ETV Bharat / bharat

ಇವರು IPS ಅವಳಿ ಸಹೋದರರು! ಸಾಧಕರ ಅಪರೂಪದ ಫೋಟೋಗೆ ಮೆಚ್ಚುಗೆ - ಅವಳಿ ಪೊಲೀಸ್ ಅಧಿಕಾರಿಗಳು

ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಅವಳಿ ಸಹೋದರರು ಟ್ವಿಟರ್​ನಲ್ಲಿ ಸಮವಸ್ತ್ರ ಧರಿಸಿ ಕರ್ತವ್ಯದಲ್ಲಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ವಿಶೇಷವಾದ ಸಾಧಕರ ಫೋಟೋಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

IPS Twinning Brothers shared photo on twitter

author img

By

Published : Mar 3, 2022, 3:11 PM IST

ಚೆನ್ನೈ(ತಮಿಳುನಾಡು): ತಮಿಳುನಾಡು ಹಾಗೂ ದೆಹಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಅವಳಿ ಸಹೋದರರು ಟ್ವಿಟರ್​​ ಖಾತೆಯಲ್ಲಿ ವಿಶೇಷವಾದ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದಾರೆ.

ತಮಿಳುನಾಡಿನ ಚೆಂಗಲ್​ಪೇಟೆಯಲ್ಲಿ ಎಸ್​​​ಪಿ ಆಗಿರುವ ಪಿ.ಅರವಿಂದನ್​ ಹಾಗೂ ಅವರ ಸಹೋದರ ತರಬೇತಿಯಲ್ಲಿರುವ ಎಸಿಪಿ ಅಭಿನಂದನ್ ​(ದೆಹಲಿ ಪೊಲೀಸ್ ಇಲಾಖೆ) ಈ ಫೋಟೋದಲ್ಲಿದ್ದಾರೆ.

ಇದನ್ನೂ ಓದಿ: ಬೆಟ್ಟದಿಂದ ರಸ್ತೆಗೆ ಉರುಳಿಬಿದ್ದ ಬೃಹತ್‌ ಬಂಡೆಗಳು: ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್‌

ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಫೋಟೋಗೆ ಲೈಕ್ ಮಾಡಿದ್ದಾರೆ. "ನನ್ನ ಸಹೋದರ ಎಸಿಪಿ ಅಭಿನಂದನ್ ಜೊತೆ ನಾನು.. ತಮಿಳುನಾಡಿನ ಪೊಲೀಸ್​ ದೆಹಲಿ ಪೊಲೀಸರನ್ನು ಭೇಟಿಯಾಗಿರುವ ಸಮಯ" ಎಂದು ಕ್ಯಾಪ್ಷನ್ ನೀಡಿದ್ದಾರೆ.

ತಮಿಳುನಾಡಿನ ಚೆಂಗಲ್​ಪೇಟೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅರವಿಂದನ್​​ ಕಂಪ್ಯೂಟರ್​ ಸೈನ್ಸ್ ಪದವೀಧರ. ಇವರು 2010ರಲ್ಲಿ ಸಿವಿಲ್​ ಸರ್ವೀಸಸ್‌ ಪರೀಕ್ಷೆ ತೇರ್ಗಡೆ ಹೊಂದಿದ್ದು, ಐಪಿಎಸ್​ ಅಧಿಕಾರಿಯಾಗಿದ್ದಾರೆ. ಇವರ ಸಹೋದರ ದೆಹಲಿಯಲ್ಲಿ ಟ್ರೈನಿ ಎಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.