ETV Bharat / bharat

2021: ಅಂತಾರಾಷ್ಟ್ರೀಯ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನಾ ವರ್ಷ - ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನಾ ಅಂತರಾಷ್ಟ್ರೀಯ ವರ್ಷ

ಜಾಗತಿಕವಾಗಿ ಈಗಾಗಲೇ ಬಾಲ ಕಾರ್ಮಿಕ ಪದ್ಧತಿಯಲ್ಲಿ ಅಂದಾಜು 152 ಮಿಲಿಯನ್ ಮಕ್ಕಳು ಇದ್ದಾರೆ. ಭಾರತದಲ್ಲಿ ಸುಮಾರು 33 ಮಿಲಿಯನ್ ಮಕ್ಕಳು ಬಾಲ ಕಾರ್ಮಿಕ ಪದ್ಧತಿಯಲ್ಲಿದ್ದಾರೆ.

international-year-for-the-elimination-of-child-labour

author img

By

Published : Dec 28, 2020, 8:48 PM IST

ಹೈದರಾಬಾದ್: ಕೋವಿಡ್-19 ಸಾಂಕ್ರಾಮಿಕ ಮತ್ತು ಅದರ ಪರಿಣಾಮವಾಗಿ ಉಂಟಾಗಿರುವ ಆರ್ಥಿಕ ಮತ್ತು ಕಾರ್ಮಿಕ ಮಾರುಕಟ್ಟೆಯ ಮೇಲಿನ ಆಘಾತವು ಜನರ ಜೀವನ ಮತ್ತು ಜೀವನೋಪಾಯದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ದುರದೃಷ್ಟವಶಾತ್ ಮಕ್ಕಳು ಹೆಚ್ಚಾಗಿ ಬಳಲುತ್ತಿದ್ದಾರೆ. ಈ ಬಿಕ್ಕಟ್ಟು ಲಕ್ಷಾಂತರ ದುರ್ಬಲ ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿಗೆ ತಳ್ಳಬಹುದು ಎಂಬ ಆತಂಕ ಎದುರಾಗಿದೆ.

ಈಗಾಗಲೇ ಬಾಲ ಕಾರ್ಮಿಕ ಪದ್ಧತಿಯಲ್ಲಿ ಅಂದಾಜು 152 ಮಿಲಿಯನ್ ಮಕ್ಕಳು ಇದ್ದಾರೆ. ಅವರಲ್ಲಿ 72 ಮಿಲಿಯನ್ ಮಕ್ಕಳು ಅಪಾಯಕಾರಿ ಕೆಲಸದಲ್ಲಿದ್ದಾರೆ. ಈ ಮಕ್ಕಳು ಈಗ ಇನ್ನಷ್ಟು ಕಷ್ಟಕರವಾದ ಮತ್ತು ಹೆಚ್ಚು ಸಮಯ ಕೆಲಸ ಮಾಡುವ ಸಂದರ್ಭಗಳನ್ನು ಎದುರಿಸುವ ಅಪಾಯದಲ್ಲಿದ್ದಾರೆ.

ಜಾಗತಿಕವಾಗಿ ಬಾಲ ಕಾರ್ಮಿಕ ವ್ಯವಸ್ಥೆ:

ವಿಶ್ವಾದ್ಯಂತದ ಎಲ್ಲ ಮಕ್ಕಳಲ್ಲಿ ಹತ್ತರಲ್ಲಿ ಒಬ್ಬರು ಬಾಲ ಕಾರ್ಮಿಕರಾಗಿದ್ದಾರೆ.

ಬಾಲ ಕಾರ್ಮಿಕ ಪದ್ಧತಿಯಲ್ಲಿ ಮಕ್ಕಳ ಸಂಖ್ಯೆ 2000ನೇ ಇಸವಿಯಿಂದ 94 ದಶಲಕ್ಷದಷ್ಟು ಕಡಿಮೆಯಾಗಿದ್ದು, ಆದರೆ ಇತ್ತೀಚಿನ ವರ್ಷಗಳಲ್ಲಿ ಕಡಿತದ ಪ್ರಮಾಣವು ಮೂರನೇ ಎರಡರಷ್ಟು ಕಡಿಮೆಯಾಗಿದೆ.

ಕಡಿಮೆ-ಮಧ್ಯಮ-ಆದಾಯದ ದೇಶಗಳಲ್ಲಿನ 9%, ಮತ್ತು ಮೇಲಿನ-ಮಧ್ಯಮ-ಆದಾಯದ ದೇಶಗಳಲ್ಲಿನ 7% ಮಕ್ಕಳು ಬಾಲ ಕಾರ್ಮಿಕರಾಗಿದ್ದಾರೆ.

5-17 ವರ್ಷದೊಳಗಿನ 152 ಮಿಲಿಯನ್ ಮಕ್ಕಳು ಬಾಲ ಕಾರ್ಮಿಕ ಪದ್ಧತಿಯಲ್ಲಿದ್ದು, ಅವರಲ್ಲಿ ಅರ್ಧದಷ್ಟು ಅಂದರೆ 73 ಮಿಲಿಯನ್ ಮಕ್ಕಳು, ಅಪಾಯಕಾರಿ ಬಾಲ ಕಾರ್ಮಿಕ ಪದ್ಧತಿಯಲ್ಲಿದ್ದಾರೆ.

ಬಾಲ ಕಾರ್ಮಿಕ ಪದ್ಧತಿಗೆ ತಳ್ಳಲ್ಪಟ್ಟವರಲ್ಲಿ 48%ದಷ್ಟು 5-11 ವರ್ಷ ವಯಸ್ಸಿನವರು, 28%ದಷ್ಟು 12-14 ವರ್ಷ ವಯಸ್ಸಿನವರು ಮತ್ತು 24%ದಷ್ಟು 15-17 ವರ್ಷ ವಯಸ್ಸಿನವರು.

ಬಾಲ ಕಾರ್ಮಿಕ ಪದ್ಧತಿ ಮುಖ್ಯವಾಗಿ ಕೃಷಿಯಲ್ಲಿ ಕೇಂದ್ರೀಕೃತವಾಗಿರುತ್ತದೆ (71%). ಇದು ಮೀನುಗಾರಿಕೆ, ಅರಣ್ಯ, ಜಾನುವಾರು ಸಾಕಣೆಯನ್ನು ಒಳಗೊಂಡಿದೆ. 17% ಸೇವೆಗಳಲ್ಲಿ ಮತ್ತು 12% ಗಣಿಗಾರಿಕೆ ಸೇರಿದಂತೆ ಕೈಗಾರಿಕಾ ವಲಯದಲ್ಲಿ ಇದ್ದಾರೆ.

ಜಾಗತಿಕ ಮಟ್ಟದಲ್ಲಿ 152 ಮಿಲಿಯನ್ ಮಕ್ಕಳಲ್ಲಿ 64 ಮಿಲಿಯನ್ ಹುಡುಗಿಯರು ಮತ್ತು 88 ಮಿಲಿಯನ್ ಹುಡುಗರು ಬಾಲ ಕಾರ್ಮಿಕ ಪದ್ಧತಿಯಲ್ಲಿದ್ದಾರೆ ಎಂದು ಇತ್ತೀಚಿನ ಜಾಗತಿಕ ಅಂದಾಜುಗಳು ಸೂಚಿಸುತ್ತವೆ.

ಬಾಲ ಕಾರ್ಮಿಕರಲ್ಲಿರುವ ಅರ್ಧದಷ್ಟು ಮಕ್ಕಳು ಅಂದರೆ 73 ಮಿಲಿಯನ್ ಮಕ್ಕಳು ಸಂಪೂರ್ಣ ಅಪಾಯಕಾರಿ ಕೆಲಸದಲ್ಲಿದ್ದು, ಅದು ಅವರ ಆರೋಗ್ಯ, ಸುರಕ್ಷತೆ ಮತ್ತು ನೈತಿಕ ಬೆಳವಣಿಗೆಗೆ ನೇರವಾಗಿ ಅಪಾಯವನ್ನುಂಟು ಮಾಡುತ್ತಿದೆ.

ಭಾರತದಲ್ಲಿ ಬಾಲ ಕಾರ್ಮಿಕರ ಪರಿಸ್ಥಿತಿ:

ಜನಗಣತಿ 2011ರ ಅಂಕಿ-ಅಂಶಗಳು ಭಾರತದಲ್ಲಿ 5-14 ವರ್ಷದೊಳಗಿನ ಒಟ್ಟು ಬಾಲ ಕಾರ್ಮಿಕರ ಸಂಖ್ಯೆ 10.11 ಮಿಲಿಯನ್ ಇದೆ. ಇದಲ್ಲದೆ ಭಾರತದಲ್ಲಿ ಹದಿಹರೆಯದ ಅಂದರೆ 15ರಿಂದ 18 ವರ್ಷದೊಳಗಿನ ಕಾರ್ಮಿಕರ ಸಂಖ್ಯೆ 22.87 ಮಿಲಿಯನ್ ಇದೆ. ಹೀಗಾಗಿ ಒಟ್ಟು ಸಂಖ್ಯೆ (5-18 ವರ್ಷ) ಸುಮಾರು 33 ಮಿಲಿಯನ್‌ಗೆ ತಲುಪಿದೆ.

ಕಾರಣಗಳು:

ಕುಟುಂಬದ ಆದಾಯವು ಬದುಕಲು ಸಾಕಾಗದೇ ಇರುವಾಗ ಮಕ್ಕಳನ್ನು ಕೆಲಸ ಮಾಡುವಂತೆ ಒತ್ತಾಯಿಸಲಾಗುತ್ತದೆ. ಕೋವಿಡ್-19 ಕಾರಣದಿಂದಾಗಿ ಅನೇಕ ಜನರು ಉದ್ಯೋಗ ಕಳೆದುಕೊಳ್ಳುವುದರೊಂದಿಗೆ, ಕುಟುಂಬಗಳು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟುಗಳು ಕೂಡ ಹೆಚ್ಚಾಗಿದೆ. ಇದರಿಂದಾಗಿ ಹೆಚ್ಚಿನ ಮಕ್ಕಳು ಬಾಲ ಕಾರ್ಮಿಕ ಪದ್ಧತಿಗೆ ಪ್ರವೇಶಿಸುತ್ತಾರೆ ಅಥವಾ ಕುಟುಂಬ ಸ್ವಾಮ್ಯದ ಉದ್ಯಮಗಳು ಮತ್ತು ಹೊಲಗಳಲ್ಲಿ ಕೆಲಸ ಮಾಡುತ್ತಾರೆ.

ಮಕ್ಕಳನ್ನು ಅಗ್ಗದ ಕಾರ್ಮಿಕರೆಂದು ಪರಿಗಣಿಸಲಾಗುತ್ತದೆ ಮತ್ತು ವ್ಯವಹಾರಗಳು ಮತ್ತು ಉದ್ಯಮಗಳು ಭಾರೀ ಆರ್ಥಿಕ ನಷ್ಟವನ್ನು ಎದುರಿಸುತ್ತಿರುವುದರಿಂದ ಅಗ್ಗದ ಕಾರ್ಮಿಕರ ಬೇಡಿಕೆ ಹೆಚ್ಚಾಗಿದೆ. ವಯಸ್ಕ ಕಾರ್ಮಿಕರ ಕೊರತೆಯ ಅಂತರವನ್ನು ತುಂಬಲು ಮಕ್ಕಳು, ವಿಶೇಷವಾಗಿ ಹದಿಹರೆಯದವರು ಹೆಚ್ಚು ಬೇಡಿಕೆಯನ್ನು ಹೊಂದಿರುತ್ತಾರೆ.

ಮನೆಯಲ್ಲಿ ಉಳಿಯುವ ಮಕ್ಕಳ ಮೇಲೆ, ವಿಶೇಷವಾಗಿ ಹುಡುಗಿಯರ ಮೇಲೆ ಮನೆಯ ಕೆಲಸಗಳು ಮತ್ತು ಒಡಹುಟ್ಟಿದವರ ಆರೈಕೆಯ ಒತ್ತಡಗಳು ಬೀಳುತ್ತವೆ. ಹೀಗಾಗಿ ಹುಡುಗಿಯರನ್ನು ಶಿಕ್ಷಣದಿಂದ ದೂರ ಇಟ್ಟು, ಮನೆಯ ನಿರ್ವಹಣೆಗೆ ಎಳೆಯಲಾಗುತ್ತದೆ.

ಶಾಲೆಗಳು ಮುಚ್ಚಿರುವುದು ಮಕ್ಕಳು ಶಿಕ್ಷಣದಿಂದ ಕ್ರಮೇಣ ದೂರವಾಗಲು ಕಾರಣವಾಗಿದೆ. ಕೋವಿಡ್-19ನಿಂದ ಶಾಲೆಗಳು ಮುಚ್ಚಿದ್ದು, ಆನ್‌ಲೈನ್ ಶಿಕ್ಷಣದತ್ತ ಗಮನ ಹರಿದಿದೆ. ಇದರಿಂದಾಗಿ ಕಡಿಮೆ ಆದಾಯದ ಅನೇಕ ಮಕ್ಕಳು ಶಿಕ್ಷಣದ ಬಗ್ಗೆ ನಿಗಾ ಇಡುವುದು ಕಷ್ಟಕರವಾಗಿದೆ. ಹೀಗಾಗಿ ಅವರು ಶಿಕ್ಷಣದಿಂದ ದೂರ ಸರಿದು ಉದ್ಯೋಗದೆಡೆಗೆ ಸಾಗುತ್ತಿದ್ದಾರೆ.

ಪರಿಹಾರವೇನು?

ಸರ್ಕಾರದ ಪ್ರಯತ್ನಗಳನ್ನು ಬಲಪಡಿಸುವುದು:

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಸರ್ಕಾರವು ರಕ್ಷಣಾ ಕಾರ್ಯಾಚರಣೆ ನಡೆಸಬಹುದು. ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಲು, ಲಭ್ಯವಿರುವ ಕಾನೂನು ನಿಬಂಧನೆಗಳು ಮತ್ತು ಮಕ್ಕಳ ಅರ್ಹತೆಗಳ ಬಗ್ಗೆಯೂ ಅವರು ಸರ್ಕಾರಕ್ಕೆ ಸಹಾಯ ಮಾಡಬಹುದು. ದುರ್ಬಲ ಕುಟುಂಬಗಳಿಗೆ ಸಹಾಯ ಮಾಡಬಹುದು ಮತ್ತು ಅವರ ಮಕ್ಕಳು ಸಾಮಾಜಿಕ ಸಂರಕ್ಷಣಾ ಕ್ರಮಗಳನ್ನು ಪಡೆಯಬಹುದು.

ಬಾಲ ಕಾರ್ಮಿಕ ಪದ್ಧತಿಯ ಪ್ರಕರಣಗಳು:

ಬಾಲ ಕಾರ್ಮಿಕ ಪದ್ಧತಿಗೆ ಸಂಬಂಧಿಸಿದ ದೂರುಗಳನ್ನು ನೇರವಾಗಿ ಜಿಲ್ಲಾಧಿಕಾರಿಯಂತಹ ಅಧಿಕಾರಿಗಳಿಗೆ, ಚೈಲ್ಡ್​​ ಲೈನ್ ​​ಮೂಲಕ 1098ಗೆ ಕರೆ ಮಾಡಿ, ಸರ್ಕಾರಿ ಪೋರ್ಟಲ್ ಪೆನ್ಸಿಲ್‌ನಲ್ಲಿ ಅಥವಾ ರಾಷ್ಟ್ರೀಯ ಅಥವಾ ರಾಜ್ಯ ಆಯೋಗಗಳಂತಹ ಶಾಸನಬದ್ಧ ಸಂಸ್ಥೆಗಳಾದ ಮಕ್ಕಳ ಹಕ್ಕುಗಳ ಕಲ್ಯಾಣ ಸಮಿತಿಗಳಿಗೆ ತಿಳಿಸಬಹುದು.

ಸಾಕ್ಷ್ಯ ನಿರ್ಮಿಸುವುದು:

ಬಾಲ ಕಾರ್ಮಿಕ ಪದ್ಧತಿಯ ಸುತ್ತ ಸಾಕ್ಷ್ಯಗಳನ್ನು ನಿರ್ಮಿಸುವಾಗ ಲಾಭೋದ್ದೇಶವಿಲ್ಲದವರಿಗೆ ಸಹ ಒಂದು ಪ್ರಮುಖ ಪಾತ್ರವಿದೆ. ಅವರು ತಮ್ಮ ಹಸ್ತಕ್ಷೇಪ ಪ್ರದೇಶಗಳಲ್ಲಿ ಸಂಶೋಧನೆ ಮತ್ತು ಸಮೀಕ್ಷೆಗಳನ್ನು ನಡೆಸುವುದರ ಮೂಲಕ ಮತ್ತು ಬಾಲ ಕಾರ್ಮಿಕ ಪದ್ಧತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರೀಕ್ಷಿಸಲು ಲಭ್ಯವಿರುವ ದತ್ತಾಂಶವನ್ನು ಆಳವಾದ ರೀತಿಯಲ್ಲಿ ವಿಶ್ಲೇಷಿಸುವ ಮೂಲಕ ಇದನ್ನು ಮಾಡಬಹುದು. ಇದು ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಬಲಪಡಿಸುತ್ತದೆ ಮತ್ತು ಸಮಸ್ಯೆಯನ್ನು ಸಮಗ್ರವಾಗಿ ಪರಿಹರಿಸಲು ಸಹಾಯ ಮಾಡುತ್ತದೆ.

ಮಕ್ಕಳನ್ನು ಶಿಕ್ಷಣದಲ್ಲಿ ತೊಡಗಿಸುವುದು:

ಮಕ್ಕಳಿಗೆ ಶಿಕ್ಷಣದ ಪ್ರವೇಶ ದೊರಕುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಲಾಭೋದ್ದೇಶವಿಲ್ಲದವರು ಶಾಲೆಗಳಲ್ಲಿನ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಪತ್ತೆಹಚ್ಚಬಹುದು ಮತ್ತು ಅವರನ್ನು ಶಿಕ್ಷಣ ವ್ಯವಸ್ಥೆಯಿಂದ ಹೊರಗೆ ತಳ್ಳದಂತೆ ನೋಡಿಕೊಳ್ಳಬಹುದು.

ರಕ್ಷಣೆಯ ಬಳಿಕ ಪುನರ್ವಸತಿ ಒದಗಿಸುವುದು:

ಬಾಲ ಕಾರ್ಮಿಕ ಪದ್ಧತಿಯಿಂದ ರಕ್ಷಿಸಲ್ಪಟ್ಟ ಮಕ್ಕಳ ಪುನರ್ವಸತಿ ಪ್ರಕ್ರಿಯೆಯಲ್ಲಿ ಲಾಭೋದ್ದೇಶವಿಲ್ಲದವರು ನಿರ್ಣಾಯಕ ಪಾತ್ರ ವಹಿಸಬಹುದು. ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಅವರು ಮಕ್ಕಳಿಗೆ ಮಾನಸಿಕ-ಸಾಮಾಜಿಕ ಬೆಂಬಲವನ್ನು ನೀಡಬಹುದು ಅಥವಾ ಅವರಿಗೆ ಪರಿಹಾರ ಕಾರ್ಯಕ್ರಮಗಳನ್ನು ನಡೆಸಬಹುದು. ಬಾಲ ಕಾರ್ಮಿಕ ಪದ್ಧತಿಯಿಂದ ಪಾರು ಮಾಡಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಅವರು ಪ್ರಯತ್ನಗಳನ್ನು ತೆಗೆದುಕೊಳ್ಳಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.