ETV Bharat / bharat

2050ರ ವೇಳೆಗೆ ಸಾಗರದಲ್ಲಿ ಮೀನಿಗಿಂತ ಹೆಚ್ಚಿರಲಿದೆ ಪ್ಲಾಸ್ಟಿಕ್​; ಇದಕ್ಕೆಲ್ಲ ಬೇಕಿದೆ ಪರಿಹಾರ - ಅಂತರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ

International Coastal Cleanup Day : ಸಮುದ್ರ ಸೇರುತ್ತಿರುವ ಹೆಚ್ಚಿನ ತ್ಯಾಜ್ಯದಲ್ಲಿ ಪ್ಲಾಸ್ಟಿಕ್​ ಪ್ರಮಾಣ ಶೇ 80ರಷ್ಟಿದೆ.

international-coastal-cleanup-day-2023-objective-keep-the-ocean-clean

author img

By ETV Bharat Karnataka Team

Published : Sep 16, 2023, 1:17 PM IST

ಹೈದರಾಬಾದ್​: ಸಾಗರ ಸೇರುತ್ತಿರುವ ತ್ಯಾಜ್ಯಗಳನ್ನು ಶುಚಿಗೊಳಿಸುವ ಉದ್ದೇಶದಿಂದ ಅಮೆರಿಕದ ಪಶ್ಚಿಮ ಕರಾವಳಿಯ ವಾಷಿಂಗ್ಟನ್​ ರಾಜ್ಯದಲ್ಲಿ 1986ರಲ್ಲಿ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನವನ್ನು ಆರಂಭಿಸಲಾಯಿತು. 1986ರಂದು ಸಾಗರ ಸಂರಕ್ಷಣೆ (ಓಷನ್​ ಕನ್ಸರವೇಷನ್​) ಸಂಸ್ಥೆ ಪ್ರತಿ ವರ್ಷ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನವಾಗಿ ಆಚರಿಸಲು ಮುಂದಾಗಿತು. ಈ ಮೂಲಕ ಸಾಗರವನ್ನು ಭವಿಷ್ಯದ ಸಾವಲುಗಳನ್ನು ರಕ್ಷಣೆ ಮಾಡಲು ಕೆಲಸ ಮಾಡಲು ಮುಂದಾಗಲಾಯಿತು. ಅಂದಿನಿಂದ ಪ್ರತಿ ಸೆಪ್ಟೆಂಬರ್​ ಮೂರನೇ ವಾರವನ್ನು ಅಂತಾಷ್ಟ್ರೀಯ ಕರಾವಳಿ ಸ್ವಚ್ಛತೆ ದಿನವಾಗಿ ಆಚರಿಸಲಾಗುತ್ತಿದೆ.

  • On the occasion of the International Coastal Cleanup day on 16 Sep, cadets of 3TN Naval NCC, Tuticorin carried out beach cleanup at various locations. At Tuticorin cadets of SPIC HSS participated in beach cleanup drive at Port trust beach organised by Indian Coast Guard. pic.twitter.com/ZtFE1nqKR5

    — 3 TN Naval Unit NCC (@3TNNaval) September 16, 2023 " class="align-text-top noRightClick twitterSection" data=" ">

ಈ ದಿನದ ಉದ್ದೇಶ: ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದ ಮುಖ್ಯ ಉದ್ದೇಶ ಸಮುದ್ರ, ನದಿ ಅಥವಾ ಇತರ ನೈಸರ್ಗಿಕ ಜಲಮೂಲವನ್ನು ಶುಚಿಯಾಗಿರಿಸುವುದು. ಜಲ ಮೂಲಗಳಿಗೆ ಬದಲಾಗಿ ತ್ಯಾಜ್ಯ ನಿರ್ವಹಣೆ ನಡೆಸುವುದು. ಈ ಉದ್ದೇಶದಿಂದ ಸರ್ಕಾರದ ಏಜೆನ್ಸಿ, ನಿಯಮ ರೂಪಕರು, ಸ್ಥಳ ಜನರು, ಪ್ರವಾಸಿಗರು ಸೇರಿದಂತೆ ಎಲ್ಲರಿಗೂ ಶುದ್ದ ನೀರಿನ ಮೂಲದ ಪ್ರಯೋಜನದ ಬಗ್ಗೆ ಅರಿವು ಮೂಡಿಸುವುದು. ಜೊತೆಗೆ ಈಗಾಗಲೇ ಇರುವ ತ್ಯಾಜ್ಯವನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡುವುದು.

ಪ್ಲಾಸ್ಟಿಕ್​ ಬಳಕೆ ದೊಡ್ಡ ಸಮಸ್ಯೆ: ನೀತಿ ಆಯೋಗದ ವರದಿಯಲ್ಲಿ ತಿಳಿಸಿರುವಂತೆ, ಪ್ರಪಂಚದ 97 - 99 ಪ್ರತಿಶತ ಪ್ಲಾಸ್ಟಿಕ್ ಅನ್ನು ಪಳೆಯುಳಿಕೆ ಇಂಧನಗಳಿಂದ ಪಡೆಯುತ್ತಿದ್ದು, ಶೇ 1-3ರಷ್ಟು ಪ್ಲಾಸ್ಟಿಕ್​ ಅನ್ನು ಜೈವಿಕ ಆಧಾರಿತ ಪ್ಲಾಸ್ಟಿಕ್​ ಆಗಿ ಉತ್ಪಾದಿಸಲಾಗುತ್ತಿದೆ. 1950ರಲ್ಲಿ ಕೇವಲ 2 ಟನ್​ ಪ್ಲಾಸ್ಟಿಕ್​ ಅನ್ನು ಉತ್ಪಾದಿಸಲಾಗುತ್ತಿತ್ತು. 2015ರಲ್ಲಿ 381 ಮಿಲಿಯನ್​ ಪ್ಲಾಸ್ಟಿಕ್​ ಉತ್ಪಾದನೆ ಮಾಡಲಾಗಿದೆ. ಜಾಗತಿಕ ದತ್ತಾಂಶದ ಪ್ರಕಾರ 2014-15ರಲ್ಲಿ ತಲಾ ಪ್ಲಾಸ್ಟಿಕ್​ ಉತ್ಪಾದನೆ 28 ಕೆಜಿ ಆದರೆ, ಇದೀಗ ಅದು 30ಕೆಜಿಗೆ ಬಂದು ತಲುಪಿದೆ.

ಪ್ರತಿ ವರ್ಷ 8 ಟನ್​ ತ್ಯಾಜ್ಯ ಸಮುದ್ರಕ್ಕೆ: ಸಮುದ್ರಕ್ಕೆ ಸೇರುತ್ತಿರುವ ತ್ಯಾಜ್ಯದ ಸಮಸ್ಯೆ ಗಂಭೀರ ಸ್ವರೂಪದ್ದಾಗಿದೆ. ಅನೇಕ ದಶಕಗಳಿಂದ ಸಮುದ್ರಕ್ಕೆ ಸೇರುತ್ತಿರುವ ಪ್ಲಾಸ್ಟಿಕ್​ ಪ್ರಮಾಣದ ಬಗ್ಗೆ ಜಗತ್ತು ಕಳವಳ ವ್ಯಕ್ತಪಡಿಸುತ್ತಿದೆ. ಅಂಕಿ - ಅಂಶಗಳ ಪ್ರಕಾರ ಪ್ರತಿ ವರ್ಷ 8 ಮಿಲಿಯನ್​ ಟನ್​ ಪ್ಲಾಸ್ಟಿಕ್​ ತ್ಯಾಜ್ಯ ಸಮುದ್ರಕ್ಕೆ ಸೇರುತ್ತಿದೆ. ಇದೇ ಪ್ರಮಾಣದಲ್ಲಿ ಸಮುದ್ರಕ್ಕೆ ತ್ಯಾಜ್ಯ ಸೇರಿದಂತೆ 2050ರ ಹೊತ್ತಿಗೆ ಸಮುದ್ರದಲ್ಲಿ ಮೀನಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯವಿರಲಿದೆ.

  • As part of International Coastal Cleanup day, cadets of LKHSS carried out Puneet Sagar Abhiyan activity at Kayalpatnam beach. Cadets of SLB GHSS carried out beach cleanup at Kanyakumari beach. pic.twitter.com/DAkTda1hFw

ಶೇ 80ರಷ್ಟು ಜಾಗತಿಕ ಸಮಸ್ಯೆಯಾಗಿದೆ ಪ್ಲಾಸ್ಟಿಕ್​ : ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತೆ (ಐಸಿಸಿ) ಸ್ವಯಂ ಸೇವಕರು ನಾಲ್ಕು ದಶಕಗಳಿಂದ ಸಮುದ್ರ ತೀರದ ಕಸದ ದತ್ತಾಂಶವನ್ನು ಅಪ್ಡೇಟ್​​ ಮಾಡುತ್ತಿದ್ದಾರೆ. ಈ ದತ್ತಾಂಶದಲ್ಲಿ ಜಾಗತಿಕ ಪ್ಲಾಸ್ಟಿಕ್​ ಸಮಸ್ಯೆಗೆ ಪರಿಹಾರ ಹುಡುಕುವಂತೆ ಮತ್ತು ಇದನ್ನು ಅರ್ಥ ಮಾಡಿಕೊಳ್ಳುವಂತೆ ವಿಜ್ಞಾನಿಗಳು, ಪರಿಸರವಾದಿಗಳು, ಸರ್ಕಾರಗಳು ಜಗತ್ತಿಗೆ ತಿಳಿಸುತ್ತಿದೆ. ಐಸಿಸಿ ಪ್ರಕಾರ, ಮತ್ತೊಂದು ಅಧ್ಯಯನದಲ್ಲಿ ಜಾಗತಿಕ ತ್ಯಾಜ್ಯದಲ್ಲಿ ಪ್ಲಾಸ್ಟಿಕ್​ ಪ್ರಮಾಣ ಶೇ 80ರಷ್ಟಿದೆ. ಇದರಲ್ಲಿ ಆಹಾರ, ಪಾನೀಯ ಸೇರಿದಂತೆ ಪ್ಲಾಸ್ಟಿಕ್​ ಬ್ಯಾಕ್​, ಬಾಟೆಲ್ಸ್​, ಆಹಾರ ಕಂಟೈನರ್​ ಮತ್ತು ರ್ಯಾಪರ್​ಗಳಿವೆ.

  • For 51 years today, we've been working with you to protect the ocean from today’s greatest global challenges. We truly couldn't do what we do without YOU! 💙

    Here's what you can do to celebrate with us for our 51st anniversary! ⤵️https://t.co/i4nwoRg6np pic.twitter.com/TgPq0cufKG

    — Ocean Conservancy (@OurOcean) September 7, 2023 " class="align-text-top noRightClick twitterSection" data=" ">

ಇದನ್ನೂ ಓದಿ: ನಿಫಾ ವೈರಸ್​ ಆರ್ಭಟ ಕೇರಳದ ಕೋಯಿಕ್ಕೋಡ್​ಗೆ ಸೀಮಿತ: ಐಸಿಎಂಆರ್​ ಮಹಾನಿರ್ದೇಶಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.