ETV Bharat / bharat

ಏಕತಾ ಪ್ರತಿಮೆ, ಜ್ಯೋತಿರ್ಲಿಂಗ ಪ್ರವಾಸಕ್ಕಾಗಿ ಐಆರ್​​ಸಿಟಿಸಿಯಿಂದ ಡಿಲಕ್ಸ್ ರೈಲು ಸೇವೆ

ಫೆಬ್ರವರಿ 27ರಂದು ಭಾರತೀಯ ರೈಲ್ವೆ "ಜ್ಯೋತಿರ್ಲಿಂಗ ಮತ್ತು ಏಕತಾ ಪ್ರತಿಮೆ" ಪ್ರವಾಸಕ್ಕಾಗಿ ಡಿಲಕ್ಸ್ ರೈಲು ಸೇವೆಯನ್ನು ಆರಂಭಿಸಲಿದೆ. ಪ್ರವಾಸಿಗರು ದೆಹಲಿಯ ಸಫ್ದರ್ಜಂಗ್, ಮಥುರಾ, ಆಗ್ರಾ ಮತ್ತು ಗ್ವಾಲಿಯರ್ ರೈಲ್ವೆ ನಿಲ್ದಾಣಗಳಲ್ಲಿ ಈ ರೈಲು ಹತ್ತಬಹುದಾಗಿದೆ.

IRCTC to run Deluxe train
ಐಆರ್​​ಸಿಟಿಸಿಯಿಂದ ಡಿಲಕ್ಸ್ ರೈಲು ಸೇವೆ
author img

By

Published : Feb 12, 2021, 9:39 PM IST

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಕುಗ್ಗಿರುವ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಲಿಮಿಟೆಡ್ (ಐಆರ್‌ಸಿಟಿಸಿ) ಜ್ಯೋತಿರ್ಲಿಂಗ ಮತ್ತು ವಿಶ್ವದ ಎತ್ತರದ ಪ್ರತಿಮೆ ಇರುವ ಸ್ಥಳಗಳಿಗೆ ಡಿಲಕ್ಸ್​​ ಎಸಿ ಪ್ರವಾಸಿ ರೈಲು ಬಿಡಲು ನಿರ್ಧರಿಸಿದೆ.

ಈ ಪ್ರವಾಸವು ಫೆಬ್ರವರಿ 27, 2021ರಂದು ದೆಹಲಿ ಸಫ್ದರ್ಜಂಗ್‌ನಿಂದ ಪ್ರಾರಂಭವಾಗಲಿದೆ. ಮಹಾಕಲೇಶ್ವರ (ಉಜ್ಜಯಿನಿ) ಮತ್ತು ಓಂಕಾರೇಶ್ವರ ಸೇರಿದಂತೆ ಎರಡು ಪ್ರಮುಖ ಜ್ಯೋತಿರ್ಲಿಂಗ ದೇವಾಲಯಗಳನ್ನು ಒಳಗೊಂಡಿದೆ. ಜೊತೆಗೆ ವಿಶ್ವದ ಅತಿ ಎತ್ತರದ ಪ್ರತಿಮೆ ಇರುವ ಗುಜರಾತ್‌ನ ಕೆವಾಡಿಯಾಕ್ಕೆ ತೆರಳಲಿದೆ.

ಓದಿ:ಚಮೋಲಿ ಹಿಮಪ್ರವಾಹ: ನಾಪತ್ತೆಯಾಗಿದ್ದ ಇಂಜಿನಿಯರ್ ಶವವಾಗಿ ಪತ್ತೆ

ಪ್ರವಾಸಿಗರು ದೆಹಲಿಯ ಸಫ್ದರ್ಜಂಗ್, ಮಥುರಾ, ಆಗ್ರಾ ಮತ್ತು ಗ್ವಾಲಿಯರ್ ರೈಲ್ವೆ ನಿಲ್ದಾಣಗಳಲ್ಲಿ ಈ ರೈಲನ್ನು ಹತ್ತಬಹುದಾಗಿದೆ. ಪ್ರವಾಸ ಪ್ಯಾಕೇಜ್‌ನ ವೆಚ್ಚ ಪ್ರತೀ ವ್ಯಕ್ತಿಗೆ 24,450 ರೂ. ಇದೆ. ಹಣಕಾಸು ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳ ಆಧಾರದ ಮೇಲೆ ಅರ್ಹತೆಯ ಪ್ರಕಾರ ಸರ್ಕಾರಿ / ಪಿಎಸ್‌ಯು ನೌಕರರು ಈ ಪ್ರವಾಸದಲ್ಲಿ ಎಲ್‌ಟಿಸಿ ಸೌಲಭ್ಯವನ್ನು ಪಡೆಯಬಹುದು ಎಂದು ಐಆರ್‌ಸಿಟಿಸಿ ತಿಳಿಸಿದೆ.

"ಈ ಹೊಸ ಡಿಲಕ್ಸ್ ಟೂರಿಸ್ಟ್ ರೈಲು ಎರಡು ಉತ್ತಮ ಊಟದ ರೆಸ್ಟೋರೆಂಟ್‌ಗಳು, ಆಧುನಿಕ ಅಡುಗೆ ಮನೆ, ಬೋಗಿಗಳಲ್ಲಿ ಶವರ್ ಕ್ಯುಬಿಕಲ್ಸ್, ಸೆನ್ಸಾರ್ ಆಧಾರಿತ ವಾಶ್‌ರೂಮ್ ಮತ್ತು ಕಾಲು ಮಸಾಜರ್ ಸೇರಿದಂತೆ ಬೆರಗುಗೊಳಿಸುವ ವೈಶಿಷ್ಟ್ಯಗಳನ್ನು ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತ ರೈಲು ಎರಡು ರೀತಿಯ ಸೌಕರ್ಯಗಳನ್ನು ಒದಗಿಸುತ್ತದೆ. ರೈಲು ಸಿಸಿಟಿವಿ ಕ್ಯಾಮರಾಗಳ ರೂಪದಲ್ಲಿ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ" ಎಂದು ಐಆರ್​ಸಿಟಿಸಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.