ETV Bharat / bharat

ಇಂಟರ್​ನೆಟ್​ಗೆ ಗಡಿಗಳಿಲ್ಲ, ಸೈಬರ್ ಭದ್ರತೆಗೆ ದೇಶಗಳ ಒಗ್ಗಟ್ಟು ಅಗತ್ಯ; ಸಚಿವ ರಾಜೀವ್ ಚಂದ್ರಶೇಖರ್ - ಅಂತರ್ಜಾಲವು ಗಡಿಗಳನ್ನು ಗುರುತಿಸದ ಪ್ರದೇಶ

ಇಂಟರ್​ನೆಟ್​ಗೆ ಗಡಿಗಳಿಲ್ಲ, ಹೀಗಾಗಿ ಸೈಬರ್​ ಭದ್ರತೆಗಾಗಿ ವಿಶ್ವದ ಎಲ್ಲ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವುದು ಅಗತ್ಯ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

Internet is borderless, all nations must work together on cyber safety: MoS IT

author img

By

Published : Jul 13, 2023, 7:48 PM IST

ನವದೆಹಲಿ: ಇಂಟರ್​ನೆಟ್​ ಎಂಬುದು ಗಡಿಗಳನ್ನು ಮೀರಿದ ಜಾಲವಾಗಿದೆ. ಹೀಗಾಗಿ ಸೈಬರ್ ಸ್ಪೇಸ್‌ ಅನ್ನು ಭವಿಷ್ಯದಲ್ಲಿ ಸುರಕ್ಷಿತವಾಗಿ ಮತ್ತು ವಿಶ್ವಾಸಾರ್ಹವಾಗಿ ಇರಿಸಿಕೊಳ್ಳಲು ಎಲ್ಲಾ ದೇಶಗಳು ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಗುರುವಾರ ಹೇಳಿದ್ದಾರೆ.

ಗುರುಗ್ರಾಮ್‌ನಲ್ಲಿ ನಡೆದ 'ಎನ್‌ಎಫ್‌ಟಿಗಳು, ಎಐ ಮತ್ತು ಮೆಟಾವರ್ಸ್‌ನ ಯುಗದಲ್ಲಿ ಅಪರಾಧ ಮತ್ತು ಭದ್ರತೆ' ಕುರಿತಾದ ಜಿ 20 ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ತಂತ್ರಜ್ಞಾನವು ಒಳ್ಳೆಯದನ್ನು ತರಲು ತನ್ನ ಶಕ್ತಿಯನ್ನು ಪ್ರದರ್ಶಿಸಿದೆ, ಆದರೆ, ಅದು ಬಳಕೆದಾರರಿಗೆ ಹಾನಿ ಉಂಟು ಮಾಡುತ್ತಿದೆ, ತಪ್ಪು ಮಾಹಿತಿ ನೀಡುತ್ತಿದೆ ಮತ್ತು ಅಪರಾಧಗಳಿಗೂ ಕಾರಣವಾಗಿದೆ ಎಂದರು.

"ಅಂತರ್ಜಾಲವು ಗಡಿಗಳನ್ನು ಗುರುತಿಸದ ಪ್ರದೇಶವಾಗಿದೆ. ಇದರಿಂದ ಸಂತ್ರಸ್ತನಾದ ವ್ಯಕ್ತಿಯು ಒಂದು ದೇಶದಲ್ಲಿದ್ದರೆ, ಅಪರಾಧ ಮತ್ತೊಂದು ದೇಶದಲ್ಲಿ ನಡೆದಿರುತ್ತದೆ ಮತ್ತು ಮತ್ತು ಅಪರಾಧಿ ಯಾವುದೋ ಮೂರನೇ ರಾಷ್ಟ್ರದಲ್ಲಿರುತ್ತಾನೆ" ಎಂದು ಸಚಿವರು ಸಭೆಗೆ ತಿಳಿಸಿದರು.

"ಇಂಟರ್‌ನೆಟ್‌ನಲ್ಲಿ ಬಳಕೆದಾರರಿಗೆ ಹಾನಿಯಾಗುವುದು, ಕೆಡುಕಾಗುವುದು ಮತ್ತು ಅಪರಾಧಗಳಿಗೆ ಗುರಿಯಾಗುವ ಸವಾಲುಗಳನ್ನು ಎದುರಿಸಲು ವಿಶ್ವದಾದ್ಯಂತ ಕಾನೂನು ಜಾರಿ ಸಂಸ್ಥೆಗಳು ಮತ್ತು ಸರ್ಕಾರಗಳಿಂದ ವಿಭಿನ್ನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂಬುದು ಸ್ಪಷ್ಟವಾಗಿದೆ" ಎಂದು ಚಂದ್ರಶೇಖರ್ ತಿಳಿಸಿದರು.

ಎರಡು ದಿನಗಳ G20 ಸಮ್ಮೇಳನದಲ್ಲಿ G20 ದೇಶಗಳ 900 ಕ್ಕೂ ಹೆಚ್ಚು ಪ್ರತಿಷ್ಠಿತ ವ್ಯಕ್ತಿಗಳು ಮತ್ತು ವಿಶೇಷ ಆಹ್ವಾನಿತ ದೇಶಗಳ ಪ್ರತಿನಿಧಿಗಳು, ಅಂತರರಾಷ್ಟ್ರೀಯ ಸಂಸ್ಥೆಗಳು, ತಂತ್ರಜ್ಞಾನ ನಾಯಕರು ಮತ್ತು ತಜ್ಞರು ಸೈಬರ್ ಬೆದರಿಕೆಗಳಿಂದ ಡಿಜಿಟಲ್ ಸ್ಪೇಸ್​ ಅನ್ನು ರಕ್ಷಿಸುವ ಮಾರ್ಗಗಳನ್ನು ಚರ್ಚಿ ಸುವ ಸಲುವಾಗಿ ಭಾಗವಹಿಸುತ್ತಿದ್ದಾರೆ.

ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ ಸೈಬರ್​ ವಂಚನೆ ಪ್ರಕರಣಗಳು: ಆನ್​ಲೈನ್ ವಂಚನೆಗಳ ಬಗ್ಗೆ ಜನರಿಗೆ ಸರ್ಕಾರ, ಬ್ಯಾಂಕ್​ಗಳು ಸಾಕಷ್ಟು ಎಚ್ಚರಿಕೆಯನ್ನೂ ನೀಡಿದರೂ ಸೈಬರ್​ ಅಪರಾಧ ಪ್ರಕರಣಗಳಲ್ಲಿ ಮಾತ್ರ ಯಾವುದೇ ಇಳಿಕೆ ಕಂಡು ಬಂದಿಲ್ಲ. ಇಂತಹ ಸೈಬರ್​ ಅಪರಾಧಿಗಳು ಇದೀಗ ಡ್ರಗ್ಸ್​ ಜಾಲದ ಹೆಸರಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​​ ಯುವತಿಯೊಬ್ಬಳಿಗೆ ವಂಚಿಸಿರುವ ಘಟನೆ ಸೈಬರ್​ ಸಿಟಿ ಹೈದರಾಬಾದ್​ನಲ್ಲಿ ಇತ್ತೀಚೆಗೆ ನಡೆದಿತ್ತು. ಯುವತಿಗೆ ಬಂದ ಪಾರ್ಸೆಲ್​ನಲ್ಲಿ ಡ್ರಗ್ಸ್​​ ಇದೆ ಎಂದು ಆರೋಪಿಸಿ, ಆಕೆಗೆ ಬೆದರಿಸಿ ಅವರಿಂದ ಸೈಬರ್​ ಅಪರಾಧಿಗಳು 18 ಲಕ್ಷ ರೂ. ಹಣವನ್ನು ಸುಲಿಗೆ ಮಾಡಿದ್ದರು. ಡ್ರಗ್ಸ್​ ಪತ್ತೆಯಾದ ಹಿನ್ನೆಲೆ ಯಾವುದೇ ಪ್ರಕರಣ ದಾಖಲಾಗದಂತೆ ರಹಸ್ಯ ಒಪ್ಪಂದ ಮಾಡುವುದಾಗಿ ಅವರು ಯುವತಿಗೆ ತಿಳಿಸಿ, ಈ ಮೊತ್ತದ ಹಣವನ್ನು ಲಪಟಾಯಿಸಿದ್ದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಇದನ್ನೂ ಓದಿ : ಶಾಸಕರನ್ನು ಎತ್ತಿ, ಎಳೆದು ಅಸೆಂಬ್ಲಿಯಿಂದ ಹೊರ ಹಾಕಿದ ಮಾರ್ಷಲ್​ಗಳು! ವಿಡಿಯೋ ನೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.