ETV Bharat / bharat

ಐಪಿಎಲ್​ ಬೆಟ್ಟಿಂಗ್.. 93 ಲಕ್ಷ ರೂ. ನಗದು, 2.2 ಕೋಟಿ ರೂ. ಮೌಲ್ಯದ ಆಸ್ತಿ ಸೇರಿ 23 ಬುಕ್ಕಿಗಳ ಬಂಧನ.. - ಹೈದರಾಬಾದ್​ ಪೊಲೀಸರು

ಬಂಧಿತ ಆರೋಪಿಗಳ ವಿರುದ್ಧ ಏಳು ಪ್ರಕರಣ ದಾಖಲು ಮಾಡಲಾಗಿದೆ. ಇವರು ಮುಂಬೈ, ಗೋವಾ ಹಾಗೂ ದುಬೈ ನೆಟ್​ವರ್ಕ್​ ಜೊತೆ ನೇರ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ..

IPL CRICKET BETTING
IPL CRICKET BETTING
author img

By

Published : Sep 29, 2021, 5:12 PM IST

Updated : Sep 29, 2021, 5:18 PM IST

ಹೈದರಾಬಾದ್​​(ತೆಲಂಗಾಣ) : ಐಪಿಎಲ್​ ಕ್ರಿಕೆಟ್​ ಬೆಟ್ಟಿಂಗ್​​ ಅಡ್ಡೆ ಮೇಲೆ ದಾಳಿ ನಡೆಸಿರುವ ಸೈಬರಾಬಾದ್​​​ ಪೊಲೀಸರು ಬರೋಬ್ಬರಿ 23 ಬುಕ್ಕಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 93 ಲಕ್ಷ ರೂ. ನಗದು ಹಣ ಸೇರಿ 2.2 ಕೋಟಿ ರೂ. ಮೌಲ್ಯದ ವಸ್ತು ವಶಕ್ಕೆ ಪಡೆದಿದ್ದಾರೆ.

ಸೈಬರಾಬಾದ್​ ಪೊಲೀಸರ ಭರ್ಜರಿ ಕಾರ್ಯಾಚರಣೆ

ಹೈದರಾಬಾದ್​ನಲ್ಲಿ ಬಂಧನವಾಗಿರುವ ಅತಿದೊಡ್ಡ ಕ್ರಿಕೆಟ್​ ಬೆಟ್ಟಿಂಗ್​ ತಂಡ ಇದಾಗಿದೆ. ದುಬೈನಲ್ಲಿ ನಡೆಯುತ್ತಿರುವ ಐಪಿಎಲ್​ ಕ್ರಿಕೆಟ್ ಪಂದ್ಯಗಳಲ್ಲಿ ಬೆಟ್ಟಿಂಗ್​​​ನಲ್ಲಿ ತೊಡಗಿದ್ದರು ಎಂದು ಸೈಬರಾಬಾದ್​​ ಪೊಲೀಸ್​ ಆಯುಕ್ತ ಸ್ಟೀಫನ್​​ ರವೀಂದ್ರ ತಿಳಿಸಿದ್ದಾರೆ.

ಇದನ್ನೂ ಓದಿರಿ: ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಖಾಯಂ: ಹೈಕೋರ್ಟ್​ ಮಹತ್ವದ ತೀರ್ಪು

ಹೈದರಾಬಾದ್​ನ ಮೀಯಾಪುರ, ಬಾಚುಪಲ್ಲಿ, ಗಾಚಿಬೌಲಿ, ಮೈಲಾರ್ ದೇವಪಲ್ಲಿ ಸೇರಿ 7 ಪ್ರದೇಶಗಳಲ್ಲಿ ದಾಳಿ ನಡೆಸಿದ್ದು, ಅದರಲ್ಲಿ ಯಶಸ್ವಿಯಾಗಿದ್ದಾಗಿ ತಿಳಿಸಿದ್ದಾರೆ. ದುಬೈನಲ್ಲಿ ನಿನ್ನೆ ಮುಂಬೈ ಹಾಗೂ ಪಂಜಾಬ್​ ತಂಡಗಳ ನಡುವಿನ ಪಂದ್ಯದ ವೇಳೆ ಬೆಟ್ಟಿಂಗ್​ ನಡೆಯುತ್ತಿದ್ದ ನಿಖರ ಮಾಹಿತಿ ಆಧರಿಸಿ ದಾಳಿ ನಡೆಸಿದ್ದರು.

ಬಂಧಿತ ಆರೋಪಿಗಳ ವಿರುದ್ಧ ಏಳು ಪ್ರಕರಣ ದಾಖಲು ಮಾಡಲಾಗಿದೆ. ಇವರು ಮುಂಬೈ, ಗೋವಾ ಹಾಗೂ ದುಬೈ ನೆಟ್​ವರ್ಕ್​ ಜೊತೆ ನೇರ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ.

Last Updated : Sep 29, 2021, 5:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.