ಜೈಪುರ( ರಾಜಸ್ಥಾನ): ಕೋಟ್ಯಂತರ ಜನರ ಸಾಮಾಜಿಕ ಮಾಧ್ಯಮ ಖಾತೆ ಇನ್‌ಸ್ಟಾಗ್ರಾಮ್ ಹ್ಯಾಕ್ ಆಗದಂತೆ ಕಾಪಾಡಿದ್ದಕ್ಕಾಗಿ, ವಿದ್ಯಾರ್ಥಿ ನೀರಜ್ ಶರ್ಮಾ 38 ಲಕ್ಷ ರೂಪಾಯಿ ಬಹುಮಾನವನ್ನು ಪಡೆದಿದ್ದಾರೆ. ಮಾಹಿತಿಯ ಪ್ರಕಾರ, ನೀರಜ್ ಶರ್ಮಾ ಅವರು ಇನ್ಸ್ಟಾಗ್ರಾಮ್ನಲ್ಲಿ ಇರುವ ದೋಷವೊಂದನ್ನು ಕಂಡು ಹಿಡಿದಿದ್ದಾರೆ. ಇದರಿಂದ ಯಾವುದೇ ಬಳಕೆದಾರರ ಖಾತೆಯ ಲಾಗಿನ್ ಮತ್ತು ಪಾಸ್‌ವರ್ಡ್ ಇಲ್ಲದೇ, ಥಂಬ್‌ನೇಲ್ ಬದಲಾವಣೆ ಮಾಡಿ ಹ್ಯಾಕ್ ಮಾಡಬಹುದಾಗಿದೆ.
![neeraj sharma find instagram bug instagram](https://etvbharatimages.akamaized.net/etvbharat/prod-images/rj-jpr-01-neeraj-photo-7201174_19092022105147_1909f_1663564907_1007.jpg)
ಈ ತಪ್ಪಿನ ಬಗ್ಗೆ ನೀರಜ್ ಶರ್ಮಾ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗೆ ಮಾಹಿತಿ ನೀಡಿದ್ದಾರೆ. ಅವರ ಈ ಮಾಹಿತಿಗಾಗಿ 38 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ. ಜೈಪುರದ ವಿದ್ಯಾರ್ಥಿ ನೀರಜ್ ಶರ್ಮಾ, BCA ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಸಂಗನೇರ್ ಪ್ರದೇಶದಲ್ಲಿ ವಾಸಿಸುತ್ತಿರುವ ನೀರಜ್ ಶರ್ಮಾ ಪೊದ್ದಾರ್ ಇಂಟರ್‌ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದಾರೆ.
![neeraj sharma find instagram bug instagram](https://etvbharatimages.akamaized.net/etvbharat/prod-images/rj-jpr-01-neeraj-photo-7201174_19092022105147_1909f_1663564907_981.jpg)
ಕಳೆದ ವರ್ಷ ಡಿಸೆಂಬರ್ನಿಂದ ಅವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದೋಷವನ್ನು ಕಂಡುಹಿಡಿಯಲು ಪ್ರಾರಂಭಿಸಿದರು. ಬಹಳ ಪರಿಶ್ರಮದ ಬಳಿಕ ಜನವರಿ 31ರ ಬೆಳಗ್ಗೆ ಅವರಿಗೆ ಇದರಲ್ಲಿ ದೋಷ ಇರುವುದು ತಿಳಿಯಿತು. ದಿನವಿಡೀ ದೋಷ ಪರೀಕ್ಷಿಸಿದ ನಂತರ, ಅವರು ರಾತ್ರಿಯಲ್ಲಿ ಇನ್ಸ್ಟಾಗ್ರಾಮ್ನ ಈ ತಪ್ಪಿನ ಬಗ್ಗೆ ಫೇಸ್‌ಬುಕ್‌ಗೆ ವರದಿಯನ್ನು ಕಳುಹಿಸಿದರು.
![neeraj sharma find instagram bug instagram](https://etvbharatimages.akamaized.net/etvbharat/prod-images/rj-jpr-01-neeraj-photo-7201174_19092022105147_1909f_1663564907_540.png)
ಅಷ್ಟೇ ಅಲ್ಲದೇ ನೀರಜ್ ಶರ್ಮಾ 5 ನಿಮಿಷಗಳಲ್ಲಿ ತಪ್ಪನ್ನು ತೋರಿಸಲು ಥಂಬ್‌ನೇಲ್ ಅನ್ನು ಬದಲಾಯಿಸಿದರು. ಅವರ ವರದಿಯನ್ನು ನೋಡಿದ ನಂತರ, ಮೇ 11 ರ ರಾತ್ರಿ, ಅವರಿಗೆ $ 45,000 (ಸುಮಾರು 35 ಲಕ್ಷ ರೂ.) ಬಹುಮಾನವನ್ನು ನೀಡಲಾಗಿದೆ ಎಂಬ ಮೇಲ್ ಅನ್ನು ಫೇಸ್‌ಬುಕ್‌ನಿಂದ ಸ್ವೀಕರಿಸಿದರು. ಈ ಬಹುಮಾನವನ್ನು ನೀಡಲು ನಾಲ್ಕು ತಿಂಗಳು ಆಗುವ ಹಿನ್ನೆಲೆ ಬೋನಸ್ ಆಗಿ ಫೇಸ್ಬುಕ್ ಸುಮಾರು 3 ಲಕ್ಷ ರೂ. ನೀಡಿದೆ.
ಇದನ್ನೂ ಓದಿ: ಸ್ಮಾರ್ಟ್ವಾಚ್ ಮಾರುಕಟ್ಟೆಗೆ ನಾರ್ಡ್ ಎಂಟ್ರಿ.. ಶೀಘ್ರ ಭಾರತದಲ್ಲಿ ವಾಚ್ ಬಿಡುಗಡೆ