ರೋಹ್ತಾಸ್(ಬಿಹಾರ): ತಾಯಿ ಪ್ರೀತಿಗೆ ಕೊನೆ ಇಲ್ಲ. ಅದು ಎಷ್ಟು ಅಮೂಲ್ಯ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮರದಿಂದ ಬಿದ್ದು ಕೋತಿ ಮತ್ತು ಅದರ ಮರಿ ಗಾಯಗೊಂಡಿವೆ. ತಾನು ಗಾಯಗೊಂಡರೂ ತಾಯಿ ಕೋತಿ ತನ್ನ ಮರಿಯನ್ನು ಎದೆಗವಚಿಕೊಂಡು ಆಸ್ಪತ್ರೆಯೊಂದರ ಮುಂದೆ ಕುಳಿತಿದ್ದವು. ಇದನ್ನು ಗಮನಿಸಿದ ವೈದ್ಯರು ತಕ್ಷಣ ಒಳಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡಿದರು. ಬಿಹಾರದ ರೋಹ್ತಾಸ್ನಲ್ಲಿ ಈ ಘಟನೆ ನಡೆದಿದೆ.
ಆಸ್ಪತ್ರೆಯ ಬಾಗಿಲ ಬಳಿ ಅಸಹಾಯಕ ಸ್ಥಿತಿಯಲ್ಲಿ ಕುಳಿತಿದ್ದ ಕೋತಿಯನ್ನು ಕಂಡ ಸಿಬ್ಬಂದಿ ಅದನ್ನು ಓಡಿಸಲು ಮುಂದಾದಾಗ ಅವುಗಳು ಗಾಯಗೊಂಡಿದ್ದು ಕಂಡುಬಂದಿದೆ. ವಿಷಯ ತಿಳಿದ ವೈದ್ಯರು ಕೋತಿ ಮತ್ತು ಅದರ ಮರಿಯ ಗಾಯವನ್ನು ಕಂಡು ಚಿಕಿತ್ಸೆಗಾಗಿ ಅದನ್ನು ಒಳಕ್ಕೆ ಕರೆದಿದ್ದಾರೆ.
ಈ ಸಂದರ್ಭದಲ್ಲಿ ತನ್ನ ಮರಿಯನ್ನು ಎದೆಗವಚಿಕೊಂಡಿದ್ದ ಕೋತಿ, ರೋಗಿಗಳು ಕುಳಿತುಕೊಳ್ಳುವ ಕುರ್ಚಿಯ ಮೇಲೆ ಬಂದು ಕೂತಿದೆ. ಮರಿಯನ್ನು ಯಾರಾದರು ಮುಟ್ಟಲು ಬಂದರೆ ಹೆದರಿಸುವ ಭಯವಿದ್ದರೂ ವೈದ್ಯರು ಧೈರ್ಯ ಮಾಡಿ ಗಾಯಗೊಂಡ ಮರಿಕೋತಿಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ತಾಯಿ ಕೋತಿ ವೈದ್ಯರನ್ನೇ ದುರುಗುಟ್ಟಿ ನೋಡುತ್ತಾ ಕುಳಿತಿತ್ತು.
ವೈದ್ಯರು ಮರಿ ಕೋತಿಯ ಗಾಯವನ್ನು ಸ್ವಚ್ಚಗೊಳಿಸುತ್ತಿದ್ದರೆ, ಕೋತಿ ತನ್ನ ಮರಿಯನ್ನು ಒಂದು ಕ್ಷಣವೂ ತನ್ನಿಂದ ಬೇರ್ಪಡಲು ಬಿಡಲಿಲ್ಲ. ವೈದ್ಯರು ಮರಿಗೆ ಚಿಕಿತ್ಸೆ ನೀಡಿದ ನಂತರ ಗಾಯಗೊಂಡಿದ್ದ ತಾಯಿ ಕೋತಿಗೂ ಚಿಕಿತ್ಸೆ ನೀಡಿದ್ದಾರೆ. ಈ ವೇಳೆ ಅದು ಸುಮ್ಮನೆ ಕೂತು ಚಿಕಿತ್ಸೆ ಪಡೆದಿದೆ.
ಮಂಗನ ಬುದ್ದಿವಂತಿಕೆಗೆ ಜನ ಬೆರಗು: ಮಂಗನ ತಾಯಿ ಪ್ರೀತಿ ಮತ್ತು ಬುದ್ಧಿವಂತಿಕೆಯನ್ನು ಕಂಡ ಅಲ್ಲಿದ್ದ ಜನರು ಆಶ್ಚರ್ಯ ಚಕಿತರಾಗಿದ್ದಾರೆ. ತಾಯಿ ಕೋತಿ ಮತ್ತು ಅದರ ಮಗುವನ್ನು ನೋಡಲು ಜನರು ಕ್ಲಿನಿಕ್ ಮುಂದೆ ಜಮಾಯಿಸಿದ್ದರು. ಕೆಲವರು ವಿಡಿಯೋ ಕೂಡ ಮಾಡಿದ್ದಾರೆ. ಖಾಸಗಿ ಕ್ಲಿನಿಕ್ ನಡೆಸುತ್ತಿರುವ ಡಾ.ಎಸ್.ಎಂ.ಅಹ್ಮದ್ ಎಂಬುವವರು ಮಂಗಗಳಿಗೆ ಚಿಕಿತ್ಸೆ ನೀಡಿದ ಹೊರಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಮನೆಪಾಠ ಮಾಡದ್ದಕ್ಕೆ ಬಾಲಕಿಯನ್ನು ಕೈ-ಕಾಲು ಕಟ್ಟಿ ಛಾವಣಿ ಮೇಲೆ ಬಿಸಾಡಿದ ಪೋಷಕರು!