ETV Bharat / bharat

ಸಮುದ್ರದಲ್ಲಿ ಹೋರಾಟಕ್ಕೆ ಅಗ್ನಿವೀರ್ ಮಹಿಳೆಯರು ಸಜ್ಜು​ - ನೌಕಾಪಡೆಯ ನಾವಿಕರಾಗಿ ಮಹಿಳೆಯರಿಗೆ ಇದು ಮೊದಲ ಅವಕಾಶ

ಒಡಿಶಾದಲ್ಲಿರುವ INS ಚಿಲ್ಕಾ ತರಬೇತಿ ಕೇಂದ್ರಕ್ಕೆ ಇದೊಂದು ಹೊಸ ಅನುಭವ. ಏಕೆಂದರೆ ಹಲವಾರು ಯುದ್ಧ ವೀರರನ್ನು ಹುಟ್ಟುಹಾಕಿರುವ ಈ ಕೇಂದ್ರವು ಇದೇ ಮೊದಲ ಬಾರಿಗೆ 273 ವೀರ ಮಹಿಳೆಯರನ್ನು ನೌಕಾ ದಳಕ್ಕೆ ಅಣಿಗೊಳಿಸಿದೆ.

inspirational stories of first navy women agniveer  navy women agniveer  navy women agniveer 2023  ಸಮುದ್ರದಲ್ಲಿ ಹೋರಾಟಕ್ಕೆ ಅಗ್ನಿ ವೀರ್ ಮಹಿಳೆಯರು ಸಜ್ಜು​ ಒಡಿಶಾದ INS ಚಿಲ್ಕಾ ತರಬೇತಿ  ಮೊಟ್ಟಮೊದಲ ಬಾರಿಗೆ ನೌಕಾಪಡೆಯಲ್ಲಿ 273 ವೀರ ಮಹಿಳೆ  ಅಗ್ನಿವೀರ ಮಹಿಳೆಯರು ಸಾಬೀತು  ದೇಶಾದ್ಯಂತ ನೌಕಾಪಡೆಗೆ ಅರ್ಜಿ  ನೌಕಾಪಡೆಯ ನಾವಿಕರಾಗಿ ಮಹಿಳೆಯರಿಗೆ ಇದು ಮೊದಲ ಅವಕಾಶ  ಮಹಿಳಾ ಸಬಲೀಕರಣವನ್ನು ಗಮನದಲ್ಲಿಟ್ಟುಕೊಂಡು ನೌಕಾಪಡೆ
ಸಮುದ್ರದಲ್ಲಿ ಹೋರಾಟಕ್ಕೆ ಅಗ್ನಿ ವೀರ್ ಮಹಿಳೆಯರು ಸಜ್ಜು​
author img

By

Published : Mar 31, 2023, 10:27 AM IST

ಭುವನೇಶ್ವರ (ಒಡಿಶಾ): ದೇಶಕ್ಕಾಗಿ ಹೋರಾಡುವ ಹಠ ಇರಬೇಕೇ ಹೊರತು ಹೆಣ್ಣು ಗಂಡೆಂಬ ಭೇದವಿರಬಾರದು ಎಂಬುದನ್ನು ಅಗ್ನಿವೀರ ಮಹಿಳೆಯರು ಸಾಬೀತು ಮಾಡಿದ್ದಾರೆ. ದೇಶಾದ್ಯಂತ ನೌಕಾಪಡೆಗೆ ಅರ್ಜಿ ಸಲ್ಲಿಸಿದ್ದ 82,000 ಮಂದಿಯ ಪೈಕಿ 273 ಮಹಿಳೆಯರು ಅಗ್ನಿಪಥ್ ಯೋಜನೆಯ ಭಾಗವಾಗಿ ನೌಕಾಪಡೆ ತರಬೇತಿಗೆ ಅರ್ಹತೆ ಪಡೆದಿದ್ದರು. ಇವರೆಲ್ಲರೂ ಒಡಿಶಾದ ಐಎನ್​ಎಸ್ ಚಿಲ್ಕಾದಲ್ಲಿ 16 ವಾರಗಳ ಕಾಲ ವಿವಿಧ ರೀತಿಯ ಕಠಿಣ ತರಬೇತಿ ಮುಗಿಸಿದ್ದಾರೆ.

ನೌಕಾ ಸೇನೆಯ ನಾವಿಕರಾಗಿ ಮಹಿಳೆಯರಿಗೆ ಇದು ಚೊಚ್ಚಲ ಅವಕಾಶ. ಇದರೊಂದಿಗೆ, INS ವಿಶೇಷವಾಗಿ ಮಹಿಳಾ ಪ್ರಶಿಕ್ಷಣಾರ್ಥಿಗಳ ಅಗತ್ಯತೆ ಮತ್ತು ಸೌಲಭ್ಯಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಇವರಿಗಾಗಿ ವಿಶೇಷ ಕೊಠಡಿಗಳು ಮತ್ತು ಊಟದ ಹಾಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಷಿನ್​ಗಳು, ಬಳಸಿದ ವಸ್ತುಗಳನ್ನು ಪರಿಸರಸ್ನೇಹಿಯಾಗಿ ನಾಶಪಡಿಸಿ ಬಿಸಾಡಬಹುದಾದ ಯಂತ್ರಗಳು, ರಕ್ಷಣೆಗಾಗಿ ಭದ್ರತಾ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.

ಈಜು ತರಬೇತುದಾರರಾಗಿ ತರಬೇತಿ ಪಡೆದ ಮಹಿಳೆಯರನ್ನು ನೇಮಿಸಿಕೊಳ್ಳಲಾಗುತ್ತಿದೆ. ಭವಿಷ್ಯದ ಅಗತ್ಯತೆಗಳು ಮತ್ತು ಮಹಿಳಾ ಸಬಲೀಕರಣವನ್ನು ಗಮನದಲ್ಲಿಟ್ಟುಕೊಂಡು ನೌಕಾಪಡೆಯು ಈ ದಿಕ್ಕಿನಲ್ಲಿ ಹೆಜ್ಜೆಗಳನ್ನು ಇಡುತ್ತಿದೆ. ಇಲ್ಲಿ ತರಬೇತಿ ಸ್ವೀಕರಿಸಿದ ಮಹಿಳೆಯರು ಕಾರ್ಯಾಚರಣೆಯ ಕರ್ತವ್ಯಗಳಲ್ಲಿ ಮತ್ತು ಮುಂಚೂಣಿ ಯುದ್ಧನೌಕೆಗಳಲ್ಲಿ ಪುರುಷರೊಂದಿಗೆ ಸಮಾನವಾಗಿ ಕೆಲಸ ಮಾಡಲಿದ್ದಾರೆ ಎಂದು ನೌಕಾಪಡೆ ಕಮಾಂಡರ್ ಗೌರಿ ಮಿಶ್ರಾ ಹೇಳಿದರು.

inspirational stories of first navy women agniveer  navy women agniveer  navy women agniveer 2023  ಸಮುದ್ರದಲ್ಲಿ ಹೋರಾಟಕ್ಕೆ ಅಗ್ನಿ ವೀರ್ ಮಹಿಳೆಯರು ಸಜ್ಜು​ ಒಡಿಶಾದ INS ಚಿಲ್ಕಾ ತರಬೇತಿ  ಮೊಟ್ಟಮೊದಲ ಬಾರಿಗೆ ನೌಕಾಪಡೆಯಲ್ಲಿ 273 ವೀರ ಮಹಿಳೆ  ಅಗ್ನಿವೀರ ಮಹಿಳೆಯರು ಸಾಬೀತು  ದೇಶಾದ್ಯಂತ ನೌಕಾಪಡೆಗೆ ಅರ್ಜಿ  ನೌಕಾಪಡೆಯ ನಾವಿಕರಾಗಿ ಮಹಿಳೆಯರಿಗೆ ಇದು ಮೊದಲ ಅವಕಾಶ  ಮಹಿಳಾ ಸಬಲೀಕರಣವನ್ನು ಗಮನದಲ್ಲಿಟ್ಟುಕೊಂಡು ನೌಕಾಪಡೆ
ಪ್ರಶಸ್ತಿ ಪಡೆಯುತ್ತಿರುವ ಅಗ್ನಿ ವೀರ್​ ಮಹಿಳೆಯ ಖುಷಿ

ತರಬೇತಿ ಪೂರ್ಣಗೊಳಿಸಿದವರಲ್ಲಿ ಪಠಾಣ್‌ಕೋಟ್‌ನ 19 ವರ್ಷದ ಖುಷಿ ಪಠಾನಿಯಾ ಅತ್ಯುತ್ತಮ ಮಹಿಳಾ ಅಗ್ನಿಶಾಮಕ ದಳದ ಜನರಲ್ ಬಿಪಿನ್ ರಾವತ್ ಟ್ರೋಫಿ ಪಡೆದರು. ಇವರ ಅಜ್ಜ ಸುಬೇದಾರ್ ಮೇಜರ್ ಆಗಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ತಂದೆ ಕೃಷಿಕರು ಮತ್ತೊಬ್ಬ ಯುವತಿ 19 ವರ್ಷದ ಹಿಶಾ ಬಾಘೆಲ್ ತನ್ನ ಪ್ರೀತಿಯ ತಂದೆಯ ಕನಸು ನನಸಾಗಿಸಲು ಯುದ್ಧಭೂಮಿ ಪ್ರವೇಶಿಸುತ್ತಿದ್ದಾರೆ.

ಹಿಶಾ ಎಂಬವರು ಛತ್ತೀಸ್‌ಗಢ ರಾಜ್ಯದಿಂದ ನೌಕಾದಳಕ್ಕೆ ಆಯ್ಕೆಯಾದ ಮೊದಲ ಅಗ್ನಿವೀರ ಮಹಿಳೆ. ರಾಜಧಾನಿ ರಾಯ್‌ಪುರದಿಂದ 65 ಕಿಲೋಮೀಟರ್‌ ದೂರದಲ್ಲಿರುವ ಬೋರಿಗಾರ್ಕಾ ಆಕೆಯ ಗ್ರಾಮ. ಬಾಲ್ಯದಿಂದಲೂ ಓದು, ಆಟಗಳಲ್ಲಿ ಕ್ರಿಯಾಶೀಲರಾಗಿದ್ದ ಹಿಶಾ ಬಿಎಸ್ಸಿ ಕಂಪ್ಯೂಟರ್ ಶಿಕ್ಷಣ ಮುಗಿಸಿದ್ದಾರೆ. ಆ ಸಮಯದಲ್ಲಿಯೇ NCC ಗೆ ಸೇರಿದ್ದರು. ತಂದೆ ಸಂತೋಷ್ ಬಾಘೇಲ್ ಆಟೋ ಚಾಲಕ. ಸೇನೆಗೆ ಸೇರಲು ಇವರು ಮಗಳನ್ನು ಪ್ರೋತ್ಸಾಹಿಸಿದ್ದರಂತೆ.

ಮನೆಯಲ್ಲಿ ಎಷ್ಟೇ ಕಷ್ಟವಾದರೂ ಸರಿ, ಮಕ್ಕಳು ಉನ್ನತ ಮಟ್ಟದಲ್ಲಿರಬೇಕೆಂಬುದು ಬಾಘೇಲ್​ ಕನಸಾಗಿತ್ತು. ದುರದೃಷ್ಟವಶಾತ್ ಅವರಿಗೆ 2016 ರಲ್ಲಿ ಕ್ಯಾನ್ಸರ್​ ರೋಗ ಬಾಧಿಸಿತ್ತು. ಅಂದಿನಿಂದ ಚಿಕಿತ್ಸೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ಖರ್ಚು ಮಾಡಿ ಉದ್ಯೋಗಕ್ಕೆ ಬಳಸುತ್ತಿದ್ದ ವಾಹನ ಮಾರಬೇಕಾಯಿತು. ಆದರೂ ಅವರು ನಿರಾಶೆಗೊಳ್ಳಲಿಲ್ಲ.

ವೈಜಾಗ್​ನಲ್ಲಿ ನಡೆದ ಅಗ್ನಿವೀರ್ ಸೆಲೆಕ್ಷನ್ಸ್‌ನ ಫಿಸಿಕಲ್ ಟೆಸ್ಟ್​ನಲ್ಲಿ ಹಿಶಾ ನಂಬರ್ ಒನ್ ಆಗಿದ್ದರು. ಹಿಶಾ ತರಬೇತಿಯ ಅಂತಿಮ ಹಂತದಲ್ಲಿದ್ದಾಗ ಸಂತೋಷ್​ ಬಾಘೇಲ್​ ಕ್ಯಾನ್ಸರ್​ನಿಂದಾಗಿ ಮೃತಪಟ್ಟರು. ಹಿಶಾಳನ್ನು ನೇವಿ ಸಮವಸ್ತ್ರದಲ್ಲಿ ನೋಡುವ ತಂದೆಯ ಕನಸಿಗೆ ಭಂಗ ಬರಬಾರದು ಎಂದು ಕುಟುಂಬಸ್ಥರು ತಂದೆ ಸಾವನ್ನಪ್ಪಿರುವ ವಿಷಯವನ್ನು ಇನ್ನೂ ಆಕೆಗೆ ಹೇಳಿಲ್ಲ. ಏಪ್ರಿಲ್ ಎರಡನೇ ವಾರದಲ್ಲಿ ಮನೆಗೆ ಬರಲಿರುವ ಹಿಶಾಗೆ ತಂದೆ ಮೃತಪಟ್ಟಿರುವ ವಿಷಯ ತಿಳಿಸುತ್ತೇವೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಇದನ್ನೂ ಓದಿ: ನೌಕಾ ದಿನಾಚರಣೆ: ಕದಂಬ ನೌಕಾನೆಲೆಯಲ್ಲಿ ಗಮನ ಸೆಳೆದ ಬ್ಯಾಂಡ್ ಪ್ರದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.