ಅಮೃತಸರ್(ಪಂಜಾಬ್): ಶುಕ್ರವಾರ ಗಡಿ ಭದ್ರತಾ ಪಡೆಗಳು ಪಾಕಿಸ್ತಾನದಿಂದ ಭಾರತಕ್ಕೆ ಪ್ರವೇಶಿಸುತ್ತಿದ್ದ ಡ್ರೋನ್‌ನ್ನು ಅಮೃತಸರ್ ಜಿಲ್ಲೆ ಹಾಗು ಡಾಕ್ ಗ್ರಾಮ ಪ್ರದೇಶಗಳಲ್ಲಿ ಹೊಡೆದುರುಳಿಸಿದ್ದಾರೆ.
ಅಮೃತಸರ್ ಹಾಗು ಡಾಕ್ ಸಮೀಪವಿರುವ ಪ್ರದೇಶದಲ್ಲಿ ಪಾಕಿಸ್ತಾನದಿಂದ ಭಾರತದ ಭೂಪ್ರದೇಶಕ್ಕೆ ಬರುತ್ತಿರುವ ಶಂಕಿತ ಡ್ರೋನ್‌ನ ಝೇಂಕರಿಸುವ ಸದ್ದು ಕೇಳಿಸಿದೆ. ಮಾಹಿತಿ ಪ್ರಕಾರ ಗಡಿಯಲ್ಲಿ ನಿಯೋಜಿಸಲಾದ ಗಡಿ ಭದ್ರತಾ ಪಡೆಗಳು ಶಂಕಿತ ಡ್ರೋನ್ಗೆ ಗುಂಡು ಹಾರಿಸಿ ವಿಫಲಗೊಳಿಸಿದ್ದಾರೆ. ಡ್ರೋನ್ ಕೆಳಕ್ಕೆ ಬಿದ್ದ ತಕ್ಷಣವೇ ಇಡೀ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದು, ಪೊಲೀಸರು ಮತ್ತು ಸಂಬಂಧಿತ ಸಂಸ್ಥೆಗಳಿಗೆ ಮಾಹಿತಿ ನೀಡಲಾಯಿತು.
ಡ್ರೋನ್‌ನ ಹುಡುಕಾಟದಲ್ಲಿ ಬಿಎಸ್‌ಎಫ್, ಹಾನಿಗೊಳಗಾದ 01 ಕ್ವಾಡ್‌ಕಾಪ್ಟರ್ DJI ಮ್ಯಾಟ್ರಿಸ್ 300 RTK (ಚೈನೀಸ್ ಡ್ರೋನ್) ಅನ್ನು ಡಾಕ್ ಗ್ರಾಮದ ಕೃಷಿ ಗಡಿ ಬೇಲಿ ಬಳಿ ವಶಪಡಿಸಿಕೊಂಡಿದೆ. ಈ ಮೂಲಕ ಬಿಎಸ್‌ಎಫ್ ಗಡಿ ಭದ್ರತಾ ಪಡೆಗಳು ಶಂಕಿತ ಡ್ರೋನ್‌ನನ್ನು ಸೆರೆಹಿಡಿದು, ಉಗ್ರ ಚಟುವಟಿಕೆಯನ್ನು ತಡೆದಿದ್ದಾರೆ.
ಇದನ್ನೂ ಓದಿ : ಒಂಬತ್ತು ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿಸಿ 54 ರಾಕೆಟ್ ಯಶಸ್ವಿ ಉಡಾವಣೆ..