ETV Bharat / bharat

ಭಾರತೀಯ ಮೂಲದ ಅಮೆರಿಕನ್​ ಸಂಖ್ಯಾಶಾಸ್ತ್ರಜ್ಞ ಸಿ ಆರ್​ ರಾವ್​ಗೆ ಅತ್ಯುನ್ನತ ಅಂತಾರಾಷ್ಟ್ರೀಯ ಪ್ರಶಸ್ತಿ - ಸಂಖ್ಯಾಶಾಸ್ತ್ರಜ್ಞನಾಗಿರುವ ಕಲ್ಯಂಪುಡಿ ರಾಧಾಕೃಷ್ಣ ರಾವ್

ಕರ್ನಾಟಕದ ಹಡಗಲಿಯಲ್ಲಿ ಜನಿಸಿದ ತೆಲುಗು ಕುಟುಂಬದ ರಾವ್​ ಸಂಖ್ಯಾಶಾಸ್ತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.

international-award-for-indian-american-statistician-cr-rao

author img

By

Published : Apr 10, 2023, 2:57 PM IST

ವಾಷಿಂಗ್ಟನ್​: ನೊಬೆಲ್​ ಪ್ರಶಸ್ತಿಗೆ ಸರಿ ಸಮಾನವಾದ ಮೌಲ್ಯವನ್ನು ಹೊಂದಿರುವ ಸಂಖ್ಯಾಶಾಸ್ತ್ರದಲ್ಲಿ ನೀಡಲಾಗುವ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಈ ವರ್ಷ ಭಾರತೀಯ ಮೂಲದ ಅಮೆರಿಕನ್​ ಗಣಿತಶಾಸ್ತ್ರಜ್ಞ ಮತ್ತು ಸಂಖ್ಯಾಶಾಸ್ತ್ರಜ್ಞನಾಗಿರುವ ಕಲ್ಯಂಪುಡಿ ರಾಧಾಕೃಷ್ಣ ರಾವ್​ ಅವರಿಗೆ ಲಭವಿಸಿದೆ. ಸಂಖ್ಯಾಶಾಸ್ತ್ರದಲ್ಲಿನ ಕ್ರಾಂತಿಕಾರ ಚಿಂತನೆಗಳ 75 ವರ್ಷದ ಅವರ ಪ್ರಯತ್ನಕ್ಕೆ ಸಂದ ಬಹುಮಾನ ಇದಾಗಿದೆ.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಇಂಟರ್​ನ್ಯಾಷನಲ್​ ಪ್ರೈಜ್​ ಇನ್​ ಸ್ಯಾಟಿಸ್ಟಿಕ್ಸ್​​ ಫೌಂಡೆಷನ್​, ರಾವ್​ ಅವರು 75 ವರ್ಷಗಳಿಗೂ ಹೆಚ್ಚುಗಳದ ಅವರ ಅಧ್ಯಯನ ವಿಜ್ಞಾನದ ಮೇಲೆ ಆಳವಾದ ಪ್ರಭಾವ ಬೀರಿದೆ ಎಂದಿದ್ದಾರೆ. ಸದ್ಯ ರಾವ್​ ಅವರಿಗೆ 102 ವಯಸ್ಸಾಗಿದೆ. ಪ್ರಶಸ್ತಿಯ ಮೊತ್ತ 80 ಸಾವಿರ ಅಮೆರಿಕನ್​ ಡಾಲರ್​ ಆಗಿದೆ. ಸಿ ಆರ್​ ರಾವ್​ ಅವರ ಸಂಖ್ಯಾಶಾಸ್ತ್ರದ ಚಿಂತನೆಯನ್ನು ಕ್ರಾಂತಿಕಾರಗೊಳಿಸಿದ್ದು ಮಾತ್ರವಲ್ಲದೇ, ಮಾನವನ ಅರ್ಥೈಸಿಕೊಳ್ಳುವಿಕೆ ಮೇಲೆ ಅಗಾಧವಾದ ಪ್ರಭಾವ ಬೀರುತ್ತಿದ್ದಾರೆ ಎಂದಿದ್ದಾರೆ ಇಂಟರ್​ನ್ಯಾಷನಲ್​ ಪ್ರೈಸ್​ ಇನ್​ ಸ್ಟ್ರಾಟಿಸ್ಟಿಕಲ್​ ಫೌಂಡೆಷನ್​ ಮುಖ್ಯಸ್ಥ ಗೈ ನಸೊನ್​

1945ರಲ್ಲಿ ರಾವ್​​ ಕಲ್ಕತ್ತಾ ಮ್ಯಾಥಮೆಟಿಕಲ್​ ಸೊಸೈಟಿ ಬುಲೆಟಿನ್​ನಲ್ಲಿ ತಮ್ಮ ಪೇಪರ್​ ಅನ್ನು ಪ್ರಕಟಿಸಿದ್ದರು. ಇದರಲ್ಲಿ ರಾವ್​ ಅವರು ಮೂರು ಮೂಲಭೂತ ಫಲಿತಾಂಶ ಪ್ರದರ್ಶಿಸಿದರು ಇದರಿಂದಾಗಿ ಆಧುನಿಕ ಸಂಖ್ಯಾಶಾಸ್ತ್ರದ ಕ್ಷೇತ್ರಕ್ಕೆ ಇದು ದಾರಿ ಮಾಡಿಕೊಟ್ಟಿತು. ಜೊತೆಗೆ ವಿಜ್ಞಾನ ಕ್ಷೇತ್ರದಲ್ಲಿ ಬಳಸಲಾಗುವ ಸಂಖ್ಯಾಶಾಸ್ತ್ರಿಯ ಸಾಧನವನ್ನು ಅವರು ಒದಗಿಸಿದರು ಎಂದು ಫೌಂಡೇಷನ್​ ಹೇಳಿಕೆ ಬಿಡುಗಡೆ ಮಾಡಿದೆ.

ರಾವ್​ ಅವರ ಸಂಖ್ಯಾಶಾಸ್ತ್ರದ ಫಲಿತಾಂಶಗಳನ್ನು ಇತ್ತೀಚಿನ ರಾಡಾರ್​ ಮತ್ತು ಅಂಟೆನಾ ಸಂಶೋಧನೆಯಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಇದು ಕೃತ್ತಕ ಬುದ್ದಿಮತ್ತೆ, ಡೇಟಾ ಸೈನ್ಸ್​, ಸಿಗ್ನಲ್​ ಪ್ರೊಸೆಸೊಂಗ್​, ಇಮೇಜ್​ ಪ್ರತ್ಯೇಕಿಸುವುದರಿಂದ ಇಅವರ ಕೊಡುಗೆ ಹೆಚ್ಚಿನ ಕೊಡುಗೆ ನೀಡಿದೆ.

ಕರ್ನಾಟಕದ ಹಡಗಲಿಯಲ್ಲಿ ಜನಿಸಿದ ತೆಲುಗು ಕುಟುಂಬದ ರಾವ್​ ಅವರು, ತಮ್ಮ ಶಿಕ್ಷಣವನ್ನು ಸಂಪೂರ್ಣವಾಗಿ ಆಂಧ್ರಪ್ರದೇಶದಲ್ಲೇ ಮುಗಿಸಿದರು. 1943ರಲ್ಲಿ ಆಂಧ್ರ ಪ್ರದೇಶ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಮ್ಯಾಥಮಟಿಕ್​ ಮತ್ತು ಕಲ್ಕಟ್​ ಯುನಿವರ್ಸಿಟಿಯಿಂದ ಸಂಖ್ಯಾಶಾಸ್ತ್ರದಲ್ಲಿ ಎಂಎ ಪದವಿ ಪಡೆದುಕೊಂಡರು. ಕೇಂಬ್ರಿಡ್ಜ್​ ವಿಶ್ವವಿದ್ಯಾಲಯದಿಂದ ಪಿಎಚ್​ಡಿ ಪದವಿಯನ್ನು ಕೂಡಾ ಪಡೆದರು. ಜೊತೆಗೆ 1965ರಲ್ಲಿ ಡಿಎಸ್ಸಿ ಪದವಿ ಪೂರೈಸಿದರು. ರಾವ್​ ಮೊದಲ ಬಾರಿಗೆ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ ಮತ್ತು ಕೇಂಬ್ರಿಡ್ಸ್​ನ ಅಂತ್ರಪಾಲಾಕೊಕಲ್​ ಮ್ಯೂಸಿಯಂನಲ್ಲಿ ಕಾರ್ಯ ನಿರ್ವಹಿಸಿದರು. ಬಳಿಕ ಅನೇಕ ಮಹತ್ವದ ಸ್ಥಾನಗಳನ್ನು ಅಲಂಕರಿಸುವಲ್ಲಿ ಯಶಸ್ವಿಯಾದರೂ ಕೂಡಾ. ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ನಿರ್ದೇಶಕರು, ಜವಾಹರ್​ ಲಾಲ್​ ನೆಹರೂ ಪ್ರೊಫೆಸರ್​ ಮತ್ತು ನ್ಯಾಷನಲ್ ​, ಪಿಟ್ಸ್​ಬರ್ಗ್​​ ಯುನಿವರ್ಸಿಟಿ ಪ್ರೊಫೆಸರ್​ ಸೇರಿದಂತೆ ಹಲವು ಹುದ್ದೆ ಅಲಂಕರಿಸಿ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ.

ಸದ್ಯ ಅವರು ಪೆನ್ಸಿಲ್ವೇನಿಯ ಸ್ಟೇಟ್​ ಯುನಿವರ್ಸಿಟಿ ಮತ್ತಿ ಬುಫಲೊ ಯುನಿವರ್ಸಿಟಿಯ ಸಂಶೋಧಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾವ್​ ಅವರು ಕಾರ್ಯ ಗುರುತಿಸಿ ಅನೇಕ ಪ್ರಶಸ್ತಿಗಳು ಕೂಡ ಲಭವಿಸಿದೆ. 1968ರಲ್ಲಿ ಭಾರತದ ಸರ್ಕಾರದ ಪದ್ಮ ಭೂಷಣ ಮತ್ತು 2001ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಂತಾರಾಷ್ಟ್ರೀಯ ಸಂಖ್ಯಾಶಾಸ್ತ್ರ ಸಂಘಟನೆ ಪ್ರತಿ ಎರಡು ವರ್ಷಕ್ಕೆ ಒಮ್ಮೆ ಸಂಖ್ಯಾಶಾಸ್ತ್ರದಲ್ಲಿ ನೀಡಲಾಗುವ ಅಂತಾರಾಷ್ಟ್ರೀಯನ್ನು ಪ್ರದಾನ ಮಾಡುತ್ತದೆ.

ಇದನ್ನೂ ಓದಿ: ಸತತ 8 ಗಂಟೆಗಳ ಕಾಲ ಈಜು.. ಸ್ವಿಮ್ಮಿಂಗ್​ನಲ್ಲಿ 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌'ಗೆ ಸೇರಿದ ಬಾಲಕಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.