ETV Bharat / bharat

ಇಂದು ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ: ವಿಷಕಾರಿ ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಹಾಕೋಣ ಕಡಿವಾಣ - ಪ್ಲಾಸ್ಟಿಕ್ ಬಳಕೆ ಮತ್ತು ಮಾಲಿನ್ಯ

ನಾವು ನಿಮಿಷಕ್ಕೆ ಸುಮಾರು 10 ಮಿಲಿಯನ್​​ ಪ್ಲಾಸ್ಟಿಕ್​​​ ಚೀಲಗಳನ್ನು ಬಳಸುತ್ತಿದ್ದೇವೆ. ವಿಶ್ವದಾದ್ಯಂತ ಬಳಕೆಯಾಗುವ ಶೇಕಡಾ 1 ರಿಂದ ಶೇಕಡಾ 3ರಷ್ಟು ಪ್ಲಾಸ್ಟಿಕ್ ಚೀಲಗಳನ್ನು ಮಾತ್ರ ಮರುಬಳಕೆ ಮಾಡಲಾಗುತ್ತದೆ

international-plastic-bag-free-day
ಇಂದು ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ: ವಿಷಕಾರಿ ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಹಾಕೋಣ ಕಡಿವಾಣ
author img

By

Published : Jul 3, 2021, 3:09 AM IST

ನವದೆಹಲಿ: ಪ್ಲಾಸ್ಟಿಕ್ ಭೂಮಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಪ್ಲಾಸ್ಟಿಕ್‌ ವಸ್ತುಗಳ ಬಳಕೆಯಿಂದಾಗಿ ವಾತಾವರಣ ಕಲುಷಿತಗೊಳ್ಳುತ್ತಿದೆ. ಅದರಲ್ಲೂ ಹೆಚ್ಚಾಗಿ ಪ್ಲಾಸ್ಟಿಕ್ ಕೈಚೀಲಗಳನ್ನು ಇಂದಿನ ಜನತೆ ಬಳಸುತ್ತಿದ್ದು, ಪ್ಲಾಸ್ಟಿಕ್ ಮಾಲಿನ್ಯದ ಪ್ರಮಾಣ ಹೇರಳವಾಗಿದೆ.

ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬ್ಯಾಗ್​ಗಳನ್ನು ಬಳಸದಂತೆ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಮುಕ್ತ ದಿನವನ್ನು ಪ್ರತೀ ವರ್ಷ ಜುಲೈ 3ರಂದು ಆಯೋಜಿಸಲಾಗುತ್ತದೆ. ಈ ದಿನದಂದು ವಿಶ್ವದಾದ್ಯಂತ ಪ್ಲಾಸ್ಟಿಕ್ ಬ್ಯಾಗ್​​ಗಳನ್ನು ಬಳಸದಂತೆ ಕರೆ ನೀಡಲಾಗುತ್ತದೆ.

ಕೆಲವೊಂದು ಮಾದರಿಯ ಪ್ಲಾಸ್ಟಿಕ್​ ಅನ್ನು ನವೀಕರಿಸಬಹುದಾಗಿದ್ದು, ಪ್ಲಾಸ್ಟಿಕ್​ ಕೈಚೀಲಗಳಂಥಹ ಒಂದೇ ಬಾರಿ ಬಳಸಲು ಸಾಧ್ಯವಿರುವ ಪ್ಲಾಸ್ಟಿಕ್ ಭೂಮಿಗೆ ಅತ್ಯಂತ ಮಾರಕವಾಗಿರುವ ಕಾರಣದಿಂದ ಇದನ್ನು ಸಂಪೂರ್ಣವಾಗ ತೊಡೆದು ಹಾಕುವುದು ಅನಿವಾರ್ಯವಾಗಿರುತ್ತದೆ.

ಒಂದು ವರದಿಯ ಪ್ರಕಾರ ನಾವು ವರ್ಷಕ್ಕೆ ಐದು ಟ್ರಿಲಿಯನ್ ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತೇವೆ. ಅಂದರೆ ಒಂದು ಸೆಕೆಂಡಿಗೆ 1,60,000 ಪ್ಲಾಸ್ಟಿಕ್ ಬ್ಯಾಗ್​ಗಳು. ಭೂಮಿಯ ಮೇಲಿರುವ ಪ್ರತಿಯೊಬ್ಬ ವ್ಯಕ್ತಿಯೂ ವರ್ಷಕ್ಕೆ 700ಕ್ಕಿಂತ ಹೆಚ್ಚು ಪ್ಲಾಸ್ಟಿಕ್​ ಚೀಲಗಳನ್ನು ಬಳಸುತ್ತಿದ್ದಾನೆ. ನಾವು ನಿಮಿಷಕ್ಕೆ ಸುಮಾರು 10 ಮಿಲಿಯನ್​​ ಪ್ಲಾಸ್ಟಿಕ್​​​ ಚೀಲಗಳನ್ನು ಬಳಸುತ್ತಿದ್ದೇವೆ. ವಿಶ್ವದಾದ್ಯಂತ ಬಳಕೆಯಾಗುವ ಶೇಕಡಾ 1 ರಿಂದ ಶೇಕಡಾ 3ರಷ್ಟು ಪ್ಲಾಸ್ಟಿಕ್ ಚೀಲಗಳನ್ನು ಮಾತ್ರ ಮರುಬಳಕೆ ಮಾಡಲಾಗುತ್ತದೆ

ಇದನ್ನೂ ಓದಿ: ಉತ್ತರಾಖಂಡದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ: ಸಿಎಂ ತಿರಥ್ ಸಿಂಗ್ ರಾವತ್ ರಾಜೀನಾಮೆ

ಎಲ್ಲರೂ ಈ ವಿಷಕಾರಿ ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕು. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಿಸಲು ಪ್ಲಾಸ್ಟಿಕ್ ರಹಿತ ಭಾರತಕ್ಕಾಗಿ ಎಲ್ಲರೂ ಕೈಜೋಡಿಸಬೇಕು. ಪ್ಲಾಸ್ಟಿಕ್​​ನಿಂದಾಗುವ ಅನಾಹುತಗಳ ಕುರಿತು ಜನರಲ್ಲಿ ಮನವರಿಕೆ ಮಾಡಬೇಕು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.