ಮಹಾರಾಷ್ಟ್ರ: ವಾಸೈನ ಸಾಹಸಿ ಯುವಕನೊಬ್ಬ ಕೊರೊನಾ ಗೆದ್ದು ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಪರ್ವತ ಏರಿದ್ದಾನೆ.
ಹರ್ಷವರ್ಧನ್ ಜೋಶಿ ಎವರೆಸ್ಟ್ ಏರಿದ ಯುವಕ. ವಾಸೈ ಪಶ್ಚಿಮದ ದಿವಾನ್‌ಮನ್‌ನ ಈತ ಕ್ರೌಡ್‌ಫಂಡಿಂಗ್ ಮೂಲಕ ಈ ಯಾತ್ರೆಗಾಗಿ ಹಣ ಸಂಗ್ರಹಿಸಿ ಎವರೆಸ್ಟ್ ಏರಲು ಮಾರ್ಚ್ 30ರಂದು ಹೊರಟ.
ಮಧ್ಯದಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಎಂಟು ದಿನ ಚಿಕಿತ್ಸೆ ಪಡೆದು ವೈರಸ್ ಸೋಲಿಸಿದ್ದಾನೆ. ಮತ್ತೆ ತನ್ನ ಪಯಣ ಪ್ರಾರಂಭಿಸಿ ಮೇ 23ರಂದು ಬೆಳಗ್ಗೆ 6.30ಕ್ಕೆ ಮೌಂಟ್ ಎವರೆಸ್ಟ್ ಏರಿ ಸಾಹಸ ಮೆರೆದಿದ್ದಾನೆ. ತವರಿಗೆ ಮರಳಿದಾಗ ಹರ್ಷವರ್ಧನ್ ಜೋಶಿ ಸಾಹಸ ಮೆಚ್ಚಿ ವಾಸೈ ಮಹಾನಗರ ಪಾಲಿಕೆ ವತಿಯಿಂದ ಉದ್ಯೋಗ ನೀಡಲಾಗಿದೆ.
ತೆಲಂಗಾಣದಲ್ಲಿ '6 to 6' ನೊಂದಿಗೆ ಹತ್ತು ದಿನಗಳ ಕಾಲ ಮತ್ತೆ ಲಾಕ್ಡೌನ್ ವಿಸ್ತರಣೆ