ಸ್ಯಾನ್ ಫ್ರಾನ್ಸಿಸ್ಕೊ: ಮೆಟಾ ಮಾಲೀಕತ್ವದ ಇನ್ಸ್ಟಾಗ್ರಾಂ, ತನ್ನ ಶಾರ್ಟ್ ವೀಡಿಯೊ ರೀಲ್ಸ್ ಮಾಡುವ ಕ್ರಿಯೇಟರ್ಗಳಿಗೆ ಉತ್ತೇಜನ ನೀಡುವಲ್ಲಿ ತನ್ನ ಚೀನಾ ಎದುರಾಳಿ ಟಿಕ್ಟಾಕ್ನ ಸ್ಪರ್ಧೆ ಎದುರಿಸಲಾಗದೇ ಹಿಂದೆ ಬೀಳುವಂತಾಗಿದೆ.
ಮೆಟಾ ಕಂಪನಿಯ ಆಂತರಿಕ ದಾಖಲೆಗಳನ್ನು ಉಲ್ಲೇಖಿಸಿರುವ ಅಂತಾರಾಷ್ಟ್ರೀಯ ಮಾಧ್ಯಮವೊಂದು ಹೇಳುವ ಪ್ರಕಾರ- ಇನ್ಸ್ಟಾಗ್ರಾಂ ಬಳಕೆದಾರರು ನಿತ್ಯ ರೀಲ್ಸ್ ನೋಡಲು 17.6 ಮಿಲಿಯನ್ ತಾಸುಗಳನ್ನು ವ್ಯಯಿಸುತ್ತಿದ್ದಾರೆ. ಆದರೆ, ಟಿಕ್ಟಾಕ್ ಬಳಕೆದಾರರು ಪ್ರತಿದಿನ 197.8 ಮಿಲಿಯನ್ ತಾಸುಗಳನ್ನು ರೀಲ್ಸ್ ನೋಡಲು ವ್ಯಯಿಸುತ್ತಿದ್ದಾರೆ. ಅಂದರೆ ಟಿಕ್ಟಾಕ್ಗೆ ಹೋಲಿಸಿದರೆ ಇನ್ಸ್ಟಾಗ್ರಾಂ ಬಳಕೆದಾರರ ಪ್ರಮಾಣ ಹತ್ತರಲ್ಲಿ ಒಂದು ಮಾತ್ರ ಇದೆ. ಕಳೆದ ನಾಲ್ಕು ವಾರಗಳ ಅವಧಿಯಲ್ಲಿ ರೀಲ್ಸ್ ಎಂಗೇಜಮೆಂಟ್ ಶೇ 13.6 ರಷ್ಟು ಕುಸಿದಿದೆ ಎಂದು ವರದಿ ಹೇಳಿದೆ.
ಸೂಕ್ತವಾದ ಕಂಟೆಂಟ್ ತಯಾರಿಸಲು ಇನ್ಸ್ಟಾಗ್ರಾಂ ವಿಫಲವಾಗುತ್ತಿರುವುದು ಮತ್ತು ರೀಲ್ಸ್ನಲ್ಲಿ ಒರಿಜಿನಲ್ ಕಂಟೆಂಟ್ ಇಲ್ಲದಿರುವ ಕಾರಣದಿಂದ ಇನ್ಸ್ಟಾಗ್ರಾಂ ಹಿನ್ನಡೆ ಅನುಭವಿಸುತ್ತಿದೆ. ಅಮೆರಿಕದಲ್ಲಿ ಸುಮಾರು 11 ಮಿಲಿಯನ್ ಇನ್ಸ್ಟಾ ಕ್ರಿಯೇಟರ್ಸ್ ಇದ್ದಾರೆ. ಆದರೆ, ಅದರಲ್ಲಿ ಕೇವಲ 2.3 ಮಿಲಿಯನ್ ಅಥವಾ ಶೇ 20.7 ರಷ್ಟು ಕ್ರಿಯೇಟರ್ಸ್ ಮಾತ್ರ ಪ್ರತಿತಿಂಗಳು ಸಕ್ರಿಯರಾಗಿದ್ದಾರೆ. ಆದಾಗ್ಯೂ ತಿಂಗಳ ಆಧಾರದಲ್ಲಿ ನೋಡಿದರೆ ತಮ್ಮ ರೀಲ್ಸ್ ಎಂಗೇಜಮೆಂಟ್ ಸದ್ಯಕ್ಕೆ ಜಾಸ್ತಿ ಇದೆ ಎಂದು ಮೆಟಾ ವಕ್ತಾರರೊಬ್ಬರು ಹೇಳಿದ್ದಾರೆ.
ನಾವಿನ್ನೂ ಸಾಕಷ್ಟು ಕೆಲಸ ಮಾಡಬೇಕಿದೆ. ಆದರೆ ಕ್ರಿಯೇಟರ್ಸ್ ಮತ್ತು ವಹಿವಾಟುಗಳು ಸಕಾರಾತ್ಮಕ ಫಲಿತಾಂಶ ಪಡೆಯುತ್ತಿದ್ದಾರೆ. ಈಗ ಹಿಂದೆಂದಿಗಿಂತಲೂ ಹೆಚ್ಚು ಜನ ರೀಲ್ಸ್ ತಯಾರಿಸುತ್ತಿರುವುದರಿಂದ ಮತ್ತು ನೋಡುತ್ತಿರುವುದರಿಂದ ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ನಮ್ಮ ಹಣಕಾಸು ಆದಾಯ ಜಾಸ್ತಿಯಾಗಿದೆ ಎಂದು ಮೆಟಾ ವಕ್ತಾರರು ಹೇಳಿದ್ದಾರೆ.
ಇದನ್ನು ಓದಿ:ಆ್ಯಪಲ್ IOS 16 ಶೀಘ್ರದಲ್ಲಿ : ಏನೆಲ್ಲಾ ನವೀಕರಣಗೊಳ್ಳಲಿದೆ ಎಂಬ ಮಾಹಿತಿ ಇಲ್ಲಿದೆ..