ETV Bharat / bharat

Interview: ಮೋದಿ ಬದಲಾಗಿದ್ದಾರೆ, ಪ್ರಧಾನಿ ಹುದ್ದೆಗೆ ಯೋಗಿ ಸೂಕ್ತವಲ್ಲ; ಮಾಜಿ ರಾಜ್ಯಪಾಲ ಮಲ್ಲಿಕ್​ - ಜಮ್ಮು ಮತ್ತು ಕಾಶ್ಮೀರ ಮಾಜಿ ರಾಜ್ಯಪಾಲರಾದ ಸತ್ಯಪಾಲ್​

ಜಮ್ಮು ಮತ್ತು ಕಾಶ್ಮೀರದ ಕಡೆಯ ರಾಜ್ಯಪಾಲರಾಗಿದ್ದ ಸತ್ಯಪಾಲ್​ ಮಲ್ಲಿಕ್​ ಅವರ ಸಂದರ್ಶನವನ್ನು 'ಈಟಿವಿ ಭಾರತ್' ಪ್ರತಿನಿಧಿ ಸೌರಭ್​ ಶರ್ಮಾ ನಡೆಸಿದ್ದು, ಈ ವೇಳೆ ಅವರು ಮುಕ್ತವಾಗಿ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ.

Interview: Modi has changed, Yogi is not fit for PM post; The former governor of Jammu and Kashmir spoke on many issues

author img

By

Published : Apr 13, 2023, 11:19 AM IST

ನವದೆಹಲಿ: ಗುಜರಾತ್​ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪ್ರಧಾನಿಗಳಾದ ಬಳಿಕ ಬಹಳ ಬದಲಾವಣೆ ಕಂಡಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ರಾಜ್ಯಪಾಲರಾದ ಸತ್ಯಪಾಲ್​ ಮಲ್ಲಿಕ್​ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಅವರು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಪ್ರಧಾನಿಯಾದರೆ ಅದು ದುಃಖದ ದಿನವಾಗಿರಲಿ ಎಂದಿದ್ದಾರೆ. ಸಂದರ್ಶನದಲ್ಲಿ ರಾಜ್ಯಪಾಲರಾಗಿದ್ದ ಜಮ್ಮು ಕಾಶ್ಮೀರದಲ್ಲಿ ತಮ್ಮ ಆಡಳಿತ, ಅಬ್ದುಲ್ಲಾ ಮತ್ತು ಮುಫ್ತಿ ಜೊತೆಗಿನ ಸಂಬಂಧ, ಫ್ಯಾಕ್ಸ್​​​ ವಿವಾದ, ವಿಧಿ 370 ರದ್ದು, ಪುಲ್ವಾಮಾ ದಾಳೆ ಸೇರಿದಂತೆ ಅದಾನಿ ವಿಷಯದವರೆಗೆ ಹಲವು ವಿಚಾರಗಳ ಕುರಿತು ಅವರು 'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಮಾತನಾಡಿದ್ದಾರೆ..

ಪ್ರಶ್ನೆ: ನಿಮ್ಮ ಭದ್ರತೆ ಕಡಿತವನ್ನು ಹೇಗೆ ನೋಡುತ್ತೀರ? ಇದು ರಾಜಕೀಯ ದ್ವೇಷವೇ?

ಉತ್ತರ: ಜಗಮೋಹನ್ ಮತ್ತು ಇತರ ಹಿಂದಿನ ಎಲ್ಲಾ ರಾಜ್ಯಪಾಲರ ಭದ್ರತೆಯನ್ನು ಎಂದಿಗೂ ಕಡಿತ ಮಾಡಲಾಗಿಲ್ಲ. ಎಲ್‌ ಕೆ ಅಡ್ವಾಣಿ, ಗುಲಾಂ ನಬಿ ಆಜಾದ್, ಮುರಳಿ ಮನೋಹರ ಜೋಶಿ ಅವರು ಈಗ ಸಂಸದರಾಗಿಲ್ಲದಿದ್ದರೂ ಇಂದಿಗೂ ಸರ್ಕಾರಿ ಬಂಗಲೆಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ನಾನು ರೈತರ ಪರ ನಿಂತಿದ್ದೇನೆ ಎಂಬ ಕಾರಣಕ್ಕೆ ನನಗೆ ಹೆದರಿ ಭದ್ರತೆಯನ್ನು ಹಿಂಪಡೆದರು. ಸರ್ಕಾರಕ್ಕೆ ನನ್ನ ನಿಲುವು ಇಷ್ಟವಾಗಲಿಲ್ಲ.

ಪ್ರಶ್ನೆ: ಪಿಎಂ ಮೋದಿ ಹೊರತಾಗಿ ಬಿಜೆಪಿಯಲ್ಲಿ ಬೇರೆ ಯಾರಾದರೂ ಪರ್ಯಾಯ?

ಉತ್ತರ: ನಿತಿನ್​ ಗಡ್ಕರಿ ಉತ್ತಮ ಮನುಷ್ಯ. ಪ್ರತಿಯೊಬ್ಬರು ಅವರನ್ನು ಇಷ್ಟಪಡುತ್ತಾರೆ. ಅಮಿತ್​ ಶಾ ಕೂಡ ಸಮರ್ಥ ವ್ಯಕ್ತಿ ಎಂದಿದ್ದಾರೆ ಮಾಜಿ ಗವರ್ನರ್​.

ಪ್ರಶ್ನೆ: ಯೋಗಿ ಆದಿತ್ಯನಾಥ್​ ಮತ್ತು ರಾಜನಾಥ್​ ಬಗ್ಗೆ?

ಉತ್ತರ: ನಿರ್ದಿಷ್ಟ ಜನರಿಗೆ ಯೋಗಿ ಆದಿತ್ಯನಾಥ್​ ಪ್ರಧಾನಿಯಾಗಬಹುದು. ಅವರು ಪ್ರಧಾನಿಯಾದರೇ ಅದು ಭಾರತಕ್ಕೆ ಒಳ್ಳೆಯ ದಿನ ಆಗಿರುವುದಿಲ್ಲ. ರಾಜನಾಥ್​ ಸಿಂಗ್​ ಕೂಡ ಉತ್ತಮ ಮನುಷ್ಯ. ಆದರೆ ಅವರು ಸಂಪೂರ್ಣ ಶರಣಾಗಿದ್ದಾರೆ. ಇದರ ಬಗ್ಗೆ ನಾನು ಏನು ಹೇಳುವುದಿಲ್ಲ. ಗಡ್ಕರಿ ಈಗಾಗಲೇ ತಮ್ಮನ್ನು ಬದಿಗೆ ಸರಿಸಿದ್ದಾರೆ ಎಂದು ಹೇಳಿದ್ದಾರೆ.

ಪ್ರಶ್ನೆ: ಬಿಜೆಪಿ ಆಂತರಿಕ ಸಭೆಯಲ್ಲಿ ಯಾರಾದರೂ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ರಾ?

ಉತ್ತರ: ಪ್ರಧಾನಿ ಮೋದಿ ಮುಂದೆ ಯಾರೂ ಮಾತನಾಡುವುದಿಲ್ಲ. ಅವರು ಯಾವುದನ್ನು ಚರ್ಚೆ ಮಾಡುವುದಿಲ್ಲ. ಅವರು ಕೆಲವು ಕ್ಷುಲ್ಲಕ ವಿಷಯದ ಕುರಿತು ಮಾತನಾಡಬಹುದು. ಪ್ರಧಾನಿ ಮೋದಿ ಸಂಪೂರ್ಣವಾಗಿ ಬದಲಾಗಿದ್ದಾರೆ. ಗುಜರಾತ್​ ಸಿಂ ಆಗಿದ್ದ ಸಂದರ್ಭದಲ್ಲಿನ ಮೋದಿ ಇದೀಗ ಸಂಪೂರ್ಣವಾಗಿ ವಿಭಿನ್ನರಾಗಿದ್ದಾರೆ. ಅವರು ಅಹಂಕಾರಿ ಮತ್ತು ಪ್ರತೀಕಾರದಿಂದ ತುಂಬಿದ ವ್ಯಕ್ತಿಯಾಗಿದ್ದಾರೆ.

ಪ್ರಶ್ನೆ: ರಾಹುಲ್​ ಗಾಂಧಿ ಅನರ್ಹತೆ ಬಗ್ಗೆ ನಿಮ್ಮ ಅಭಿಪ್ರಾಯ?

ಉತ್ತರ: ಅದು ಅಸಂವಿಧಾನ ಮತ್ತು ಪ್ರಭಾಪ್ರಭುತ್ವ ವಿರೋಧಿ ನಡೆ. ರಾಹುಲ್​ ಗಾಂಧಿ ಮಾತನಾಡಲು ಸ್ಪೀಕರ್​ ಅವಕಾಶ ನೀಡಲಿಲ್ಲ. ಈ ರೀತಿ ಪ್ರಜಾಪ್ರಭುತ್ವ ನಡೆಯುವುದಿಲ್ಲ.

ಪ್ರಶ್ನೆ: ಅದಾನಿ ವಿಷಯ ರಾಷ್ಟ್ರೀಯ ವಿಚಾರವಾಗಿ ಅದು ಲೋಕಸಭೆಯಲ್ಲಿ ಬಿಜೆಪಿ ಪಾಲಿಗೆ ಮುಳುವಾಗುತ್ತದಾ?

ಉತ್ತರ: ಇದಕ್ಕೆ ಮೊದಲು ಈ ವಿಚಾರ ಇನ್ನಷ್ಟು ಆಳಕ್ಕೆ ಇಳಿದಿದೆ. ಭವಿಷ್ಯದಲ್ಲಿ ಬಿಜೆಪಿಗೆ ಇದು ಸಮಸ್ಯೆ ವಿಚಾರವಾಗಲಿದೆ. ಈ ವಿಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಕೂಡ ಯಾವುದೇ ಸ್ಪಷ್ಟನೆ ನೀಡದೇ, ಮೌನವಾಗಿದ್ದಾರೆ. ಜನರು ಇದನ್ನು ಗಮನಿಸುತ್ತಿದ್ದು, ಪರಿಣಾಮ ಕಾಣಬಹುದು ಎಂದರು.

ಪ್ರಶ್ನೆ: ಕಾಶ್ಮೀರದ ಕಡೆಯ ರಾಜ್ಯಪಾಲರಾಗಿದ್ದ ನೀವು 15 ತಿಂಗಳು ಕಾಲ ಅಧಿಕಾರದಲ್ಲಿದ್ರಿ? ಕಾಶ್ಮೀರದ ಒಳಗೆ ಮತ್ತು ಹೊರಗಿನ ದೊಡ್ಡ ಸಮಸ್ಯೆ ಯಾವುದು?

ಉತ್ತರ: ಕಾಶ್ಮೀರದ ಬಗ್ಗೆ ತಿಳುವಳಿಕೆಯಿಲ್ಲದೆ ಸಚಿವಾಲಯಗಳು ಮತ್ತು ಅಧಿಕಾರಿಗಳೊಂದಿಗೆ ಕಾಶ್ಮೀರದ ಆಡಳಿತವನ್ನು ನವದೆಹಲಿಯಿಂದ ನಡೆಸಲಾಗುತ್ತಿದೆ. ಶೇ. 50ರಷ್ಟು ಸಮಸ್ಯೆ ನಮ್ಮಲ್ಲಿದ್ರೆ, ಉಳಿದ ಅರ್ಧ ಸಮಸ್ಯೆ ಕಾಶ್ಮೀರಿ ನಾಯಕರಲ್ಲಿದೆ.

ಪ್ರಶ್ನೆ: ನಿಮ್ಮ ಅಧಿಕಾತಾವಧಿಯಲ್ಲಿ ಕಾಶ್ಮೀರಿ ನಾಯಕರು ಎರಡು ಅಭಿಪ್ರಾಯ ಹೊಂದಿದ್ದಾರೆ ಎಂದು ಆರೋಪಿಸಿದ್ರಿ? ಆ ಮಾತಿನ ಅರ್ಥವೇನು?

ಉತ್ತರ: ಹೌದು, ಅವರು ಹಾಗೇ ಇದ್ದಾರೆ. ಅವರು ದೆಹಲಿಯಲ್ಲಿದ್ದಾಗೆ ಬೇರೆ ಭಾಷೆಯಲ್ಲಿ ಮಾತನಾಡುತ್ತಾರೆ. ಇಲ್ಲಿಗೆ ಬಂದಾಗ ಅವರ ಹಸಿರು ಹ್ಯಾಂಡ್​ಖರ್ಚಿಫ್​ ತೆಗೆಯುತ್ತಾರೆ ಎಂದು ಸತ್ಯಪಾಲ್​ ಮಲ್ಲಿಕ್​ ಹೇಳಿದ್ದಾರೆ.

ಪ್ರಶ್ನೆ: 2018ರಲ್ಲಿ ವಿಧಾನಸಭೆಯನ್ನು ವಿಸರ್ಜಿಸಿದಾಗ, ಫ್ಯಾಕ್ಸ್​ ವಿವಾದ ಉಂಟಾಯಿತು? ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಅವರು ಪಿಡಿಪಿ-ಎನ್​ಸಿ-ಕಾಂಗ್ರೆಸ್ ಮೈತ್ರಿಯನ್ನು ಸಾಬೀತುಪಡಿಸಬಹುದಾದ ಫ್ಯಾಕ್ಸ್ ಅನ್ನು ನಿರ್ಲಕ್ಷಿಸಿದ್ದಕ್ಕಾಗಿ ನಿಮ್ಮನ್ನು ದೂಷಿಸಲಾಯಿತು?

ಉತ್ತರ: ಸರ್ಕಾರವನ್ನು ಟ್ವಿಟರ್​ ಅಥವಾ ಫ್ಯಾಕ್ಸ್​ನಿಂದ ಮಾಡಲಾಗಿಲ್ಲ. ಅವರು ಪರಸ್ಪರ ಸಮಾಲೋಚಿಸಿದ ನಂತರ ಲಿಖಿತ ದಾಖಲೆಯೊಂದಿಗೆ ನನ್ನ ಬಳಿಗೆ ಬರಬೇಕು. ನಾನು ಆಗ ಅವರ ಬಹುಮತವನ್ನು ಒಪ್ಪಿಕೊಳ್ಳುತ್ತಿದ್ದೆ. ಆದರೆ ಅದು ಎಂದಿಗೂ ನಡೆಯಲಿಲ್ಲ ಅವರು ವಿಷಯಗಳನ್ನು ಲಘುವಾಗಿ ತೆಗೆದುಕೊಂಡರು. ಬಹುಮತವನ್ನು ಹೊಂದಿದ್ದರೂ, ಅದನ್ನು ಹೇಗೆ ಸಾಬೀತುಪಡಿಸಬೇಕೆಂದು ಅವರಿಗೆ ತಿಳಿದಿರಲಿಲ್ಲ.

ಪ್ರಶ್ನೆ: ಪೀಪಲ್ಸ್ ಕಾನ್ಫರೆನ್ಸ್ ಸಜ್ಜದ್ ಲೋನ್ ಹೇಗೆ ಮುನ್ನಲೆಗೆ ಬಂದರು? ಅವರು ಕೇವಲ 4 ಸ್ಥಾನಗಳೊಂದಿಗೆ ಬಿಜೆಪಿ ಮತ್ತು 18 ಇತರರ ಬೆಂಬಲದೊಂದಿಗೆ ಬಹುಮತವನ್ನು ಹೇಳುತ್ತಿದ್ದರು?

ಉತ್ತರ: ನಾನು ಅವರಿಗೆ ಪತ್ರದ ಮೂಲಕ ಮನವಿಯನ್ನು ಕಳುಹಿಸುವಂತೆ ಹೇಳಿದೆ. ಆದರೆ, ಪ್ರಮಾಣದ ಮೂಲಕವಾಗಿ ಆಡಳಿತ ನೀಡಿದರೆ ಅವರು ವಾರದೊಳಗೆ ಬಹುಮತ ಸಾಬೀತುಪಡಿಸುವುದಾಗಿ ಹೇಳಿದರು. ಅವರು ಈ ವಿಚಾರವನ್ನು ನನ್ನ ಪಿಎಗೆ ಹೇಳಿದ್ದಾಗಿ ಹೇಳಿದ್ದರು. ಆದರೆ ಅವರು ಮಾತನಾಡಿರುವ ವ್ಯಕ್ತಿ ನನ್ನ ಹಿಂದಿನ ಪಿಎ ಎಂದರು.

ಪ್ರಶ್ನೆ: ಕಾಶ್ಮೀರದಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದೀರಾ?

ಉತ್ತರ: ಈ ವಿಚಾರದ ಕುರಿತು ಮಾತನಾಡುವುದಿಲ್ಲ. ಕಾಶ್ಮೀರಿ ನಾಯಕರು ಜನರ ಹಣವನ್ನು ಕೊಳ್ಳೆ ಹೊಡೆದಿದ್ದಾರೆ. ಇದು ಬಚ್ಚಿಟ್ಟಿರುವ ಸತ್ಯ ಅಲ್ಲ ಎಂದರು.

ಪ್ರಶ್ನೆ: ಅಬ್ಲುಲ್ಲಾ ಮತ್ತು ಮುಫ್ತಿ ಅವರ ವಿರುದ್ಧ ಆರೋಪ ಮಾಡುತ್ತಿದ್ದೀರಾ?

ಉತ್ತರ: ಯಾರ ಹೆಸರನ್ನು ತೆಗೆದುಕೊಳ್ಳಲು ನಾನು ಇಚ್ಛಿಸುವುದಿಲ್ಲ. ಜನರಿಗೆ ಎಲ್ಲಾ ತಿಳಿದಿದೆ ಎಂದರು.

ಪ್ರಶ್ನೆ: ವಿಧಿ 370ನ್ನು ರದ್ದುಪಡಿಸಿದ ವಿಧಾನ, ಈಗ ನೀವು ಹಿಂತಿರುಗಿ ನೋಡಿದಾಗ, ಅದನ್ನು ಹೇಗೆ ಮಾಡಬೇಕಾಗಿತ್ತು?

ಉತ್ತರ: ನನಗೆ ಇದರಲ್ಲಿ ಅನುಮಾನವಿಲ್ಲ. ಕೆಲವು ನಿರ್ಬಂಧಗಳು ಮತ್ತು ಸಂವಹನ ದಿಗ್ಬಂಧನಗಳು ಇದ್ದವು. ಆದರೆ ಭದ್ರತೆಯು ಈ ಎಲ್ಲಾ ಮಿತಿಗಳನ್ನು ಮೀರಿದೆ. ಇದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿತ್ತು. ಆದ್ದರಿಂದ ನಾವು ಅದನ್ನು ಮಾಡಬೇಕಾಗಿತ್ತು. ಆದರೆ ಎಲ್ಲಾ ಕೆಲಸಗಳು ಬಹಳ ಸುಗಮವಾಗಿ ನಡೆದವು.

ಪ್ರಶ್ನೆ: ವಿಧಿ 370 ರದ್ದು ಬಳಿಕ ಎಲ್ಲವೂ ನಿಜಕ್ಕೂ ಬದಲಾದವಾ?

ಉತ್ತರ: ಹೌದು, ಕೆಲವು ವಿಚಾರಗಳು ಸುಧಾರಣೆ ಕಂಡಿವೆ. ಈ ಹಿಂದೆ ನಾವು ಭಾರತೀಯರಲ್ಲ ಎಂಬ ಭಾವನೆ ಇತ್ತು. ವಿಷಯಗಳು ಸುಧಾರಿಸಿದ್ದು, ಪರಕೀಯತೆ ಕಡಿಮೆಯಾಗಿದೆ ಎಂದರು.

ಪ್ರಶ್ನೆ: ಪುಲ್ವಾಮಾ ಘಟನೆ ಗುಪ್ತಚರ ಇಲಾಖೆ ಸೋಲಾ?

ಉತ್ತರ: ಹೌದು. ಇದರಲ್ಲಿ ಭದ್ರತೆ ಲೋಪ ಇದೆ. ಸೇನಾ ದಳ ಈ ಹಿಂದೆ ಸಿಆರ್‌ಪಿಎಫ್ ಸಿಬ್ಬಂದಿಗೆ ವಿಮಾನಗಳನ್ನು ಕೇಳಿದ್ದವು. ಆದರೆ, ರಾಜನಾಥ್ ಸಿಂಗ್​ ನಿರಾಕರಿಸಿದರು. ಇದರಿಂದ ಅವರು ರಸ್ತೆಯ ಮೂಲಕ ಹೋಗಬೇಕಾಯಿತು. ಕಾಶ್ಮೀರದ ಸಂದರ್ಭದಲ್ಲಿ ಇದು ಅಪಾಯಕಾರಿ ಹೆಜ್ಜೆಯಾಗಿತ್ತು. ಬೆಂಗಾವಲು ಪಡೆ ಸಂಚರಿಸುತ್ತಿದ್ದ ಪ್ರದೇಶ ಮತ್ತು ದಾಳಿ ನಡೆದ ಸ್ಥಳದಲ್ಲಿ ಭದ್ರತೆ ಇರಲಿಲ್ಲ. ಹಾಗಾಗಿ ಇದು ನಮ್ಮ ಅಸಮರ್ಥತೆಯಾಗಿತ್ತು. ಆ ಪ್ರಮಾದಕ್ಕೆ ಯಾರಿಗಾದರೂ ಶಿಕ್ಷೆಯಾಗಬೇಕಿತ್ತು. ರಾಜನಾಥ್ ಅಲ್ಲದಿದ್ದರೆ, ಅವರ ಅಧೀನದಲ್ಲಿರುವವರು ಸೇರಿದಂತೆ ಕಾರ್ಯದರ್ಶಿಗಳು ಮತ್ತು ಇತರರು ಶಿಕ್ಷೆ ಅನುಭವಿಸಬೇಕಾಗಿತ್ತು. ಆದರೆ ತಮ್ಮ ಅಸಾಮರ್ಥ್ಯವನ್ನು ಮರೆಮಾಚಲು, ಅವರು ಪಾಕಿಸ್ತಾನದ ವಿರುದ್ಧ ಎಲ್ಲವನ್ನೂ ಹಾಕಿದರು. ಆ ಮೇಲೆ ಚುನಾವಣೆಯನ್ನು ಗೆದ್ದರು ಎಂದು ಸತ್ಯಪಾಲ್​ ಮಲ್ಲಿಕ್ ಸಂದರ್ಶನದಲ್ಲಿ ಸುದೀರ್ಘವಾಗಿ ಹಲವು ವಿಚಾರಗಳನ್ನು 'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಹಂಚಿಕೊಂಡರು.

ಇದನ್ನೂ ಓದಿ: ಬಠಿಂಡಾ ಸೇನಾ ನೆಲೆ ಮೇಲೆ ದಾಳಿ: ಮತ್ತೊಬ್ಬ ಯೋಧ ಹುತಾತ್ಮ, ಸಾವಿನ ಸಂಖ್ಯೆ 5 ಕ್ಕೇರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.