ETV Bharat / bharat

ಆಭಿಮತ.. ಉಕ್ರೇನ್​ನ ವಿನಾಶವೇ ರಷ್ಯಾದ ಉದ್ದೇಶನಾ? - Destruction of Ukraine's oil plants

Russia-Ukraine War effect.. ಉಕ್ರೇನ್‌ನಲ್ಲಿ ಕರ್ನಾಟಕದ ಹಾವೇರಿ ಜಿಲ್ಲೆಯ ಚಳಗೇರಿಯ ವೈದ್ಯ ವಿದ್ಯಾರ್ಥಿ ನವೀನ್‌ ಶೆಲ್ ದಾಳಿಯಿಂದ ಮೃತಪಟ್ಟಿರುವ ಬೆನ್ನಲ್ಲೇ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿದೆ. ಮಾಧ್ಯಮಗಳು ಈ ವಿಷಯವನ್ನು ಭಾವನಾತ್ಮಕವಾಗಿ ತೆಗೆದುಕೊಂಡಿವೆ. ಆದ್ರೆ ಈ ಘಟನೆಗೆ ಕಾರಣ ಮತ್ತು ಇದು ಜಾಗತಿಕ ಆರ್ಥಿಕತೆಯ ಮೇಲೆ ಬೀರುವ ಪ್ರಭಾವ ಸೇರಿದಂತೆ ಎಲ್ಲಾ ಪರಿಣಾಮಗಳ ವಿಶ್ಲೇಷಣೆ ಇಲ್ಲಿದೆ..

ಗಿರೀಶ್​ ಲಿಂಗಣ್ಣ
ಗಿರೀಶ್​ ಲಿಂಗಣ್ಣ
author img

By

Published : Mar 2, 2022, 7:53 PM IST

Updated : Mar 2, 2022, 8:17 PM IST

ರಣಾಂಗಣದಲ್ಲಿ ರಷ್ಯಾದಂತೆ ಉಕ್ರೇನ್ ಕೂಡ ಏಕಾಂಗಿಯಾಗಿದೆ. ಯುದ್ಧದಲ್ಲಿ ಪಶ್ಚಿಮದ ದೇಶಗಳು ತಮಗೇನೂ ಸಹಾಯ ಮಾಡಿಲ್ಲ ಎಂದು ಉಕ್ರೇನ್ ಅಧ್ಯಕ್ಷರು ಹೇಳಿರುವುದು ಸರಿಯಾಗಿಯೇ ಇದೆ. ರಷ್ಯಾದ ಮೇಲೆ ಪಶ್ಚಿಮದ ದೇಶಗಳು ಮತ್ತು ಇಯು ವಿಧಿಸುತ್ತಿರುವ ನಿರ್ಬಂಧಗಳು ಸಣ್ಣ ರಾಷ್ಟ್ರವಾಗಿರುವ ಉಕ್ರೇನ್‌ಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತಿಲ್ಲ. ರಕ್ಷಣಾ ತಜ್ಞರ ಪ್ರಕಾರ, ಉಕ್ರೇನ್​ನನ್ನು ಯುದ್ಧಕ್ಕೆ ಪ್ರಚೋದಿಸುತ್ತಿರುವ ಅಮೆರಿಕ ಮತ್ತು ಪಶ್ಚಿಮದ ದೇಶಗಳು, ಮೌನಕ್ಕೆ ಜಾರಿವೆ. "ಅಮೆರಿಕ ಮತ್ತು ಪಶ್ಚಿಮ ದೇಶಗಳು ಹೋರಾಡುವಂತೆ ಉಕ್ರೇನಿಯನ್ನರನ್ನು ಪ್ರೇರೇಪಿಸುತ್ತವೆ. ಆಮೇಲೆ, ನಾವು ನಿಮ್ಮ ರಕ್ಷಣೆಗೆ ಬರುವುದಿಲ್ಲ. ನಾವು ಕೇವಲ ಆರ್ಥಿಕ ನಿರ್ಬಂಧಗಳನ್ನು ಹೇರುತ್ತೇವೆ ಎಂದು ಹೇಳುವುದು ಅನೈತಿಕವಾಗಿದೆ, ಇದು ಅಸಂಬದ್ಧ” ಎಂದು ತಜ್ಞರು ಹೇಳಿದ್ದಾರೆ.

War between Russia and Ukraine
ಯುದ್ಧದ ನಂತರ ಉಕ್ರೇನ್​ನ ಚಿತ್ರಣ

ಅಮೆರಿಕದ ಶಸ್ತ್ರಾಸ್ತ್ರಗಳಾದ ಸ್ಟಿಂಗರ್ (ನೆಲದಿಂದ ನಭಕ್ಕೆ ಚಿಮ್ಮುವ ಶಾರ್ಟ್-ರೇಂಜ್ ವಾಯು ಕ್ಷಿಪಣಿ) ಮತ್ತು ಜಾವೆಲಿನ್ (ಟ್ಯಾಂಕರ್-ವಿರೋಧಿ ಮಾರ್ಗದರ್ಶಿ ಕ್ಷಿಪಣಿಗಳು) ಹೆಚ್ಚು ರಕ್ಷಣಾತ್ಮಕವಾಗಿವೆ. ರಷ್ಯನ್ನರು - ಸೆವಾಸ್ಟೊಪೋಲ್, ಮರಿಯುಪೋಲ್ ಮತ್ತು ಒಡೆಸ್ಸಾ -ಈ ಎಲ್ಲ ಪ್ರಮುಖ ಬಂದರುಗಳನ್ನು ವಶಪಡಿಸಿಕೊಂಡು, ಪ್ರವೇಶ ಬಿಂದುಗಳನ್ನು ನಿರ್ಬಂಧಿಸಿದ ಮೇಲೆ ಬಂದಿವೆ. ಈ ಹಂತದಲ್ಲಿ ಇವು ಸಹಾಯಕವಾಗುವುದಿಲ್ಲ. ರಷ್ಯಾದ ಸೈನ್ಯವು ಈಗಾಗಲೇ S-400 ಮತ್ತು S-500 ಕ್ಷಿಪಣಿಗಳನ್ನು ಇರಿಸಿರುವುದರಿಂದ ಮತ್ತು ಏರ್‌ಡ್ರಾಪಿಂಗ್ ಅಸಾಧ್ಯವಾದ ಕಾರಣ ಅಮೆರಿಕದ ಶಸ್ತ್ರಾಸ್ತ್ರಗಳು ಸಮುದ್ರದ ಮೂಲಕ ಅಥವಾ ಗಾಳಿಯ ಮೂಲಕ ಉಕ್ರೇನ್​​ನನ್ನು ತಲುಪುವುದಿಲ್ಲ. ರಸ್ತೆಗಳ ಮೂಲಕ ಮಾತ್ರ ಅವು ಬರುವ ಸಾಧ್ಯತೆ ಇದೆ. ಒಮ್ಮೆ ಅವು ಉಕ್ರೇನ್ ಪ್ರವೇಶಿಸಿದವು ಎಂದರೆ, ಬಾಂಬ್ ದಾಳಿಗೆ ಮುಕ್ತವಾಗುತ್ತವೆ ಮತ್ತು ಈ ಮೂಲಕ ಯುದ್ಧವನ್ನು ವಿಸ್ತರಿಸುವ ಸಾಧ್ಯತೆಯಿದೆ ಎಂದು ರಕ್ಷಣಾ ಪಂಡಿತರು ಹೇಳಿದ್ದಾರೆ.

ಜಾಗತಿಕ ಆರ್ಥಿಕತೆ ಧ್ವಂಸಗೊಳಿಸುವ ಭೀತಿ: ಈ ಯುದ್ಧವು ಕೋವಿಡ್ ಬಿಕ್ಕಟ್ಟಿನಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಜಾಗತಿಕ ಆರ್ಥಿಕತೆಯನ್ನು ಧ್ವಂಸಗೊಳಿಸುವ ಭೀತಿಯನ್ನು ಮೂಡಿಸಿದೆ. ತೈಲ ಬೆಲೆ ಈಗಾಗಲೇ ಬ್ಯಾರೆಲ್‌ಗೆ $ 100 ತಲುಪಿದೆ ಮತ್ತು ಅದು ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ.

War between Russia and Ukraine
ಯುದ್ದದಿಂದ ಧ್ವಂಸಗೊಂಡ ಕಟ್ಟಡ

ಇದು ಎರಡು ಅಸಮಾನ ಶಕ್ತಿಗಳ ನಡುವಿನ ಹೋರಾಟ. ಆದರೆ, ಉಕ್ರೇನ್ ತುಂಬಾ ಧೈರ್ಯಶಾಲಿ. ಸ್ವಾಭಿಮಾನಿ ಜನರು ತಮ್ಮ ದೇಶ ಅಥವಾ ಅವರ ಗೌರವಕ್ಕಾಗಿ ಹೋರಾಡಲು ಪ್ರಯತ್ನಿಸುತ್ತಾರೆ. ಆದರೆ, ಉಕ್ರೇನ್ ರಾಜಧಾನಿ ಕೈವ್‌ನಲ್ಲಿ ಈಗಲೇ ಹೋರಾಟವು ನಡೆದಿದ್ದರೆ, ಅದು ಕೆಲವೇ ದಿನಗಳಲ್ಲಿ ಇತ್ಯರ್ಥವಾಗುವ ವಿಷಯವಾಗುತ್ತದೆ. ಆದರೆ ಪಶ್ಚಿಮವು ಸಂಘರ್ಷವನ್ನು ಯಾವ ಹಂತಕ್ಕೆ ವಿಸ್ತರಿಸಲು ಬಯಸುತ್ತದೆ? ಇದರಲ್ಲಿ ಉಕ್ರೇನ್ ಜನರ ಹಿತಾಸಕ್ತಿ ಏನಾದರೂ ಇದೆಯೇ? ಉಕ್ರೇನಿನ ಮಿಲಿಟರಿ ಸಾಮರ್ಥ್ಯವನ್ನು ನಾಶಪಡಿಸುವುದು ರಷ್ಯಾದ ಗುರಿಯಾಗಿದೆ. ಉಕ್ರೇನ್‌ನ ಕೊನೆಯ ವ್ಯಕ್ತಿಯೂ ರಷ್ಯಾದ ವಿರುದ್ಧ ಹೋರಾಡುವಂತೆ ಉಕ್ರೇನ್ ಅಧ್ಯಕ್ಷ ಝೆಲಿನ್‌ಸ್ಕಿ ಅವರನ್ನು ನ್ಯಾಟೋ (NATO) ಪ್ರೋತ್ಸಾಹಿಸುತ್ತಿದೆ.

ಉಕ್ರೇನ್‌ನ ತೈಲ ಸ್ಥಾವರಗಳು ನಾಶ: ಉಕ್ರೇನ್‌ನ ತೈಲ ಸ್ಥಾವರಗಳು ನಾಶವಾಗುತ್ತಿವೆ. ಪೈಪ್‌ಲೈನ್‌ಗಳನ್ನು ಒಡೆಯುತ್ತಿದ್ದಾರೆ. ನಗರವನ್ನು ಸುತ್ತುವರೆದು ಹಲವು ಮಲ್ಟಿ-ಬ್ಯಾರೆಲ್ ಗ್ರಾಡ್ ರಾಕೆಟ್ ಲಾಂಚರ್‌ಗಳು, ಬೃಹತ್ ಫಿರಂಗಿ, ಸ್ವಯಂ ಚಾಲಿತ ಫಿರಂಗಿ, SU -25 ಫೈಟರ್ ಬಾಂಬರ್‌ಗಳ ಮೂಲಕ ದಾಳಿ ಮಾಡಿ, ಪುಡಿಗಟ್ಟುವುದು ರಷ್ಯಾದ ಯುದ್ಧತಂತ್ರ. ಆದರೆ, ಇದನ್ನು ಮಾಡುವ ಮೊದಲು, ನಗರದಿಂದ ಹೊರಹೋಗುವಂತೆ ಅಲ್ಲಿನ ಜನರಿಗೆ ಕೇಳುತ್ತದೆ. ಇದೇ ತಂತ್ರವನ್ನು ಅದು ಚೆಚೆನ್ಯಾದಲ್ಲೂ ಅನುಸರಿಸಿತ್ತು.

War between Russia and Ukraine
ಉಕ್ರೇನ್​ ಮೇಲೆ ರಷ್ಯಾದಿಂದ ಬಾಂಬ್​ ದಾಳಿ

ಇಲ್ಲಿ ಉಕ್ರೇನಿಯನ್ನರು ಪುರುಷರನ್ನು ಹೊರ ಹೋಗಲು ಬಿಡುತ್ತಿಲ್ಲ. 16ರಿಂದ 60 ವರ್ಷ ವಯಸ್ಸಿನ ಎಲ್ಲ ಪುರುಷರು ಇಲ್ಲೇ ಇದ್ದು, ಯುದ್ಧ ಮಾಡಬೇಕು. ಮಹಿಳೆಯರು ಮತ್ತು ಮಕ್ಕಳು ಮಾತ್ರ ಹೊರಗೆ ಹೋಗಬಹುದು ಎಂದು ಅವರು ಹೇಳುತ್ತಿದ್ದಾರೆ. ಆದರೆ, ಇದೀಗ ಹೊರಗೆ ಹೋಗುವುದೂ ಕಷ್ಟವಾಗುತ್ತಿದೆ. ಯುದ್ಧ ಜೋರಾಗಿ ನಡೆಯುತ್ತಿದೆ. ನಿಮ್ಮನ್ನು ಗುರುತಿಸಿ, ಅಳುವವರು ಇಲ್ಲಿ ಬಹಳ ಮಂದಿ ಇದ್ದಾರೆ.

ನಮ್ಮ ನಾಗರಿಕರನ್ನು ಏಕೆ ತ್ವರಿತವಾಗಿ ವಾಪಸ್ ಕರೆತರಲು ಸಾಧ್ಯವಾಗುತ್ತಿಲ್ಲ?: ಯುದ್ಧದಿಂದ ತತ್ತರಿಸಿರುವ ಉಕ್ರೇನ್‌ನಲ್ಲಿ ಈಗ ಸುರಕ್ಷಿತ ಸ್ಥಳವೆಂದರೆ, ಭೂಗತ ಬಂಕರ್. ಅವುಗಳಲ್ಲಿ ಆಶ್ರಯ ಪಡೆದವರು ಭಾರತೀಯರು ಎಂಬುದನ್ನು ರಷ್ಯನ್ನರು ಅಥವಾ ಉಕ್ರೇನಿಯನ್ನರು ಅರ್ಥಮಾಡಿಕೊಳ್ಳುವುದಿಲ್ಲ. ನೀವು ನಿಮ್ಮ ಧ್ವಜವನ್ನು ಹಿಡಿದಿದ್ದರೂ ಅವರು ಸಂಯಮ ವಹಿಸುತ್ತಿಲ್ಲ. ಅದನ್ನು ಲೆಕ್ಕಿಸದೆ ಗುಂಡಿಕ್ಕಿ ಕೊಲ್ಲಲಾಗುತ್ತಿದೆ. ಸುರಕ್ಷಿತವಾಗಿರಲು, ಸ್ವಲ್ಪ ಸಮಯ ವಿಶ್ರಮಿಸಿ ಮತ್ತು ಪರಿಸ್ಥಿತಿ ಸುಧಾರಿಸಿದೆ ಎಂದು ಖಚಿತವಾದ ಮೇಲೆ ಹೊರಬರಲು ಪ್ರಯತ್ನಿಸಿ. ಸಾಮಾನ್ಯವಾಗಿ ಯುದ್ಧದ ಸಂದರ್ಭಗಳಲ್ಲಿ, ಶೆಲ್ ಅಥವಾ ಬಾಂಬ್ ದಾಳಿಯಾದಾಗ ರಕ್ಷಣಾ ಸಿಬ್ಬಂದಿ ಭೂಗತರಾಗುತ್ತಾರೆ. ಬುದ್ಧಿಯಿಲ್ಲದ ಕೋಳಿಯಂತೆ ರಸ್ತೆಗಳಲ್ಲಿ ಓಡಾಡಲು ಅವರು ಪ್ರಯತ್ನಿಸುವುದಿಲ್ಲ. ಹತರಾಗಲು ಇರುವ ಸುಲಭದ ಮಾರ್ಗವಿದು.

ತನ್ನ ದೇಶದ ನಾಗರಿಕರನ್ನು ವಾಪಸ್ ಕರೆತರಲು ಭಾರತ ಸರ್ಕಾರ ಸರ್ವ ಪ್ರಯತ್ನವನ್ನೂ ಮಾಡುತ್ತಿದೆ. ವಾಪಸ್ ಬರುವಂತೆ ಯುದ್ಧ ಪ್ರಾರಂಭವಾಗುವ ಬಗ್ಗೆ 4-5 ದಿನಗಳ ಮೊದಲೇ ಅವರಿಗೆ ತಿಳಿಸಲಾಗಿತ್ತು. ಆದರೆ, ಯುದ್ಧ ಆರಂಭವಾದೀತೆಂದು ಯಾರೂ ನಂಬಿರಲಿಲ್ಲ. ಪಶ್ಚಿಮದ ದೇಶಗಳಲ್ಲೂ ನಮ್ಮದೇ ಹಳೆಯ ಜನರಲ್‌ಗಳು ರಷ್ಯನ್ನರಿಂದ ಮೂರ್ಖರಾದರು. ರಷ್ಯಾ ದಾಳಿ ಮಾಡುವುದಿಲ್ಲ ಎಂದು ಅವರು ಭಾವಿಸಿದ್ದರು. ಆದರೆ ರಷ್ಯಾ ದಾಳಿ ಮಾಡಿಯೇ ಬಿಟ್ಟಿತು.

War between Russia and Ukraine
ಯುದ್ಧದ ನಂತರ ಉಕ್ರೇನ್​ನ ಚಿತ್ರಣ

ನಮ್ಮ ಸರ್ಕಾರ ತನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತಿದೆ. ನಾಲ್ವರು ಸಚಿವರು ಉಕ್ರೇನ್ ಸುತ್ತಮುತ್ತಲಿನ ದೇಶಗಳು, ರಷ್ಯಾ, ಪೋಲಂಡ್, ರೊಮೇನಿಯನ್​ನ ನಗರಗಳಿಗೆ ಹೋಗಿದ್ದಾರೆ. ಅಲ್ಲಿ ಇದ್ದುಕೊಂಡು ಭಾರತೀಯರನ್ನು ಉಕ್ರೇನ್ ಗಡಿ ದಾಟಿಸಿ, ಸ್ವದೇಶಕ್ಕೆ ಕರೆತರಲು ಅವಿರತವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಭಾರತೀಯರು ಅಲ್ಲಿಂದ ಸುರಕ್ಷಿತವಾಗಿ ಹೊರಬರಬೇಕಿದ್ದರೆ ಒಂದು ಪ್ರತ್ಯೇಕ ವ್ಯವಸ್ಥೆ ಆಗಬೇಕು. ಅದನ್ನು ರಷ್ಯನ್ನರಿಗೆ ತಿಳಿಸಬೇಕು. ಭಾರತೀಯರು (ಅಥವಾ ವಿದೇಶಿಯರು) ಹೊರಹೋಗಲು ಉಕ್ರೇನ್ ಅವಕಾಶ ನೀಡಬೇಕು. ಆದರೆ, ನಾಗರಿಕರು ಅಲ್ಲಿಯೇ ಉಳಿದು ಹೋರಾಟ ಮಾಡಬೇಕು. ಇಲ್ಲದಿದ್ದರೆ ವಾಪಸಾಗುವ ಪ್ರಯತ್ನದಲ್ಲಿ ಅವರು ರಸ್ತೆಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ, ಫೈಟರ್‌ ಬಾಂಬರ್‌ಗಳು, ದಾಳಿ ಹೆಲಿಕಾಪ್ಟರ್‌ಗಳು ಅಥವಾ ಫಿರಂಗಿ ಟ್ಯಾಂಕ್‌ಗಳಿಗೆ ಆಹುತಿಯಾಗುತ್ತಾರೆ ಎಂದು ಎಚ್ಚರಿಸಿದೆ.

ಇದನ್ನೂ ಓದಿ: ಅಮೆರಿಕ, ರಷ್ಯಾದಲ್ಲಿವೆ ವಿಶ್ವದ ಶೇ.90 ರಷ್ಟು ಪರಮಾಣು ಸಿಡಿತಲೆಗಳು.. ಇಲ್ಲಿದೆ ಪೂರ್ಣ ಮಾಹಿತಿ

ಯುದ್ಧವನ್ನು ವಿಸ್ತರಿಸಲು ಪಶ್ಚಿಮ ದೇಶಗಳು ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟೂ ಪ್ರಯತ್ನಗಳನ್ನು ಮಾಡುತ್ತಿದ್ದರೂ, ಈ ಯುದ್ಧವು ದೀರ್ಘಕಾಲ ನಡೆಯಲು ಸಾಧ್ಯವಿಲ್ಲ. ಈಗ ಅದು ಹೆಚ್ಚು-ಕಡಿಮೆ ಮುಗಿದಿದೆ. ಟ್ಯಾಂಕ್‌ಗಳಿಗೆ ಎದೆಯೊಡ್ಡುತ್ತಿರುವ ಉಕ್ರೇನ್ ನಾಗರಿಕರಿಗೆ ಈ ಯುದ್ಧದಿಂದ ತುಂಬಾ ಅನ್ಯಾಯವಾಗಿದೆ. ರಷ್ಯಾ ಯುದ್ಧ ಘೋಷಿಸಿದ್ದರೂ ಸಂಯಮವನ್ನು ಕಾಪಾಡಿಕೊಂಡಿದ್ದರಿಂದಲೇ ಅಂತಹ ರಕ್ತಪಾತವಾಗಿಲ್ಲ ಎಂದರೆ ತಪ್ಪಾಗಲಾರದು. ಜಗತ್ತಿನ ಕ್ಯಾಮರಾಗಳೆಲ್ಲ ಈಗ ಯುದ್ಧಭೂಮಿಯತ್ತಲೇ ತಿರುಗಿವೆ. ಇದೊಂದು ಇಲ್ಲದಿದ್ದರೆ ರಷ್ಯನ್ನರು ತುಂಬ ಕ್ರೂರವಾಗಿ ಆಕ್ರಮಣ ಮಾಡುತ್ತಿದ್ದರು. ವಿಶ್ವ ಸಮರ 2, ಚೆಚೆನ್ಯಾ ಮತ್ತು ಅಫ್ಘಾನಿಸ್ತಾನದಲ್ಲಿ ಸೈನಿಕರು ಮೆರೆದಿರುವ ಕ್ರೌರ್ಯಗಳು ಅತ್ಯುತ್ತಮ ಉದಾಹರಣೆಗಳಾಗಿವೆ.

ಮೇಲಾಧಾರ ಹಾನಿಯನ್ನು ತಪ್ಪಿಸಲು ತಮ್ಮ ಫಿರಂಗಿ ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್‌ಗಳನ್ನು ಮತ್ತು ವಾಯು ದಾಳಿಯನ್ನು ಅವರು ತುಂಬಾ ನಿಖರವಾಗಿ ಮಾಡುತ್ತಿದ್ದಾರೆ. ಮೇಲಾಧಾರ ಹಾನಿ ಮತ್ತು ನಾಗರಿಕರನ್ನು ಗುರಿ ಮಾಡಿ ದಾಳಿ ಎಸಗಿದರೆ ಜಗತ್ತಿಗೆ ಕ್ಷಣ ಮಾತ್ರದಲ್ಲಿ ತಿಳಿಯುತ್ತದೆ. ನೀವೊಂದು ಮೊಬೈಲ್ ತೆರೆದರೆ, ನೀವು ಎಲ್ಲಿದ್ದೀರಿ ಎನ್ನುವುದನ್ನು ನಿಖರವಾಗಿ ಗುರುತಿಸುವ ತಂತ್ರಜ್ಞಾನ ಈಗ ಲಭ್ಯವಿದೆ. ರಷ್ಯನ್ನರು ನಿಖರವಾದ ಮಾರ್ಗದರ್ಶನದ ಯುದ್ಧ ಸಾಮಗ್ರಿಗಳೊಂದಿಗೆ ತಮ್ಮ ಫೈಟರ್ ಬಾಂಬರ್‌ಗಳನ್ನು ಕಳುಹಿಸಿದ್ದಾರೆ.

ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವರನ್ನು ಹೊಡೆದುರುಳಿಸಲು ಸಾಧ್ಯವಿಲ್ಲ ಎಂದು ನೀವು ಭಾವಿಸುತ್ತೀರಾ? : ರಷ್ಯಾ ಇಲ್ಲಿಯವರೆಗೆ ಅದನ್ನು ಮಾಡಿಲ್ಲ, ಅಷ್ಟೇ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಉಕ್ರೇನಿನ ಮಿಲಿಟರಿ ಸಾಮರ್ಥ್ಯವನ್ನು ನಾಶಮಾಡುವ ತಮ್ಮ ಗುರಿಯನ್ನು ಅವರು ಸಾಧಿಸುತ್ತಿದ್ದಾರೆ. ಅದೇ ಅವರ ಗುರಿಯಾಗಿತ್ತು. ಈ ಎಲ್ಲದರ ಕೊನೆಯಲ್ಲಿ ಆಡಳಿತದಲ್ಲಿ ಬದಲಾವಣೆ ಬರಬಹುದು. ಯುದ್ಧವು ಮುಗಿದ ಮೇಲೆ ನೀವು ಝೆಲೆನ್‌ಸ್ಕಿ ಅವರನ್ನೇ ಉಸ್ತುವಾರಿಯಾಗಿ ಉಳಿಸುವುದು ಒಂದು ಆಯ್ಕೆ ಆಗಿರಬಹುದು. ರಷ್ಯಾದ ಟ್ಯಾಂಕ್‌ಗಳ ಮೇಲೆ ನಾಯಕನನ್ನು ಕರೆತರುವುದಕ್ಕಿಂತ ಹೆಚ್ಚಾಗಿ ಅವನ ಜನರ ಕೋಪವನ್ನು ಎದುರಿಸುವುದರಲ್ಲೇ ಅರ್ಧ ಉಕ್ರೇನ್ ಭಸ್ಮವಾಗಿರುತ್ತದೆ. ಇದು ಸ್ವೀಕಾರಾರ್ಹವಾಗುವುದಿಲ್ಲ.

Last Updated : Mar 2, 2022, 8:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.