ಕೋಟಾ/ರಾಜಸ್ಥಾನ: ಗುರುವಾರ ಬಂಧಿಸಲ್ಪಟ್ಟ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಡ್ಯಾನಿಶ್ ಚಿಕ್ನಾನನ್ನು ವಿಚಾರಣೆ ನಡೆಸಲಾಗ್ತಿದೆ.
ಕೋಟಾ ಪೊಲೀಸ್ ಹಾಗೂ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಜಂಟಿ ತಂಡವು ದಾವೂದ್ ಇಬ್ರಾಹಿಂನ ಆಪ್ತ ಡ್ಯಾನಿಶ್ ಮರ್ಚೆಂಟ್ ಅಲಿಯಾಸ್ ಚಿಕ್ನಾನನ್ನು ವಿಚಾರಣೆ ನಡೆಸುತ್ತಿವೆ. ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಜೋಧ್‌ಪುರದ ತಂಡವು ಅನಂತ್‌ಪುರ ಪೊಲೀಸ್ ಠಾಣೆಗೆ ತೆರಳಿ ಅಲ್ಲಿ ಡ್ಯಾನಿಶ್‌ನನ್ನು ವಿಚಾರಣೆ ನಡೆಸುತ್ತಿವೆ. ವರದಿಗಳ ಪ್ರಕಾರ, ಮುಂಬೈನ ವಿವಿಧ ಸ್ಥಳಗಳಲ್ಲಿ ದಾಖಲಾದ ಕನಿಷ್ಠ ಆರು ಕೊಲೆ ಪ್ರಕರಣಗಳಲ್ಲಿ ಡ್ರಗ್ಸ್ ಪೆಡ್ಲರ್ ಆಗಿರುವ ಚಿಕ್ನಾ ಸಹ ಪ್ರಮುಖ ಆರೋಪಿ.
ಮಹಾರಾಷ್ಟ್ರದ ಡೊಂಗ್ರಿ ಪ್ರದೇಶದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಡ್ರಗ್ಸ್ ವ್ಯವಹಾರ ನಿರ್ವಹಿಸುತ್ತಿದ್ದ ಆತನ ಆಪ್ತ ಡ್ಯಾನಿಶ್ ಚಿಕ್ನಾ ಅವರನ್ನು ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಬಂಧಿಸಲಾಗಿದೆ. ಈ ವೇಳೆ ಆತನ ವಾಹನದಿಂದ ಸಾಕಷ್ಟು ಪ್ರಮಾಣದ ಡ್ರಗ್ಸ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ, ಡ್ಯಾನಿಶ್ ರಾಜಸ್ಥಾನದತ್ತ ಸಾಗುವ ಸಾಧ್ಯತೆಯ ಬಗ್ಗೆ ಮಾಹಿತಿ ಎನ್‌ಸಿಬಿಗೆ ದೊರೆತಿದ್ದು, ಔಷಧ ನಿಯಂತ್ರಣ ಸಂಸ್ಥೆ ಕೋಟಾ ಪೊಲೀಸರಿಗೆ ಮಾಹಿತಿ ನೀಡಿ ಜಂಟಿ ಕಾರ್ಯಾಚರಣೆ ನಡೆಸಿ, ಅಪಾರ ಪ್ರಮಾಣದ ಡ್ರಗ್ಸ್ ಸಮೇತ ಚಿಕ್ನಾನನ್ನು ಬಂಧಿಸಿದ್ದಾರೆ.