ETV Bharat / bharat

ಈ ಬಾಲಕ ಜ್ಯೂನಿಯರ್​​​ ರಾಮದೇವ ಬಾಬಾ.. ವಯಸ್ಸು ಕೇವಲ 10.. 150ಕ್ಕೂ ಹೆಚ್ಚು ಆಸನಗಳು ಈತನಿಗೆ ಸುಲಲಿತ

ಬಿಹಾರದ ಗಯಾ ಮೂಲದ ಪುಟ್ಟ ಯೋಗ ಗುರು ರುದ್ರ ಪ್ರತಾಪ್ ಸಿಂಗ್ ದೇಶ ಮಾತ್ರವಲ್ಲದೇ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ. 150ಕ್ಕೂ ಹೆಚ್ಚು ಯೋಗಾಸನಗಳನ್ನು ಕರಗತ ಮಾಡಿಕೊಂಡಿದ್ದಾರೆ. ಯೋಗ ದಿನಾಚರಣೆಯಂದು ಜನರಿಗೆ ಯೋಗ ಮಾಡುವಂತೆ ಸಂದೇಶ ನೀಡಿರುವ ರುದ್ರ, ಯೋಗದ ಪ್ರಯೋಜನಗಳನ್ನು ವಿವರಿಸಿದ್ದಾರೆ.

Etv Bharatinternational-yoga-day-gaya-junior-baba-ramdev-rudra-pratap-singh
ಈ ಬಾಲಕ ಜ್ಯೂನಿಯರ್​​​ ರಾಮದೇವ ಬಾಬಾ
author img

By

Published : Jun 21, 2023, 9:00 AM IST

Updated : Jun 21, 2023, 10:07 AM IST

ಈ ಬಾಲಕ ಜ್ಯೂನಿಯರ್​​​ ರಾಮದೇವ ಬಾಬಾ

ಗಯಾ(ಬಿಹಾರ): ಇಂದು ಜೂನ್ 21.. ವಿಶ್ವ ಯೋಗ ದಿನ. ಭಾರತ ಸೇರಿದಂತೆ ಇಡೀ ವಿಶ್ವದಲ್ಲಿ ಇದೊಂದು ದೊಡ್ಡ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ. ದೇಶದಲ್ಲಿ ಯೋಗದ ವಿಷಯ ಬಂದಾಗ ಬಾಬಾ ರಾಮದೇವ್ ಅವರ ಹೆಸರು ಮುನ್ನೆಲೆಗೆ ಬರುತ್ತದೆ. ಅದೇ ಸಮಯದಲ್ಲಿ, ಬಿಹಾರದ ಗಯಾದ 10 ವರ್ಷದ ರುದ್ರ ಪ್ರತಾಪ್ ಸಿಂಗ್ ಕೂಡ ಯೋಗ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಸಾಧಿಸುತ್ತಿದ್ದಾರೆ. ಈ ಬಾಲಕ ಈಗ ಬಿಹಾರದ ಬಾಬಾ ರಾಮದೇವ್ ಎಂದೇ ಪ್ರಸಿದ್ಧಿಯಾಗುತ್ತಿದ್ದಾರೆ.

international-yoga-day-gaya-junior-baba-ramdev-rudra-pratap-singh
ಈ ಬಾಲಕ ಜ್ಯೂನಿಯರ್​​​ ರಾಮದೇವ ಬಾಬಾ... ವಯಸ್ಸು ಕೇವಲ 10.. 150ಕ್ಕೂ ಹೆಚ್ಚು ಆಸನಗಳು ಈತನಿಗೆ ಸುಲಲಿತ

ಬಾಲಕನಿಗೆ 150 ಆಸನಗಳು ಕರಗತ: ಬೋಧಗಯಾದಲ್ಲಿ ರುದ್ರ ಪ್ರತಾಪ್​ ಸಿಂಗ್ ಯೋಗಾಭ್ಯಾಸ ಮಾಡುತ್ತಿದ್ದಾರೆ. ಜೆಹಾನಾಬಾದ್ ಜಿಲ್ಲೆಯ ಖಾರ್ಕಾ ಗ್ರಾಮದ ನಿವಾಸಿ ರಾಕೇಶ್ ಕುಮಾರ್ ಸಿಂಗ್ ಅವರ ಪುತ್ರ ರುದ್ರ ಪ್ರತಾಪ್ ಸಿಂಗ್ ಯೋಗಾಭ್ಯಾಸದಲ್ಲಿ ಉನ್ನತ ಸಾಧನೆ ಮಾಡುತ್ತಿದ್ದಾರೆ. ಸತತ ಯೋಗಾಭ್ಯಾಸದಿಂದ ತಮ್ಮ ಗುರಿಯತ್ತ ಸಾಗುತ್ತಿದ್ದು, ಈ ಯೋಗಾಭ್ಯಾಸಗಳಿಂದ ಸುಮಾರು 150 ಬಗೆಯ ಯೋಗವನ್ನು ಕರಗತ ಮಾಡಿಕೊಂಡಿದ್ದಾರೆ.

8ನೇ ವಯಸ್ಸಿನಿಂದಲೇ ಯೋಗಾಭ್ಯಾಸ: ರುದ್ರನಿಗೆ ಕೇವಲ 10 ವರ್ಷ. ಯೋಗ ಕ್ಷೇತ್ರದಲ್ಲಿ ಅವರ ಸಾಧನೆಗಳು ಮಾತ್ರ ಮುಗಿಲೆತ್ತರಕ್ಕೆ ಏರಿವೆ. 2020 ರಲ್ಲಿ ಲಾಕ್‌ಡೌನ್ ಸಮಯದಲ್ಲಿ 8 ನೇ ವಯಸ್ಸಿನಲ್ಲಿ ರುದ್ರ ತಮ್ಮ ತಂದೆಯ ಪ್ರೋತ್ಸಾಹದ ನಂತರ ಯೋಗ ಮಾಡಲು ಪ್ರಾರಂಭಿಸಿದರು. ರಾಕೇಶ್ ಸಿಂಗ್ ತಮ್ಮ 8 ವರ್ಷದ ಮಗ ರುದ್ರನನ್ನು ಯೋಗ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಪ್ರೇರೇಪಿಸಿದರು.

8ನೇ ವಯಸ್ಸಿನಿಂದಲೇ ಯೋಗಾಭ್ಯಾಸ

ತಂದೆಯ ಮಾರ್ಗದರ್ಶನ: ರುದ್ರ ಪ್ರತಾಪ್ ಸಿಂಗ್ ಯೋಗಾಭ್ಯಾಸ ಮಾಡುವಾಗ, ಅವರನ್ನು ನೋಡಲು ಗುಂಪು ಸೇರುತ್ತದೆ. ಯೋಗದ ಸಮಯದಲ್ಲಿ ಅವರು ತಮ್ಮ ದೇಹವನ್ನು ರಬ್ಬರ್‌ನಂತೆ ಬಾಗಿ ಪ್ರಾಣಾಯಾಮದ ಗುರಿಯನ್ನು ಪೂರೈಸುತ್ತಾರೆ. ರುದ್ರನ ಯೋಗಾಭ್ಯಾಸವನ್ನು ನೋಡಿದವರಿಗೆ ಅಚ್ಚರಿ ಆಗೋದಂತೂ ಪಕ್ಕಾ. ರುದ್ರ ಬಿಹಾರದ ಬಾಬಾ ರಾಮದೇವ್ ಎಂದು ಗುರುತಿಸಿಕೊಳ್ಳಲು ಅವರ ಈ ಭಂಗಿಗಳೇ ಕಾರಣ. ರುದ್ರನ ತರಬೇತುದಾರ ಬೇರೆ ಯಾರೂ ಅಲ್ಲ ಅವರ ತಂದೆ ರಾಕೇಶ್ ಕುಮಾರ್ ಸಿಂಗ್.

ಬಾಲಕನಿಗೆ 150 ಆಸನಗಳು ಕರಗತ

ತಂದೆ ರಾಕೇಶ್ ಕುಮಾರ್ ಸಿಂಗ್ ಹೇಳುವ ಪ್ರಕಾರ ರುದ್ರ ಮಾಡಲಾರದ ಯೋಗ ಬಹುಶಃ ಯಾವುದೂ ಇಲ್ಲ. ಅವರು ಬಿಹಾರದ ರಾಜ್ಯ ಚಾಂಪಿಯನ್ ಕೂಡ ಆಗಿದ್ದಾರೆ. ಅವರು 2020 ರಲ್ಲಿ ಈ ಸಾಧನೆ ಮಾಡಿದ್ದರು. " ಪತಂಜಲಿ ಆಯೋಜಿಸಿದ ನ್ಯಾಷನಲ್ ಯೋಗ ಫೆಡರೇಶನ್ ಆಫ್ ಇಂಡಿಯಾದಲ್ಲಿ ಬಿಹಾರ ರಾಜ್ಯ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಈಗ ರಾಷ್ಟ್ರೀಯ ಯೋಗ ಕಾಂಪಿಟೇಷನ್​ಗೆ ತಯಾರಿ ನಡೆಸುತ್ತಿದ್ದಾರೆ. ಎಂದು ಬಾಲಕನ ತಂದೆ ರಾಕೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.

ಕಣ್ಣು ಮುಚ್ಚಿ ಬಿಲ್ಲುವಿದ್ಯೆ: ಮತ್ತೊಂದೆಡೆ, ರುದ್ರ ಕೂಡ ಕಣ್ಣು ಮುಚ್ಚಿ ಬಿಲ್ಲುಗಾರಿಕೆ ಮಾಡುತ್ತಾರೆ. ಕಣ್ಣು ಮುಚ್ಚಿಕೊಂಡು ಬಿಲ್ಲುಬಾಣದಿಂದ ಸಾಹಸಗಳನ್ನು ತೋರಿಸುತ್ತಾರೆ. ಈ ಮೂಲಕ ನೋಡುಗರನ್ನು ಅಚ್ಚರಿಗೆ ದೂಡುತ್ತಾರೆ. ಮುಚ್ಚಿದ ಕಣ್ಣುಗಳಿಂದ ಬಿಟ್ಟ ಬಾಣವು ನೇರವಾಗಿ ಗುರಿಯನ್ನು ಭೇದಿಸುತ್ತದೆ. ಆರ್ಚರಿ ಕ್ಷೇತ್ರದಲ್ಲಿ ಡಿಎವಿಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರುದ್ರ ನಾಲ್ಕನೇ ಸ್ಥಾನ ಪಡೆದ ಸಾಧನೆ ಕೂಡಾ ಮಾಡಿದ್ದಾರೆ.

ಮೂರು ವರ್ಷ ಸತತ ಯೋಗಾಭ್ಯಾಸ: ಬಿಹಾರ ಚಾಂಪಿಯನ್ ಆಗಿದ್ದೂ ಅಲ್ಲದೇ ಜಿಲ್ಲೆ ಹಾಗೂ ರಾಜ್ಯದಲ್ಲೂ ರುದ್ರ ಚಿನ್ನದ ಪದಕ ಗೆದ್ದಿದ್ದಾರೆ. ಅವರು ಮೂಲಭೂತ ಮತ್ತು ಸುಧಾರಿತ ಯೋಗ ಸೇರಿದಂತೆ ಒಟ್ಟು 150 ಯೋಗಾಸನಗಳನ್ನು ಮಾಡುತ್ತಾರೆ. 2020 ರಲ್ಲಿ ಕರೋನಾ ಅವಧಿಯಲ್ಲಿ ಯೋಗ ಪ್ರದರ್ಶನ ಪ್ರಾರಂಭವಾಯಿತು ಎಂದು ರುದ್ರ ಪ್ರತಾಪ್ ಹೇಳುತ್ತಾರೆ. ಇದಾದ ನಂತರ ರುದ್ರ ಹಿಂತಿರುಗಿ ನೋಡಲೇ ಇಲ್ಲ.

’’ಯೋಗ ಬಹಳ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು.ಯೋಗದಿಂದ ನಾವು ಆರೋಗ್ಯವಂತರಾಗುತ್ತೇವೆ. ನಾವು ಆರೋಗ್ಯದಿಂದ ಇದ್ದರೆ ಸಮಾಜವೂ ಆರೋಗ್ಯವಾಗಿರುತ್ತದೆ. ದೇಶ,ಜಗತ್ತು ಸ್ವಾಸ್ಥ್ಯವಾಗಿರುತ್ತದೆ. ನಾನು 150ಕ್ಕೂ ಹೆಚ್ಚು ಆಸನಗಳನ್ನು ಮಾಡುತ್ತೇನೆ. ಧನುರಾಸನ, ಚಕ್ರಾಸನ, ಗರುಡಾಸನ, ಮಯೂರಾಸನ, ಕುಕ್ಕುಟಾಸನ, ಗಂಧ ರುಂಬುದ, ಪದ್ಮಾಸನ, ವೃಕ್ಷಾಸನ, ಕಪಾಲಭಾತಿ, ಸೂರ್ಯ ನಮಸ್ಕಾರ, ಶಿರ್ಶಾಸನ ಮತ್ತು ಇತರ ಆಸನಗಳನ್ನು ಮಾಡುತ್ತೇನೆ . ನಾನು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಡುತ್ತೇನೆ ಮತ್ತು ಭಾರತವನ್ನು ಹೆಮ್ಮೆಪಡುವಂತೆ ಮಾಡುತ್ತೇನೆ’’ - ರುದ್ರ ಪ್ರತಾಪ್ ಗುರು, ಲಿಟಲ್ ಯೋಗ್ ಗುರು

ಇದನ್ನು ಓದಿ: ವಿಶ್ವಸಂಸ್ಥೆಯಲ್ಲಿ ಇಂದು ಮೋದಿ ಯೋಗ ಪ್ರದರ್ಶನ.. ದೇಶಾದ್ಯಂತ ಯೋಗ ದಿನದ ಸಂಭ್ರಮ

Last Updated : Jun 21, 2023, 10:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.