ETV Bharat / bharat

ಇಂದು ವಿಶ್ವ ಅಂಗವಿಕಲರ ದಿನ: ವಿಕಲಾಂಗ ವ್ಯಕ್ತಿಗಳ ಹಕ್ಕು, ಯೋಗಕ್ಷೇಮ ಉತ್ತೇಜಿಸುವ ಗುರಿ - ಅಂಗವಿಲಕರಿಗೆ ಜೀವನದ ಪ್ರತಿ ಹಂತದ ಬಗ್ಗೆ ಅರಿವು

ಅಂಗವಿಕಲರು ಕೂಡಾ ಮನುಷ್ಯರೇ. ಅವರಿಗೂ ಭಾವನೆಗಳಿವೆ, ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯ ಇವರಿಗೆ ಇದೆ. ಅಂಗವಿಕಲರನ್ನು ಉತ್ತೇಜಿಸುವ ಸಲುವಾಗಿ ಇಂದು ವಿಶ್ವ ಅಂಗವಿಕಲರ ದಿನವನ್ನಾಗಿ ಆಚರಿಸಲಾಗುತ್ತದೆ.

International Day of Disabled Persons
ಇಂದು ವಿಶ್ವ ಅಂಗವಿಕಲರ ದಿನ: ವಿಕಲಾಂಗ ವ್ಯಕ್ತಿಗಳ ಹಕ್ಕು, ಯೋಗಕ್ಷೇಮ ಉತ್ತೇಜಿಸುವ ಗುರಿ
author img

By

Published : Dec 3, 2021, 3:47 PM IST

ಹೈದರಾಬಾದ್‌: ಅಂಗವಿಕಲರು ತಮ್ಮ ಬಲಹೀನತೆಯನ್ನು ಮೆಟ್ಟುನಿಂತು ಇಂದು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಸಾಮರ್ಥ್ಯವೇನು ಸಾಬೀತುಪಡಿಸುತ್ತಿದ್ದಾರೆ. ತಮ್ಮ ಬಗ್ಗೆ ಸಮಾಜದಲ್ಲಿರುವ ಇರುವ ಕೀಳರಿಮೆ ಹೋಗಲಾಡಿಸಿ ಸ್ವಾಭಿಮಾನದಿಂದ ಬದುಕುತ್ತಿರುವ ಅದೆಷ್ಟೋ ಉದಾಹರಣೆಗಳು ಕಣ್ಣಮುಂದಿವೆ.

ವಿಕಲಾಂಗ ವ್ಯಕ್ತಿಗಳ ಅಂತಾರಾಷ್ಟ್ರೀಯ ದಿನವನ್ನು ಪ್ರತಿ ವರ್ಷ ಡಿಸೆಂಬರ್ 3 ರಂದು ಆಚರಿಸಲಾಗುತ್ತದೆ. 'ಕೋವಿಡ್‌-19 ನಂತರದ ಜಗತ್ತನ್ನು ಒಳಗೊಳ್ಳುವ, ಪ್ರವೇಶಿಸಬಹುದಾದ ಹಾಗೂ ಸಮರ್ಥನೀಯವಾಗಿಸಲು ವಿಕಲಾಂಗ ವ್ಯಕ್ತಿಗಳ ನಾಯಕತ್ವ, ಭಾಗವಹಿಸುವಿಕೆ' ಈ ವರ್ಷದ ವಿಷಯವಾಗಿದೆ.

ಸಮಾಜ ಮತ್ತು ಅಭಿವೃದ್ಧಿಯ ಎಲ್ಲ ಕ್ಷೇತ್ರಗಳಲ್ಲಿ ವಿಕಲಾಂಗ ವ್ಯಕ್ತಿಗಳ ಹಕ್ಕುಗಳು ಮತ್ತು ಯೋಗಕ್ಷೇಮ ಉತ್ತೇಜಿಸುವ ಗುರಿಯನ್ನು ಹೊಂದಲಾಗಿದ್ದು, ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಜೀವನದ ಪ್ರತಿಯೊಂದು ಹಂತದಲ್ಲೂ ವಿಕಲಾಂಗ ವ್ಯಕ್ತಿಗಳಿಗೆ ಪರಿಸ್ಥಿತಿಯ ಅರಿವು ಮೂಡಸಲಾಗುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಜಗತ್ತಿನಲ್ಲಿಂದು 7 ಶತಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯಿದೆ. ಇದರಲ್ಲಿ ಒಂದು ಶತಕೋಟಿಗಿಂತ ಹೆಚ್ಚು ಅಥವಾ ಪ್ರಪಂಚದ ಜನಸಂಖ್ಯೆಯ ಸರಿಸುಮಾರು ಶೇ.15 ರಷ್ಟು ಜನರು ಕೆಲವು ರೀತಿಯ ಅಂಗವೈಕಲ್ಯದೊಂದಿಗೆ ಬದುಕುತ್ತಿದ್ದಾರೆ. ಶೇ.80 ರಷ್ಟು ಜನರು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಯುಎನ್‌ ಉಲ್ಲೇಖಿಸಿದೆ.

ವಿಕಲಾಂಗ ವ್ಯಕ್ತಿಗಳು ಸಮಾಜದ ಒಂದು ಭಾಗ..

ನಮ್ಮ ಸಮಾಜದಲ್ಲಿ ಇಂದಿಗೂ ಅಂಗವಿಕಲರ ವಿರುದ್ಧ ತಾರತಮ್ಯ, ಅನುಕಂಪ, ಅಪಹಾಸ್ಯ ಮಾಡುತ್ತಿರುವುದು ದುರಾದೃಷ್ಟಕರ. ಆದರೆ, ಅವರೂ ನಮ್ಮ ಸಮಾಜದ ಭಾಗವಾಗಿದ್ದಾರೆ. ಅವರನ್ನು ಸಮಾನವಾಗಿ ಪರಿಗಣಿಸಬೇಕು ಎಂಬುದನ್ನು ನಾವು ಸಾಮಾನ್ಯವಾಗಿ ಒಪ್ಪಿಕೊಳ್ಳಲು ವಿಫಲರಾಗುತ್ತೇವೆ.

ತಮ್ಮ ಕಠಿಣ ಪರಿಶ್ರಮ, ಪ್ರತಿಭೆಯಿಂದ ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದ ಅಂಗವಿಕಲರ ಅನೇಕ ಉದಾಹರಣೆಗಳಿವೆ. ವಿಶೇಷ ಸಾಮರ್ಥ್ಯವುಳ್ಳ ಜನರು ಇತರರ ಮೇಲೆ ಅವಲಂಬಿತರಾಗಿರುವುದಿಲ್ಲ. ಆರಂಭದಲ್ಲಿ ಅವರಿಗೆ ಸಹಾಯದ ಅಗತ್ಯವಿರುತ್ತದೆ, ಆದರೆ ಕ್ರಮೇಣ, ಅವರು ತಮ್ಮ ದೈನಂದಿನ ಚಟುವಟಿಕೆಗಳನ್ನು ತಾವಾಗಿಯೇ ನಿರ್ವಹಿಸಲು ಕಲಿಯುತ್ತಾರೆ.

ಅಂಗವೈಕಲ್ಯವನ್ನು ಅರ್ಥಮಾಡಿಕೊಳ್ಳುವುದು

ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (CDC) ಪ್ರಕಾರ, ಅಂಗವೈಕಲ್ಯವು ದೇಹ ಅಥವಾ ಮನಸ್ಸಿನ ಯಾವುದೇ ದೌರ್ಬಲ್ಯ. ಇಂತಹ ಪರಿಸ್ಥಿತಿ ಹೊಂದಿರುವ ವ್ಯಕ್ತಿಗೆ ಕೆಲವು ಚಟುವಟಿಕೆಗಳನ್ನು ಮಾಡಲು ಮತ್ತು ಸುತ್ತಮುತ್ತಲಿನ ಪ್ರಪಂಚದೊಂದಿಗೆ ಸಂವಹನ ನಡೆಸಲು ಹೆಚ್ಚು ಕಷ್ಟಪಡುತ್ತಾರೆ.

ವ್ಯಕ್ತಿಯ ಮೇಲೆ ಪರಿಣಾಮ ಬೀರುವಂತಹ ಹಲವಾರು ರೀತಿಯ ಅಂಗವೈಕಲ್ಯಗಳಿವೆ:

  • ದೃಷ್ಟಿ
  • ಚಲನೆ
  • ಆಲೋಚನೆ
  • ನೆನಪಿನ ಶಕ್ತಿ
  • ಕಲಿಕೆ
  • ಸಂವಹನ
  • ಕೇಳಿಸುವುದು
  • ಮಾನಸಿಕ ಆರೋಗ್ಯ
  • ಸಾಮಾಜಿಕ ಸಂಬಂಧಗಳು

ವಿಶ್ವ ಆರೋಗ್ಯಸಂಸ್ಥೆ ಪ್ರಕಾರ, ಅಂಗವೈಕಲ್ಯದ ಮೂರು ಆಯಾಮಗಳು..

ವ್ಯಕ್ತಿಯ ದೇಹದ ರಚನೆ, ಕಾರ್ಯ ಅಥವಾ ಮಾನಸಿಕ ಕಾರ್ಯನಿರ್ವಹಣೆಯಲ್ಲಿನ ದುರ್ಬಲತೆ ಅಂಕವೈಕಲ್ಯತೆಯಾಗಿದೆ. ದುರ್ಬಲತೆಗೆ ಉದಾಹರಣೆಗೆ ಅಂಗದ ನಷ್ಟ, ದೃಷ್ಟಿ ನಷ್ಟ ಅಥವಾ ಜ್ಞಾಪಕ ಶಕ್ತಿ ನಷ್ಟವೂ ಅಂಗವೈಕಲ್ಯಕ್ಕೆ ಸೇರಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.