ETV Bharat / bharat

ಮತ್ತೆ ವಿಕ್ಕಿ ಕೌಶಲ್​ ಜೊತೆ ತೆರೆ ಹಂಚಿಕೊಳ್ಳಲಿದ್ದಾರಾ ರಶ್ಮಿಕಾ ಮಂದಣ್ಣ..! - ETv Bharat Kannada

ಈ ಹಿಂದೆ ಜಾಹೀರಾತೊಂದರಲ್ಲಿ ಜೊತೆಯಾಗಿ ನಟಿಸಿದ್ದ ವಿಕ್ಕಿ ಕೌಶಲ್​ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಮತ್ತೆ ಒಟ್ಟಿಗೆ ಹೊಸ ಪ್ರಾಜೆಕ್ಟ್​ನಲ್ಲಿ ಅಭಿನಯಿಸುತ್ತಿದ್ದು, ಸಿನಿಮಾನಾ? ಜಾಹೀರಾತಾ? ಎಂಬ ಕುತೂಹಲ ಅಭಿಮಾನಿ ವಲಯದಲ್ಲಿ ಸೃಷ್ಟಿಯಾಗಿದೆ.

Vicky Kaushal and Rashmika Mandanna
ವಿಕ್ಕಿ ಕೌಶಲ್​ ಹಾಗೂ ರಶ್ಮಿಕಾ ಮಂದಣ್ಣ
author img

By

Published : Aug 2, 2022, 7:25 AM IST

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಸಿನಿಮಾ ಮಾತ್ರವಲ್ಲದೇ ಬಾಲಿವುಡ್​ ಹೊಸ​ ಸಿನಿಮಾಗಳಲ್ಲೂ ಬ್ಯುಸಿಯಾಗಿರುವ ನಟಿ. ಈಗ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿರುವ ರಶ್ಮಿಕಾ ಮತ್ತೊಮ್ಮೆ ಹೊಸ ಪ್ರಾಜೆಕ್ಟ್​ನಲ್ಲಿ ನಟ ವಿಕ್ಕಿ ಕೌಶಲ್​ ಜೊತೆ ಸ್ಕ್ರೀನ್​ ಶೇರ್​ ಮಾಡಿಕೊಳ್ಳಲಿರುವ ಹಿಂಟ್​ ಬಿಟ್ಟುಕೊಟ್ಟಿದ್ದಾರೆ.

ರಶ್ಮಿಕಾ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಚೆಂಡಿನ​ ಮೇಲೆ ಕಣ್ಣು, ಬಾಯಿ, ಮೂಗು ಇರುವ ಸ್ಮೈಲಿ ಫೇಸ್​ ಚಿತ್ರ ಬಿಡಿಸಿರುವ ಚಿತ್ರವನ್ನು ಹಂಚಿಕೊಂಡಿದ್ದು, 'ಇದು ನಿಮಗಾಗಿ ಶೂಟಿಂಗ್​ ದಿನದ ನೋಟ' ಎಂದು ವಿಕ್ಕಿ ಕೌಶಲ್​ ಅವರನ್ನು ಟ್ಯಾಗ್​ ಮಾಡಿದ್ದಾರೆ. ವಿಕ್ಕಿ ಕೌಶಲ್​ ರಶ್ಮಿಕಾ ಅವರ ಅದೇ ಪೋಸ್ಟ್​ ಅನ್ನು ತಮ್ಮ ಇನ್​​ಸ್ಟಾದಲ್ಲಿ ಶೇರ್​ ಮಾಡಿಕೊಂಡು 'ನಿಮ್ಮ ಜೊತೆ ಕೆಲಸ ಮಾಡಿರುವುದು ನಿಜಕ್ಕೂ ಅದ್ಭುತ' ಎಂದು ಬರೆದುಕೊಂಡಿದ್ದಾರೆ.

ಬಹುತೇಕ ಇಬ್ಬರೂ ಹೊಸ ಪ್ರಾಜೆಕ್ಟ್​ನಲ್ಲಿ ಜೊತೆಯಾಗಿ ನಟಿಸುತ್ತಿರುವುದು ಖಚಿತವಾದರೂ, ಈ ಹಿಂದೆ ಜಾಹಿರಾತುವೊಂದರಲ್ಲಿ ಜೊತೆಯಾಗಿ ನಟಿಸಿರುವ ಇವರು ಮತ್ತೆ ಜಾಹೀರಾತಿನಲ್ಲಿ ನಟಿಸುತ್ತಿದ್ದಾರಾ ಅಥವಾ ಸಿನಿಮಾ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗಳು ಅಭಿಮಾನಿ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ಇದನ್ನೂ ಓದಿ : ಆಗಸ್ಟ್‌ 6 ರಿಂದ ಬಿಗ್‌ ಬಾಸ್ ಶೋ ಆರಂಭ: ಸುದೀಪ್​ ಏನಂದ್ರು ಗೊತ್ತೇ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.