ETV Bharat / bharat

ಕೋವಿಡ್​ನಿಂದ ಮಾನಸಿಕ ಕಾಯಿಲೆ ಹೆಚ್ಚಾಗಿವೆಯಾ?.. ಅದಕ್ಕೆ ವೈದ್ಯರು ಹೀಗಂತಾರೆ.. - Increased PSTD symptoms in people

ಕೆಲ ರೋಗಿಗಳಿಗೆ ಆಳ ವಿಶ್ರಾಂತಿ ಚಿಕಿತ್ಸೆ, ಏಕ ಅಥವಾ ಗುಂಪು ಮಾನಸಿಕ ಚಿಕಿತ್ಸೆ ನೀಡಲಾಗ್ತದೆ. ಅಲ್ಲದೆ, ಟಾಕ್ ಥೆರಪಿ ಧ್ಯಾನ ಮುಂತಾದುವುಗಳನ್ನು ಮಾಡಿಸಲಾಗುತ್ತದೆ. ಈ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯ ಕುಟುಂಬ ಮತ್ತು ಸ್ನೇಹಿತರಿಗೆ ಚಿಕಿತ್ಸೆ ನೀಡಲು ಮುಖ್ಯವಾಗಿರುತ್ತಾರೆ..

Is COVID-19 Leading To Post-Traumatic Stress Disorder Symptoms In People?
ಕೋವಿಡ್​ನಿಂದ ಮಾನಸಿಕ ಕಾಯಿಲೆ ಹೆಚ್ಚಳ
author img

By

Published : Feb 24, 2021, 8:20 PM IST

ಕೋವಿಡ್​-19 ಜಾಗತಿಕವಾಗಿ ಹೆಚ್ಚಿನ ಜನರಲ್ಲಿ ಮಾನಸಿಕ ಪ್ರಭಾವ ಬೀರಿದೆ ಎಂದು ತೋರಿಸುವ ಹಲವಾರು ವರದಿಗಳನ್ನು ನೀವು ನೋಡಿರಬಹುದು. ಕೋವಿಡ್ ಬಳಿಕ ಒತ್ತಡ, ಖಿನ್ನತೆ, ಆತಂಕ ಮತ್ತು ಇತರ ಹಲವು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ.

ವಿಶೇಷವಾಗಿ ಕೋವಿಡ್​ನಿಂದ ಗುಣಮುಖರಾದವರಲ್ಲಿ ಈ ರೀತಿಯ ಪ್ರಕರಣ ಹಚ್ಚಿವೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ ( ಪಿಟಿಎಸ್​ಡಿ) ಎಂದು ಕರೆಯಲಾಗುತ್ತದೆ. ಈ ಕುರಿತು ಈಟಿವಿ ಭಾರತದ ಸುಖೀಭವ ತಂಡವು ಡೆಹ್ರಾಡೂನ್‌ನ ಕನ್ಸಲ್ಟೆಂಟ್ ಕ್ಲಿನಿಕಲ್ ಸೈಕಾಲಜಿಸ್ಟ್ ಡಾ.ವೀಣಾ ಕೃಷ್ಣನ್ ಅವರೊಂದಿಗೆ ಮಾತುಕತೆ ನಡೆಸಿದೆ.

ಪಿಟಿಎಸ್​ಡಿ ಎಂದರೇನು?: ಪಿಟಿಎಸ್‌ಡಿ ಒಂದು ಮಾನಸಿಕ ಆಘಾತವಾಗಿದೆ. ಜೀವನದಲ್ಲಿ ನಡೆಯುವ ಕೆಲ ಘಟನೆಗಳಿಂದಾಗಿ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ದೈಹಿಕ ಗಾಯ, ಲೈಂಗಿಕ ಹಿಂಸೆ, ಪ್ರೀತಿ ಪಾತ್ರರ ಹಠಾತ್ ಸಾವು, ಜೀವ ಬೆದರಿಕೆ ಮುಂತಾದವುಗಳಿಂದ ಈ ಸಮಸ್ಯೆ ಉಂಟಾಗಬಹುದು ಎಂದು ಡಾ.ವೀಣಾ ಕೃಷ್ಣನ್ ಹೇಳುತ್ತಾರೆ. ಮೇಲಿನ ಘಟನೆಗಳು ವ್ಯಕ್ತಿಯ ಜೀವನವನ್ನು ಬದಲಾಯಿಸುತ್ತದೆ ಮತ್ತು ಮೆದುಳು ಅದಕ್ಕೆ ವಿಭಿನ್ನ ರೀತಿ ಪ್ರತಿಕ್ರಿಯಿಸಬಹುದು.

ತಜ್ಞರು ವಿವರಿಸಿದಂತೆ ಪಿಟಿಎಸ್​ಡಿಯ ಕೆಲ ಲಕ್ಷಣ ಹೀಗಿವೆ :

  • ವ್ಯಕ್ತಿಯು ಕಿರಿ ಕಿರಿಯುಂಟು ಮಾಡುತ್ತಾನೆ ಮತ್ತು ವಿಷಯಗಳ ಕಡೆಗೆ ಗಮನ ಹರಿಸುವಲ್ಲಿ ಸಮಸ್ಯೆ ಎದುರಿಸುತ್ತಾನೆ.
  • ಅವನು/ಅವಳು ಜನರಿಂದ ದೂರವಾಗುತ್ತಾರೆ ಅಥವಾ ಯಾರೊಂದಿಗೂ ಬೆರೆಯುವುದಿಲ್ಲ
  • ಯಾವುದೇ ಸಂದರ್ಭ ಅಥವಾ ವಿಷಯಗಳ ಕುರಿತು ಮಾತನಾಡುವುದರಿಂದ ತಪ್ಪಿಸಿಕೊಳ್ಳುತ್ತಾರೆ
  • ನಿದ್ದೆ, ಹಸಿವು ಮತ್ತು ಬಾಯಾರಿಕೆಯು ಇಲ್ಲದಿರುವುದು
  • ಅಪರಾಧ, ಅವಮಾನ ಮತ್ತು ಆತಂಕದ ಭಾವನೆ
  • ನಕಾರಾತ್ಮಕ ಭಾವನೆ ಹೊಂದಿರುವುದು ಮತ್ತು ಸಣ್ಣ ವಿಷಯಗಳಿಗೂ ಅಸಮಾಧಾನಗೊಳ್ಳುವುದು
  • ಕೆಲ ಘಟನೆಗಳನ್ನು ಪದೇಪದೆ ನೆನಪಿಸಿಕೊಂಡು ಆತಂಕಕ್ಕೊಳಗಾಗುವುದು ಈ ರೋಗದ ಪ್ರಮುಖ ಲಕ್ಷಣ.

ಕೋವಿಡ್​ಗೂ ಪಿಟಿಎಸ್​ಡಿಗೂ ಸಂಬಂಧವೇನು? : ಕೋವಿಡ್​ನಿಂದ ಜನರಲ್ಲಿ ಅನಿಶ್ಚಿತತೆಯ ಭಾವ ಉಂಟಾಗಿದೆ ಎಂದು ಡಾ. ಕೃಷ್ಣನ್ ವಿವರಿಸುತ್ತಾರೆ. ಅನಿಶ್ಚಿತತೆ ಇದ್ದಾಗಲೆಲ್ಲಾ, ನಾವು ತಕ್ಷಣ ಆತಂಕ ಅನುಭವಿಸಲು ಪ್ರಾರಂಭಿಸುತ್ತೇವೆ ಮತ್ತು ಭಯ ಬೆಳೆಸಿಕೊಳ್ಳುತ್ತೇವೆ. ಆ ಭಯಕ್ಕೆ ಪ್ರತಿಕ್ರಿಯೆಯಾಗಿ ಹೃದಯ ಬಡಿತ, ರಕ್ತದೊತ್ತಡ, ಅಂಗೈ ಬೆವರುವಿಕೆ ಇತ್ಯಾದಿಗಳು ಹೆಚ್ಚಾಗುತ್ತವೆ.

ನಮ್ಮ ಸ್ವನಿಯಂತ್ರಿತ ನರಮಂಡಲವು ಅದಕ್ಕೆ ಸ್ಪಂದಿಸುತ್ತದೆ. ಕೋವಿಡ್​ ಸಮಯದಲ್ಲಿ, ಅನೇಕ ಜನರು ಸಾಯುತ್ತಿರುವುದು, ಪ್ರೀತಿ ಪಾತ್ರರು ಕೋವಿಡ್​ಗೆ ತುತ್ತಾಗಿ ಅಗಲುತ್ತಿರುವುದು ನೋಡಿ ಹೆಚ್ಚಿನ ಜನರು ಆಘಾತಗೊಂಡಿದ್ದಾರೆ.

ಕೋವಿಡ್​ ಕಾರಣದಿಂದ ತಮ್ಮ ಕುಟುಂಬದಲ್ಲಿ ಸಾವು ಅಥವಾ ಸಾವಿನ ಸಮೀಪ ಪ್ರಸಂಗಗಳನ್ನು ನಡೆದದ್ದು ನೋಡಿದ ಜನರಲ್ಲಿ ಪಿಟಿಎಸ್​ಡಿಯ ಲಕ್ಷಣಗಳು ಕಂಡು ಬರಲಾರಂಭಿಸಿವೆ. ರೋಗದ ಸಂಕೋಚನೆ ಅಥವಾ ರೋಗಿಯಾಗುವ ಭಯ, ಆಸ್ಪತ್ರೆಗೆ ದಾಖಲಾಗುವ ಭಯ ಎಲ್ಲವೂ ಜನರಲ್ಲಿ ಒಂದು ರೀತಿಯ ಆತಂಕದ ಭಾವ ಮೂಡಿಸಿದೆ.

ಪಿಟಿಎಸ್‌ಡಿಗೆ ಚಿಕಿತ್ಸೆ : ಪಿಟಿಎಸ್‌ಡಿ ರೋಗ ಲಕ್ಷಣಗಳು ಕಂಡು ಬಂದರೆ, ವೃತ್ತಿಪರರ ಸಹಾಯ ಪಡೆಯುವುದು ಅತ್ಯಂತ ಕಡ್ಡಾಯವಾಗಿದೆ ಎಂದು ಡಾ.ಕೃಷ್ಣನ್ ಹೇಳುತ್ತಾರೆ. ಪಿಟಿಎಸ್​ಡಿ ಚಿಕಿತ್ಸೆಯು ಒಬ್ಬ ರೋಗಿಯಿಂದ ಇನ್ನೊಬ್ಬ ರೋಗಿಗೆ ಭಿನ್ನವಾಗಿರುತ್ತದೆ.

ಕೆಲ ರೋಗಿಗಳಿಗೆ ಆಳ ವಿಶ್ರಾಂತಿ ಚಿಕಿತ್ಸೆ, ಏಕ ಅಥವಾ ಗುಂಪು ಮಾನಸಿಕ ಚಿಕಿತ್ಸೆ ನೀಡಲಾಗ್ತದೆ. ಅಲ್ಲದೆ, ಟಾಕ್ ಥೆರಪಿ ಧ್ಯಾನ ಮುಂತಾದುವುಗಳನ್ನು ಮಾಡಿಸಲಾಗುತ್ತದೆ. ಈ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯ ಕುಟುಂಬ ಮತ್ತು ಸ್ನೇಹಿತರಿಗೆ ಚಿಕಿತ್ಸೆ ನೀಡಲು ಮುಖ್ಯವಾಗಿರುತ್ತಾರೆ. ಇವರು ರೋಗಿಯೊಂದಿಗೆ ತಾಳ್ಮೆ, ಶಾಂತತೆಯಿಂದ ಮತ್ತು ನಿಯಮಿತವಾಗಿ ಮಾತನಾಡುತ್ತಿರಬೇಕು.

ರೋಗಿಯನ್ನು ಏಕಾಂಗಿಯಾಗಿ ಬಿಡದೆ ತಮ್ಮೊಂದಿಗೆ ಒಂದುಗೊಡಿಸಿಕೊಳ್ಳಬೇಕು. ರೋಗಿಯ ಸುತ್ತಮುತ್ತ ಆಹ್ಲಾದಕರ ವಾತವಾರಣವಿರಬೇಕು ಮತ್ತು ರೋಗಿಯೊಂದಿಗೆ ಯಾವಾಗಲೂ ಸಕಾರಾತ್ಮಕ ವಿಷಯಗಳನ್ನೇ ಮಾತನಾಡಬೇಕು. ಈ ಮೇಲಿನ ಯಾವುದೇ ಲಕ್ಷಣಗಳು ನಿಮ್ಮಲ್ಲಿ ಇದ್ದರೆ ತಕ್ಷಣ ತಜ್ಞ ವೈದ್ಯರನ್ನು ಭೇಟಿಯಾಗಿ ಸಮಾಲೋಚಿಸಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.