ETV Bharat / bharat

ರಾಜ್ಯ ಸರ್ಕಾರದ ಅಸ್ಥಿರತೆಯಿಂದ ಆಡಳಿತದ ಮೇಲೆ ದುಷ್ಪರಿಣಾಮ : ಮಲ್ಲಿಕಾರ್ಜುನ ಖರ್ಗೆ

ಅಧಿವೇಶನದಲ್ಲಿ ರಾಹುಲ್ ಗಾಂಧಿ ಅವರು ಚೀನಾ ಸಮಸ್ಯೆಯನ್ನು ಪ್ರಶ್ನಿಸಲಿದ್ದಾರೆ. ನಾವೂ ಕೂಡ ಎಲ್ಲಾ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತೇವೆ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಸ್ಪಷ್ಟಪಡಿಸಿದರು..

internal feud affecting state administration: Mallikarjun Kharge
ರಾಜ್ಯದಲ್ಲಿ ಸರ್ಕಾರ ಅಸ್ಥಿರತೆಯಿಂದ ಆಡಳಿತದ ಮೇಲೆ ದುಷ್ಪರಿಣಾಮ: ಮಲ್ಲಿಕಾರ್ಜುನ ಖರ್ಗೆ
author img

By

Published : Jul 17, 2021, 8:42 PM IST

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಅಸ್ಥಿರವಾಗಿದೆ. ಆ ಪಕ್ಷದ ಶಾಸಕರು ಮತ್ತು ಸಚಿವರೇ ಬಹಿರಂಗವಾಗಿ ಸಿಎಂ ಬಿಎಸ್​ವೈ ಉಚ್ಛಾಟನೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಏಳೆಂಟು ತಿಂಗಳಿಂದ ರಾಜ್ಯದಲ್ಲಿ ಅಸ್ಥಿರತೆಯಿದೆ. ಇದು ರಾಜ್ಯದ ಆಡಳಿತದ ಮೇಲೆ ಪರಿಣಾಮ ಬೀರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಮತ್ತು ಕಾಂಗ್ರೆಸ್ ಮುಖಂಡ ಎ ಕೆ ಆ್ಯಂಟನಿ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ಬಗ್ಗೆ ಮಾತನಾಡಿದ ಖರ್ಗೆ, 'ರಕ್ಷಣಾ ಸಚಿವರು ಏನು ಚರ್ಚಿಸಿದ್ದಾರೆ ಎಂಬುದರ ಕುರಿತು ನನ್ನ ಬಳಿ ವಿವರವಾದ ಮಾಹಿತಿ ಇಲ್ಲ' ಎಂದು ಹೇಳಿದರು.

ಅಧಿವೇಶನದಲ್ಲಿ ರಾಹುಲ್ ಗಾಂಧಿ ಅವರು ಚೀನಾ ಸಮಸ್ಯೆಯನ್ನು ಪ್ರಶ್ನಿಸಲಿದ್ದಾರೆ. ನಾವೂ ಕೂಡ ಎಲ್ಲಾ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತೇವೆ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಪತ್ನಿ ಕೊಂದವರ ತಲೆಗೆ ₹20 ಸಾವಿರ ಬಹುಮಾನ ಘೋಷಿಸಿದ ಬಡ ರೈತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.