ETV Bharat / bharat

International Yoga Day 2023: ವಸುದೈವ ಕುಟುಂಬಕ್ಕೆ ಯೋಗ - ಮಹತ್ವದ ಇತಿಹಾಸ ಹೀಗಿದೆ.. - ಯೋಗದ ಇತಿಹಾಸ

ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಯೋಗವನ್ನು ನಿಯಮಿತ ಅಭ್ಯಾಸವಾಗಿ ಪ್ರಚಾರ ಮಾಡಲು ಜೂನ್ 21 ರಂದು ಪ್ರಪಂಚದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ.

International Yoga Day 2023
International Yoga Day 2023
author img

By

Published : Jun 21, 2023, 5:32 AM IST

Updated : Jun 21, 2023, 5:57 AM IST

International Yoga Day 2023: ಪ್ರಾಚೀನ ಅಭ್ಯಾಸದ ನಿರಂತರ ಪ್ರಯೋಜನಗಳ ಅರಿವನ್ನು ಉತ್ತೇಜಿಸುವ ಉದ್ದೇಶದಿಂದ 2015 ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಘೋಷಿಸಲಾಯಿತು. ಅಂತಾರಾಷ್ಟ್ರೀಯ ಯೋಗ ದಿನವು ಯೋಗದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಮಾನಸಿಕ ಹಾಗೂ ದೈಹಿಕ ಯೋಗಕ್ಷೇಮಕ್ಕಾಗಿ ನಿಯಮಿತ ಅಭ್ಯಾಸವಾಗಿ ಪ್ರಚಾರ ಮಾಡುವ ಪ್ರಾಥಮಿಕ ಉದ್ದೇಶವನ್ನು ಹೊಂದಿದೆ. ಜಾಗತಿಕ ಮಟ್ಟದಲ್ಲಿ ಈ ದಿನವನ್ನು ಆಚರಿಸುವುದರಿಂದ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯದ ಪ್ರಾಮುಖ್ಯತೆಯನ್ನು ಉತ್ತೇಜಿಸಲು ಬೆಳಕು ಚೆಲ್ಲುತ್ತದೆ.

ಅಂತಾರಾಷ್ಟ್ರೀಯ ಯೋಗ ದಿನದ ಇತಿಹಾಸ: 2014ರಲ್ಲಿ ವಿಶ್ವ ಸಂಸ್ಥೆ(ಯುಎನ್) ಜನರಲ್ ಅಸೆಂಬ್ಲಿಯ 69ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವಾಗ, ಪ್ರಧಾನಿ ನರೇಂದ್ರ ಮೋದಿ ಅವರು ಯೋಗಕ್ಕಾಗಿ ಒಂದು ದಿನವನ್ನು ಮೀಸಲಿಡುವ ಕಲ್ಪನೆಯನ್ನು ಪ್ರಸ್ತಾಪಿಸಿದರು. ವಿಶ್ವ ಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಸರ್ವಾನುಮತದ ಒಪ್ಪಂದದೊಂದಿಗೆ ಡಿಸೆಂಬರ್ 11, 2014 ರಂದು ವಿಶ್ವಸಂಸ್ಥೆಯು ಜೂನ್ 21 ರಂದು 'ಅಂತರರಾಷ್ಟ್ರೀಯ ಯೋಗ' ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು 2015 ಜೂನ್ 21ರಂದು ಆಚರಿಸಲಾಯಿತು.

ವಸುದೈವ ಕುಟುಂಬಕ್ಕೆ ಯೋಗ: ಈ ವರ್ಷ(2023)ಕ್ಕೆ ಅಂತಾರಾಷ್ಟ್ರೀಯ ಯೋಗ ದಿನ ಸ್ಥಾಪನೆಯಾಗಿ 9ನೇ ವರ್ಷವನ್ನು ಪೂರೈಸುತ್ತದೆ. "ಒಂದು ಭೂಮಿ, ಒಂದು ಕುಟುಂಬ" ಎಂಬ ಭಾರತದ ಆಶಯವನ್ನು ಸೂಚಿಸುವ "ಯೋಗಕ್ಕಾಗಿ ವಸುದೈವ ಕುಟುಂಬಕಂ" ಎಂಬುವುದು ಈ ವರ್ಷದ ಥೀಮ್​. ಇದು ಜಗತ್ತಿಗೆ ಭಾರತ ಸಾರಿದ ಸಂದೇಶ. 2023 ರಲ್ಲಿ ಜೂನ್ 21 ರಂದು ಮೊದಲ ಬಾರಿಗೆ ಯುಎನ್ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಯೋಗ ಕಾರ್ಯಕ್ರಮ ನಡೆಯಲಿದೆ.

ಉದ್ದೇಶವೇನು?: ವಸುದೈವ ಕುಟುಂಬಕಂ ಎಂದರೆ ವಿಶ್ವವೇ ನಮ್ಮ ಕುಟುಂಬ ಎಂದಾಗಿದೆ. ವಿಶ್ವವೇ ಒಂದು ಕುಟುಂಬವಾಗಿ ಭಾವಿಸುವುದು ಅತ್ಯಂತ ಸುಂದರ ಕಲ್ಪನೆ. ಜಗತ್ತಿನಾದ್ಯಂತ ಇರುವ ಜನರು ತಮ್ಮ ವಿಭಿನ್ನ ದೃಷ್ಟಿಕೋನಗಳ ಹೊರತಾಗಿಯೂ ಒಂದೇ ಎಂದು ತಿಳಿಯುವುದು ಅತ್ಯಂತ ಅಗತ್ಯ. ಎಲ್ಲಾ ಕುಟುಂಬಗಳು ಒಂದೇ ಸಮಾಜವಾಗಿ ಸೇರುವಂತೆ ಮಾಡುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.

ಅಂತಾರಾಷ್ಟ್ರೀಯ ಯೋಗ ದಿನವು ಭಾರತದಲ್ಲಿ ಹುಟ್ಟಿಕೊಂಡ ಯೋಗದ ಪ್ರಾಚೀನ ಅಭ್ಯಾಸವನ್ನು ಗೌರವಿಸುತ್ತದೆ ಮತ್ತು ದೈಹಿಕ ವಿಶ್ರಾಂತಿಯ ಮೂಲಕ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಉತ್ತೇಜಿಸುತ್ತದೆ. ಸ್ವಯಂ - ಅರಿವು ಮತ್ತು ಮಾನಸಿಕ ಸ್ಪಷ್ಟತೆಯನ್ನು ಬೆಳೆಸಲು ನಿಯಮಿತವಾಗಿ ಧ್ಯಾನವನ್ನು ಅಭ್ಯಾಸ ಮಾಡುವ ಅಭ್ಯಾಸವನ್ನು ಉತ್ತೇಜಿಸಲು ದಿನವು ಸಹಾಯ ಮಾಡುತ್ತದೆ.

ಯೋಗ ಎಂದರೇನು?: 'ಯೋಗ' ಶಬ್ದ ಸಂಸ್ಕೃತ ಭಾಷೆಯ 'ಯುಜ್' ಎಂಬ ಪದದಿಂದ ಆಗಿದೆ. ಯೋಗವೆಂದರೆ 'ಜೋಡಿಸು, ಸೇರಿಸು ಅಥವಾ ಕೂಡಿಸು ಎಂಬ ಅರ್ಥ ನೀಡುತ್ತದೆ. ಮತ್ತೊಂದು ಅರ್ಥದಲ್ಲಿ ಯೋಗ ಎಂದರೆ ಸಮಾದಿ, ಉಪಾಯ, ಸಾಧನ ಎಂಬ ಅರ್ಥವೂ ಬರುತ್ತದೆ. ಯೋಗದಲ್ಲಿ ದೇಹದ ಜತೆ ಮನಸ್ಸು, ಬುದ್ದಿ, ಭಾವನೆ ಹಾಗೂ ಆತ್ಮಗಳನ್ನು ಕೂಡಿಸುವುದು ಎಂದರ್ಥ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅವಿರತ ಪ್ರಯತ್ನದಿಂದಾಗಿ ಜೂನ್ 21 ಅನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಿತು. ಯುಎನ್‌ಜಿಎ ತನ್ನ ನಿರ್ಣಯದಲ್ಲಿ, "ಯೋಗವು ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವನ್ನು ಒದಗಿಸುತ್ತದೆ. ವಿಶ್ವದ ಜನರಿಗೆ ಯೋಗಾಭ್ಯಾಸದ ಪ್ರಯೋಜನಗಳ ಬಗ್ಗೆ ಮಾಹಿತಿಯ ವ್ಯಾಪಕ ಪ್ರಸಾರವು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ" ಎಂದು ಹೇಳಿದೆ.

ಪ್ರಯೋಜನವೇನು?: ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ, ಒಬ್ಬ ವ್ಯಕ್ತಿಯು ತಂದೆಯಂತೆ ರಕ್ಷಿಸುವ ಧೈರ್ಯ, ತಾಯಿಯಿಂದ ಕ್ಷಮೆ ಮತ್ತು ಶಾಶ್ವತ ಸ್ನೇಹಿತನಾಗುವ ಮಾನಸಿಕ ಶಾಂತಿಯಂತಹ ಕೆಲವು ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬಹುದು. ಯೋಗದ ನಿಯಮಿತ ಅಭ್ಯಾಸದ ಮೂಲಕ ಸತ್ಯವು ನಮ್ಮ ಮಗುವಾಗುತ್ತದೆ, ನಮ್ಮ ಸಹೋದರಿಯನ್ನು ಕರುಣಿಸುತ್ತದೆ, ನಮ್ಮ ಸಹೋದರನನ್ನು ಸ್ವಯಂ ನಿಯಂತ್ರಣ ಮಾಡುತ್ತದೆ. ಭೂಮಿಯು ನಮ್ಮ ಹಾಸಿಗೆಯಾಗುತ್ತದೆ ಮತ್ತು ಜ್ಞಾನವು ನಮ್ಮ ಹಸಿವನ್ನು ನೀಗಿಸುತ್ತದೆ.

ಕಳೆದ ಎಂಟು ಅಂತರಾಷ್ಟ್ರೀಯ ಯೋಗ ದಿನಗಳ ಒಂದು ನೋಟ

  • 2015ರ ಥೀಮ್ 'ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ': ಜೂನ್ 21, 2015 ರಂದು ನವದೆಹಲಿಯ ರಾಜ್‌ಪಥ್‌ನಲ್ಲಿ ನಡೆಯಿತು. ಈ ಕಾರ್ಯಕ್ರಮವು 2 ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ. 35,985 ಜನರು ಒಂದೇ ಸ್ಥಳದಲ್ಲಿ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು.
  • 2016ರ ಥೀಮ್ 'ಯುವಕರನ್ನು ಸಂಪರ್ಕಿಸಿ': ಜೂನ್ 21, 2016 ರಂದು ಚಂಡೀಗಢದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 30,000 ಜನರು ಮತ್ತು 150 ದಿವ್ಯಾಂಗರು ಪ್ರಧಾನ ಮಂತ್ರಿಯವರೊಂದಿಗೆ ಭಾಗವಹಿಸಿದ್ದರು.
  • 2017ರ ಥೀಮ್ 'ಆರೋಗ್ಯಕ್ಕಾಗಿ ಯೋಗ': ಜೂನ್ 21, 2017 ರಂದು ಲಖನೌದಲ್ಲಿ ಕಾರ್ಯಕ್ರಮ ಆಚರಿಸಲಾಯಿತು. 51 ಸಾವಿರ ಮಂದಿ ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಜೀವನಶೈಲಿಯಲ್ಲಿ ಯೋಗದ ಮಹತ್ವದ ಬಗ್ಗೆ ಚರ್ಚಿಸಿದ್ದರು.
  • 2018ರ ಥೀಮ್ 'ಶಾಂತಿಗಾಗಿ ಯೋಗ': ಜೂನ್ 21, 2018 ರಂದು ಡೆಹ್ರಾಡೂನ್‌ನಲ್ಲಿ ಆಚರಿಸಲಾದ ಯೋಗ ದಿನಾಚರಣೆಯಲ್ಲಿ 50 ಸಾವಿರ ಜನ ಭಾಗವಹಿಸಿದ್ದರು.
  • 2019ರ ಥೀಮ್ 'ಹವಾಮಾನ ಕ್ರಿಯೆ': ಪ್ರಧಾನಿ ನರೇಂದ್ರ ಮೋದಿ ಅವರು ರಾಂಚಿಯಲ್ಲಿ ಇತರ ಭಾಗಿಗಳೊಂದಿಗೆ ಯೋಗ ದಿನವನ್ನು ಆಚರಿಸಿದರು.
  • 2020ರ ಥೀಮ್ 'ಆರೋಗ್ಯಕ್ಕಾಗಿ ಯೋಗ': ಜಾಗತಿಕ ಕೋವಿಡ್​ ಸಾಂಕ್ರಾಮಿಕ ರೋಗದಿಂದ ಕಾರಂದಿಂದ ಮನೆಯಲ್ಲಿಯೇ ಯೋಗ ದಿನವನ್ನು ಆಚರಿಸಲು ಕರೆ ನೀಡಲಾಗಿತ್ತು.
  • 2021ರ ಥೀಮ್ 'ಯೋಗಕ್ಷೇಮಕ್ಕಾಗಿ ಯೋಗ': ಪ್ರಧಾನಿ ನರೇಂದ್ರ ಮೋದಿ ಅವರು 'WHO M-Yoga' ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದರು.
  • 2022ರ ಥೀಮ್ 'ಮಾನವೀಯತೆಗಾಗಿ ಯೋಗ': ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಮೈಸೂರು ಅರಮನೆ ಮೈದಾನದಲ್ಲಿ ಇತರ ಭಾಗಿಗಳೊಂದಿಗೆ ಯೋಗ ದಿನಾಚರಣೆಯನ್ನು ಆಚರಿಸಿದರು. 'ಈ ಶತಮಾನದಲ್ಲಿ ಯೋಗವು ಜಗತ್ತನ್ನು ಒಂದುಗೂಡಿಸಿದೆ ಎಂದು ನಾವು ಅರಿತುಕೊಂಡಿದ್ದೇವೆ'- ಪ್ರಧಾನಿ ನರೇಂದ್ರ ಮೋದಿ.

ಇದನ್ನೂ ಓದಿ: ಪ್ರಧಾನಿ ಮೋದಿ ಆಗಮನದ ಎದುರು ನೋಡುತ್ತಿರುವ ಅಮೆರಿಕ.. ಭರದಿಂದ ಸಾಗಿದ ಯೋಗ ದಿನಾಚರಣೆ ಸಿದ್ಧತೆಗಳು

Last Updated : Jun 21, 2023, 5:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.