ETV Bharat / bharat

WhatsApp ಮೂಲಕ ಅಂತಾರಾಜ್ಯ ಸೆಕ್ಸ್​ ದಂಧೆ; ನಾಲ್ವರು ಯುವತಿಯರ ರಕ್ಷಣೆ

author img

By

Published : Dec 25, 2021, 9:31 PM IST

ಕ್ರಿಸ್​​ಮಸ್​​​ ಹಾಗೂ ಹೊಸ ವರ್ಷಾಚರಣೆ ವೇಳೆ ಇಲ್ಲಿನ ಗಿರಿಧಾಮಗಳಿಗೆ ಭೇಟಿ ನೀಡುವ ಗ್ರಾಹಕರೊಂದಿಗೆ ಸಹಕರಿಸಲು ಪಂಜಾಬ್​, ದೆಹಲಿ ಮತ್ತು ಜಾರ್ಖಂಡ್​​ನಿಂದ ಹುಡುಗಿಯರ ಕರೆ ತರಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Gang operating sex racket through WhatsApp

ಡೆಹ್ರಾಡೂನ್​​(ಉತ್ತರಾಖಂಡ): ವಾಟ್ಸ್​​ಆ್ಯಪ್​ ಮೂಲಕ ನಡೆಸಲಾಗುತ್ತಿದ್ದ ಅಂತಾರಾಜ್ಯ ಸೆಕ್ಸ್​ ದಂಧೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ಉತ್ತರಾಖಂಡ ಮಾನವ ಕಳ್ಳಸಾಗಣೆ ವಿರೋಧಿ ಘಟಕ ನಾಲ್ವರು ಯುವತಿಯರ ರಕ್ಷಣೆ ಮಾಡಿದ್ದಾರೆ.

ಗ್ಯಾಂಗ್​​ನ ಕಿಂಗ್​​​ಪಿನ್​​​ ಸೇರಿದಂತೆ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದ್ದು, ವಿವಿಧ ರಾಜ್ಯದ ನಾಲ್ವರು ಯುವತಿಯರ ರಕ್ಷಣೆ ಮಾಡಲಾಗಿದೆ. ಬೈಪಾಸ್​​ ರಸ್ತೆ ಮೂಲಕ ಮಸ್ಸೂರಿ ಕಡೆ ಸಾಗುತ್ತಿದ್ದ ವೇಳೆ ಗ್ಯಾಂಗ್​ ಮೇಲೆ ದಾಳಿ ನಡೆಸಲಾಗಿದ್ದು, ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ.

ಕ್ರಿಸ್​​ಮಸ್​​​ ಹಾಗೂ ಹೊಸ ವರ್ಷಾಚರಣೆ ವೇಳೆ ಇಲ್ಲಿನ ಗಿರಿಧಾಮಗಳಿಗೆ ಭೇಟಿ ನೀಡುವ ಗ್ರಾಹಕರೊಂದಿಗೆ ಸಹಕರಿಸಲು ಪಂಜಾಬ್​, ದೆಹಲಿ ಮತ್ತು ಜಾರ್ಖಂಡ್​​ನಿಂದ ಹುಡುಗಿಯರ ಕರೆ ತರಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿರಿ: ಯಾವುದೇ ಸಂಪರ್ಕವಿಲ್ಲದಿದ್ದರೂ ವೈದ್ಯನಲ್ಲಿ ಕಾಣಿಸಿಕೊಂಡ ಒಮಿಕ್ರಾನ್​!

ಗ್ಯಾಂಗ್​ನ ಕಿಂಗ್​ ಪಿನ್​​​​ ರಾಹುಲ್​ ಪಾಟೀಲ್​(28) ಆತನ ಸಹಚರ ರಾಹುಲ್​ ಕುಮಾರ್​(23) ಬಂಧಿತರು ಎಂದು ಗುರುತಿಸಲಾಗಿದೆ. ಬಂಧಿತರಿಂದ ಆಕ್ಷೇಪಾರ್ಹ ವಸ್ತು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಪ್ರಮುಖ ಆರೋಪಿ ರಾಹುಲ್ ಪಾಟೀಲ್​ ಈ ಹಿಂದೆಯೂ ಇದೇ ಪ್ರಕರಣದಲ್ಲಿ ಜೈಲು ಸೇರಿದ್ದನು ಎಂದು ತಿಳಿದು ಬಂದಿದೆ.

ಬಂಧಿತರನ್ನ ವಿಚಾರಣೆಗೊಳಪಡಿಸಿದಾಗ ಕಳೆದ ಹಲವು ವರ್ಷಗಳಿಂದ ಮಾನವ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಮಾಹಿತಿ ಹೊರಬಿದ್ದಿದ್ದು, 2018ರಲ್ಲಿ ಬಂಧನಕ್ಕೊಳಗಾಗಿ ತದನಂತರ ಜಾಮೀನು ಮೇಲೆ ಹೊರಬಂದು ಮತ್ತೆ ಅದೇ ದಂಧೆಯಲ್ಲಿ ಭಾಗಿಯಾಗಿದ್ದನು.

ವಾಟ್ಸ್​​ಆ್ಯಪ್​ ಗ್ರೂಪ್​ ರಚನೆ ಮಾಡಿಕೊಂಡು ಹುಡುಗಿಯರ ಮಾಹಿತಿ ಹಂಚಿಕೊಳ್ಳತ್ತಿದ್ದನು. ಇದಾದ ಬಳಿಕ ವಿವಿಧ ರಾಜ್ಯಗಳ ಹುಡುಗಿಯರಿಗೆ ಉದ್ಯೋಗ ನೀಡುವ ಭರವಸೆ ನೀಡಿ, ಸೆಕ್ಸ್​ ದಂಧೆಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.