ETV Bharat / bharat

"ಕೋಮುಗಲಭೆ ಸೃಷ್ಟಿಸುವ ಪಿಎಫ್​ಐ" ನಿಷೇಧಕ್ಕೆ ಸರ್ವಧರ್ಮ ಸಮ್ಮೇಳನ ಅಂಗೀಕಾರ - ಈಟಿವಿ ಭಾರತ ಕನ್ನಡ

ದೇಶದಲ್ಲಿ ಧರ್ಮದಂಗಲ್​ ಜೋರಾಗಿದೆ. ಇದರ ಕಾವು ತಣಿಸಲು ನಿನ್ನೆ ದೆಹಲಿಯಲ್ಲಿ ಮಹತ್ವದ ಅಖಿಲ ಭಾರತ ಸೂಫಿ ಸಜ್ಜದ್​ನಶೀನ್​ ಸಮಿತಿ ನೇತೃತ್ವದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಿತು.

interfaith-dialogue-resolution
ಪಿಎಫ್​ಐ ಸಂಘಟನೆ ನಿಷೇಧಕ್ಕೆ ನಿರ್ಣಯ
author img

By

Published : Jul 31, 2022, 7:28 AM IST

ನವದೆಹಲಿ: ದೇಶದಲ್ಲಿ ಕೋಮು ದಳ್ಳುರಿ ಹೆಚ್ಚುತ್ತಿದ್ದು, ಮತೀಯ ಚಟುವಟಿಕೆಗಳಲ್ಲಿ ತೊಡಗಿರುವ ಪಿಎಫ್​ಐ ಸಂಘಟನೆಯನ್ನು ನಿಷೇಧಿಸಬೇಕು ಎಂಬ ಗೊತ್ತುವಳಿಯನ್ನು ಅಖಿಲ ಭಾರತ ಸೂಫಿ ಸಜ್ಜದ್​ನಶೀನ್​ ಸಮಿತಿ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಅಂಗೀಕರಿಸಲಾಗಿದೆ. ಸಮ್ಮೇಳನದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಸೇರಿದಂತೆ ಎಲ್ಲ ಧಾರ್ಮಿಕ ಮುಖಂಡರು ಭಾಗವಹಿಸಿದ್ದರು. ದೇಶ, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಪಿಎಫ್‌ಐ ಸೇರಿದಂತೆ ಇನ್ನಿತರ ಸಂಘಟನೆಗಳನ್ನು ನಿರ್ಬಂಧಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

ಅಜಿತ್​ ದೋವಲ್ ಮಾತನಾಡಿ​, "ಕೆಲವು ವಿಚಾರಗಳ ಮೇಲೆ ಧರ್ಮ ಮತ್ತು ಸಿದ್ಧಾಂತದ ಹೆಸರಿನಲ್ಲಿ ದ್ವೇಷ ಸೃಷ್ಟಿಸಲಾಗುತ್ತಿದೆ. ಇದು ಇಡೀ ರಾಷ್ಟ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇದನ್ನು ಎದುರಿಸಲು ಧಾರ್ಮಿಕ ಮುಖಂಡರು ಒಟ್ಟಾಗಿ ಕೆಲಸ ಮಾಡಬೇಕಿದೆ" ಎಂದು ಅಭಿಪ್ರಾಯಪಟ್ಟರು. "ಮತೀಯವಾದಿಗಳನ್ನು ಮಟ್ಟಹಾಕುವುದು ನಮ್ಮ ಆದ್ಯ ಕೆಲಸವಾಗಬೇಕು. ಧರ್ಮದ ಹೆಸರಿನಲ್ಲಿ ದ್ವೇಷವನ್ನು ಸೃಷ್ಟಿಸುವವರ ವಿರುದ್ಧ ಕ್ರಮವಾಗಬೇಕು. ಇದಕ್ಕಾಗಿ ನಾವೆಲ್ಲರೂ ಒಗ್ಗೂಡಿ ಹೋರಾಡೋಣ ಎಂದು ಅವರು ಕರೆ ನೀಡಿದರು.

ಸರ್ವಧರ್ಮದ ನಿರ್ಣಯಗಳಿವು:

  • ಭಾರತ ವಿವಿಧ ಧರ್ಮಗಳು ಮತ್ತು ನಂಬಿಕೆಗಳ ನಾಡು. ಶಾಂತಿಯುತ ಸಹಬಾಳ್ವೆಯನ್ನು ನಡೆಸಿಕೊಂಡು ಹೋಗಬೇಕು.
  • ಯಾವುದೇ ಧರ್ಮದ ವಿರುದ್ಧ ದ್ವೇಷ ಬಿತ್ತಬಾರದು. ಇಸ್ಲಾಮ್, ಸೂಫಿ ಸೇರಿದಂತೆ ಎಲ್ಲ ಧರ್ಮಗಳು ಮೂಲಭೂತವಾಗಿ ಮಾನವರನ್ನು ಯಾವುದೇ ತಾರತಮ್ಯವಿಲ್ಲದೆ ಪ್ರೀತಿಸಲು ಕಲಿಸುತ್ತವೆ. ಧರ್ಮದ ವಿರುದ್ಧದ ಆಂದೋಲನಕ್ಕೆ ಅವಕಾಶವಿಲ್ಲ.
  • ದೇಶದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಾಮರಸ್ಯ ಮತ್ತು ಸಹೋದರತ್ವದ ಸಂದೇಶವನ್ನು ಸಾರಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದು, ಎಲ್ಲಾ ಧಾರ್ಮಿಕ ಮುಖಂಡರು ತಮ್ಮ ಸಮುದಾಯಕ್ಕೆ ಮಾರ್ಗದರ್ಶನ ನೀಡುವ ಜವಾಬ್ದಾರಿ ಹೊರಬೇಕು. ವಿಶೇಷವಾಗಿ ಯುವಕರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಬೇಕು. ಸಂವಿಧಾನದ ಆದರ್ಶಗಳನ್ನು ಪಾಲಿಸಲು ಮತ್ತು ಅನುಸರಿಸಲು ಪ್ರೇರೇಪಿಸಬೇಕು.
  • ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಪಿಎಫ್​ಐ ಸೇರಿದಂತೆ ಮತ್ತಿತರ ಸಂಘಟನೆಗಳನ್ನು ನಿಷೇಧಿಸಬೇಕು. ನೆಲದ ಕಾನೂನಿನ ಪ್ರಕಾರ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
  • ಧರ್ಮದಳ್ಳುರಿಗೆ ಹೊತ್ತಿಸಲು ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ಸರ್ಕಾರ ಇದನ್ನು ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಅಪಾಯ ಸೃಷ್ಟಿಸುವ ಮೂಲವನ್ನು ತಡೆಗಟ್ಟಬೇಕು.
  • ಚರ್ಚೆ, ಸಂವಾದಗಳಲ್ಲಿ ಯಾವುದೇ ಧರ್ಮದ ದೇವರ ನಿಂದನೆ ಮಾಡಿದಲ್ಲಿ ಕಾನೂನುರೀತ್ಯಾ ಕ್ರಮ ವಹಿಸಬೇಕು.
  • ಇಸ್ಲಾಂ, ಹಿಂದೂ, ಸಿಖ್, ಕ್ರಿಶ್ಚಿಯನ್, ಜೈನ, ಬೌದ್ಧ ಸೇರಿದಂತೆ ಎಲ್ಲಾ ಧರ್ಮಗಳು ಮತ್ತು ಸಮುದಾಯಗಳು ಸಮೃದ್ಧಿ ಮತ್ತು ಸಾಮರಸ್ಯದಿಂದ ಸಹಬಾಳ್ವೆ ನಡೆಸಬೇಕು.

ಇದನ್ನೂ ಓದಿ: ಪೊಲೀಸರ ಮಿಂಚಿನ ಕಾರ್ಯಾಚರಣೆ.. ಭಾರಿ ಪ್ರಮಾಣದ ಹಣದೊಂದಿಗೆ ಸಿಕ್ಕಿಬಿದ್ದ ಕಾಂಗ್ರೆಸ್ ಶಾಸಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.