ETV Bharat / bharat

ಗಣರಾಜ್ಯೋತ್ಸವ ದಿನ ನವಜೋತ್ ಸಿಂಗ್ ಸಿಧು ಜೈಲ್​​ನಿಂದ ಬಿಡುಗಡೆ ಆಗ್ತಾರಾ?.. ಈಗಲೇ ಸಂಭ್ರಮಕ್ಕೆ ತಯಾರಿ! - ಮುಖ್ಯಮಂತ್ರಿ ಭಗವಂತ್ ಮಾನ್

ರಸ್ತೆ ರಂಪಾಟ ಗಂಭೀರ ಪ್ರಕರಣದಡಿ ಕಾಂಗ್ರೆಸ್‌ ಮುಖಂಡ ನವಜೋತ್ ಸಿಂಗ್ ಸಿಧು ಪಟಿಯಾಲಾ ಜೈಲ್​ದಲ್ಲಿ ಬಂಧಿ - ಜನವರಿ 26ರಂದು ಸನ್ನಡತೆ ಆಧಾರದಡಿ ಸಿಧು ಬಿಡುಗಡೆ ಸಾಧ್ಯತೆ - ನವಜೋತ್ ಸಿಂಗ್ ಸಿಧು ಬಿಡುಗಡೆಗೆ ಕಾಂಗ್ರೆಸ್ ನಲ್ಲಿ ಸಂಭ್ರಮದ ವಾತಾವರಣ

Sidhu gets grand welcome from hoardingsga
ನವಜೋತ್ ಸಿಂಗ್ ಸಿಧುಗೆ ಹೋರ್ಡಿಂಗ್ಸ್ಗ ಹಾಕಿ ಬೆಂಬಲಿಗರಿಂದ ಭವ್ಯ ಸ್ವಾಗತ
author img

By

Published : Jan 24, 2023, 5:32 PM IST

ಲೂಧಿಯಾನ: ರಸ್ತೆ ರಂಪಾಟ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಿಯಾಲಾ ಸೆಂಟ್ರಲ್ ಜೈಲಿನಲ್ಲಿ ಬಂಧಿಯಾಗಿರುವ ಕಾಂಗ್ರೆಸ್‌ ಮುಖಂಡ ನವಜೋತ್ ಸಿಂಗ್ ಸಿಧು ಬೆಂಬಲಿಗರು ಅವರ ಹೋರ್ಡಿಂಗ್ಸ್​​ಗಳನ್ನು ರಸ್ತೆಗಳಲ್ಲಿ ಹಾಕಿದ್ದಾರೆ. ಪೋಸ್ಟರ್‌ನಲ್ಲಿ ಪಂಜಾಬ್, ಪಂಜಾಬಿ ಮತ್ತು ಪಂಜಾಬಿಯ ಕಾವಲುಗಾರ ನವಜೋತ್ ಸಿಂಗ್ ಸಿಧು ಎಂದು ಬರೆಯಲಾಗಿದೆ.

ಹೋರ್ಡಿಂಗ್‌ಗಳಲ್ಲಿ ನವಜೋತ್ ಸಿಂಗ್ ಸಿಧು ಜತೆಗೆ ಮಾಧ್ಯಮ ಸಲಹೆಗಾರ ಸುರಿಂದರ್ ದಲ್ಲಾ ಅವರದ್ದೂ ಚಿತ್ರವಿದೆ. 1998 ರಲ್ಲಿ ರಸ್ತೆಯಲ್ಲಿ ರಂಪಾಟ ಮಾಡಿದ್ದ ಗಂಭೀರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ವಿಧಿಸಿದ್ದ ಶಿಕ್ಷೆ ಅನ್ವಯ ಸಿಧು ಪ್ರಸ್ತುತ ಪಟಿಯಾಲ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಹಿಂದಿನ ವರ್ಷ ಮೇ 20 ರಂದು ಸುಪ್ರೀಂ ಕೋರ್ಟ್ ಆದೇಶದನ್ವಯ ಸ್ಥಳೀಯ ನ್ಯಾಯಾಲಯಕ್ಕೆ ಶರಣಾದ ಬಳಿಕ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು.

ಸಿದ್ದು ಬಿಡುಗಡೆಗೆ ಸದ್ಯಕ್ಕೆ ಸಸ್ಪೆನ್ಸ್: ಪ್ರಸ್ತುತ ಪಟಿಯಾಲ ಜೈಲಿನಲ್ಲಿರುವ ಪಂಜಾಬ್ ನ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಬಿಡುಗಡೆ ಬಗ್ಗೆ ಇನ್ನೂ ಸಸ್ಪೆನ್ಸ್ ಇದೆ. ಈ ವರ್ಷದ ಗಣರಾಜ್ಯೋತ್ಸವ ವೇಳೆ ಸನ್ನಡತೆ ಆಧಾರದಲ್ಲಿ 52 ಕೈದಿಗಳನ್ನು ಬಿಡುಗಡೆಗೊಳಿಸುವಂತೆ ಕಾರಾಗೃಹ ಇಲಾಖೆ ಪಂಜಾಬ್ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ. ಕಾರಾಗೃಹ ಇಲಾಖೆಯ ಸಲ್ಲಿಸಿದ 52 ಕೈದಿಗಳ ಪಟ್ಟಿಯಲ್ಲಿ ಸಿಧು ಅವರ ಹೆಸರಿದೆ.

ಕಾನೂನಿನ ಪ್ರಕಾರ, ಕಾರಾಗೃಹ ಇಲಾಖೆ ಪ್ರಸ್ತಾವನೆಗೆ ಪಂಜಾಬ್ ಸರ್ಕಾರದ ಕ್ಯಾಬಿನೆಟ್ ಅನುಮೋದನೆ ನೀಡಬೇಕು. ನಂತರ ರಾಜ್ಯಪಾಲರು ಪ್ರಸ್ತಾವನೆಯನ್ನು ಅನುಮೋದಿಸಬೇಕು. ಆದರೆ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಫೆಬ್ರವರಿ 1 ರಂದು ತಮ್ಮ ಕ್ಯಾಬಿನೆಟ್ ಸಭೆಯನ್ನು ಕರೆದಿದ್ದಾರೆ. ಗಣರಾಜ್ಯೋತ್ಸವದ ಬಳಿಕ ಸಚಿವ ಸಂಪುಟ ಸಭೆ ನಡೆಯುತ್ತಿರುವುದರಿಂದ ಕಾರಾಗೃಹ ಇಲಾಖೆ ಸಿದ್ಧಪಡಿಸಿದ್ದ ಪ್ರಸ್ತಾವನೆಗೆ ಅನುಮತಿಯೂ ಸಿಗುವುದು ವಿಳಂಬವಾಗಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಜನವರಿ 26 ರಂದು ಗಣರಾಜ್ಯೋತ್ಸವ ಭಾಷಣದಲ್ಲಿ ಕೈದಿಗಳ ಬಿಡುಗಡೆ ಭಾಗ್ಯವನ್ನು ಘೋಷಿಸಿದರೆ ಮಾತ್ರ ಫೆಬ್ರುವರಿ 27 ಅಥವಾ 28 ರಂದು ನವಜೋತ್ ಸಿಧು ಅವರ ಜೈಲಿನಿಂದ ಹೊರಬರಲು ಸಾಧ್ಯವಿದೆ ಎಂಬ ಮಾತುಗಳು ಚರ್ಚೆಯಲ್ಲಿವೆ.

ಭಾರತ್ ಜೋಡೊ ಯಾತ್ರೆ.. ಸಿಧುಗೆ ಆಹ್ವಾನ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊದ ತ್ರಿರಂಗ ಯಾತ್ರೆಯೂ ಜನವರಿ 30 ರಂದು ಶ್ರೀನಗರದಲ್ಲಿ ಸಮಾರೋಪಗೊಳ್ಳಲಿದೆ. ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ನವಜೋತ್ ಸಿಂಗ್ ಸಿಧುಗೆ ಕಾಂಗ್ರೆಸ್ ಆಹ್ವಾನ ನೀಡಿದೆ. ಈ ನಡುವೆ ಪತ್ನಿ ನವಜೋತ್ ಕೌರ್ ಅವರು ಪಂಜಾಬ್‌ಗೆ ಭಾರತ ಜೋಡೊ ಯಾತ್ರೆ ಆಗಮಿಸಿದ್ದ ವೇಳೆ ರಾಹುಲ್ ಗಾಂಧಿ ಅವರೊಂದಿಗೆ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಗಣರಾಜ್ಯೋತ್ಸವ ದಿನ 26ರಂದು ಸಿಧು ರಿಲೀಸ್ ಆಗುತ್ತಾರೋ? ಭಾರತ್ ಜೋಡೊ ಯಾತ್ರೆಯ ಕೊನೆಯ ದಿನ ಜನವರಿ 30 ರಂದು ಶ್ರೀನಗರದಲ್ಲಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎಂಬುದು ಇನ್ನೂ ಸಸ್ಪೆನ್ಸ್​ ಆಗಿಯೇ ಇದೆ. ನವಜೋತ್ ಸಿಂಗ್ ಸಿದ್ದು ಬಿಡುಗಡೆಗೆ ಕಾಂಗ್ರೆಸ್ ನಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಬಿಡುಗಡೆ ಬಳಿಕ ಸಿದ್ದು ಅವರನ್ನು ಸಂಭ್ರಮದಿಂದ ಸ್ವಾಗತಿಸಲಾಗುವುದು ಎಂದು ಸಿಧು ಬೆಂಬಲಿಗರು ಹೇಳಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್, ಸೋನಿಯಾ ಗಾಂಧಿ ಅವರು ನವಜೋತ್ ಸಿಂಗ್​ ಸಿಧುಗೆ ದೊಡ್ಡ ಜವಾಬ್ದಾರಿ ವಹಿಸುವ ಸಾಧ್ಯತೆ ಇದೆ ಎಂಬ ಚರ್ಚೆಗಳೂ ನಡೆಯುತ್ತಿವೆ. ಈಗ ಎಲ್ಲರ ಚಿತ್ತ ಪಂಜಾಬ್ ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ.

ಇದನ್ನೂಓದಿ:Watch.... ಕಾರ್ಯಕರ್ತನ ಮೇಲೆ ಕಲ್ಲು ಎಸೆದ ತಮಿಳುನಾಡು ಸಚಿವರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.