷ್ಟ್ರೀಯ ತನಖಾ ಸಂಸ್ಥೆ ತನಿಖೆ ನಡೆಸಬೇಕು ಮತ್ತು ಆರೋಪಿಗಳು ನಿಜ ಎಂದು ಕಂಡು ಬಂದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಮಾನತುಗೊಳಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಲಾಯರ್ ಶಂಶಾಕ್ ಶೇಖರ್ ಅವರು ಸುಪ್ರೀಂಕೋರ್ಟ್ನಲ್ಲಿ ಈ ಅರ್ಜಿ ಸಲ್ಲಿಕೆ ಮಾಡಿದ್ದಾರೆ.