ETV Bharat / bharat

ವಿಲ್ಲುಪುರಂನ ಆಶ್ರಮದಲ್ಲಿ ಅಮಾನವೀಯ ಘಟನೆ: ಮಾನಸಿಕ ಅಸ್ವಸ್ಥರಿಗೆ ಡ್ರಗ್ಸ್​ ನೀಡಿ ದೌರ್ಜನ್ಯ ಆರೋಪ - ಮಾನಸಿಕ ಅಸ್ವಸ್ಥರ ಮೇಲೆ ಲೈಂಗಿಕ ದೌರ್ಜನ್ಯ

ಮಾನಸಿಕ ಅಸ್ವಸ್ಥರ ಆಶ್ರಯ ತಾಣದಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ನಡೆಸುವ ಬದಲು ಅವರ ಮೇಲೆ ಪೈಶಾಚಿಕವಾಗಿ ಆಡಳಿತ ಮಂಡಳಿ ವರ್ತಿಸಿದೆ ಎಂಬ ಆರೋಪ ತಮಿಳುನಾಡಿನ ವಿಲ್ಲುಪುರಂನಲ್ಲಿ ಕೇಳಿಬಂದಿದೆ.

House of Horror: Inmates Drugged, Raped, Tortured at Villupuram
ವಿಲ್ಲುಪುರಂನ ಆಶ್ರಮದಲ್ಲಿ ಅಮಾನವೀಯ ಘಟನೆ; ಮಾನಸಿಕ ಅಸ್ವಸ್ಥರಿಗೆ ಡ್ರಗ್ಸ್​ ನೀಡಿ ದೌರ್ಜನ್ಯ
author img

By

Published : Feb 16, 2023, 1:55 PM IST

ವಿಲ್ಲುಪುರಂ (ತಮಿಳುನಾಡು): ವಿಲ್ಲುಪುರಂನ ಅನ್ಬುಂ ಜ್ಯೋತಿ ಆಶ್ರಮದ ಮೇಲೆ ಪೊಲೀಸ್​ ಅಧಿಕಾರಿಗಳು ದಾಳಿ ನಡೆಸಿದ್ದು, ಇಲ್ಲಿ ಮಾನಸಿಕ ಅಸ್ವಸ್ಥರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಅಮಾನವೀಯ ಘಟನೆ ವರದಿಯಾಗಿದೆ. ಇದೀಗ ಅದೇ ಆಶ್ರಮದ ಮತ್ತೊಂದು ಬ್ರಾಂಚ್​ನಲ್ಲಿ 25 ಮಂದಿ ಮಾನಸಿಕ ಅಸ್ವಸ್ಥರನ್ನು ಬುಧವಾರ ರಕ್ಷಿಸಲಾಗಿದ್ದು, ಇದರಲ್ಲಿ 13 ಮಂದಿ ಮಹಿಳೆಯರಿದ್ದು, ಅವರನ್ನೆಲ್ಲಾ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಏನಿದು ಘಟನೆ: ಸಲೀಂ ಖಾನ್​ ಎಂಬ ವ್ಯಕ್ತಿ ಖಾಸಗಿ ಆಶ್ರಮದಲ್ಲಿದ್ದ ತಮ್ಮ ಅಂಕಲ್​ ಜಾಹಿರುಲ್ಲಾ ನಾಪತ್ತೆಯಾಗಿದ್ದಾರೆ ಎಂದು ಮದ್ರಾಸ್​ ಹೈ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಅನ್ವಯ ಕೋರ್ಟ್​ ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಕಳೆದ 15 ವರ್ಷಗಳಿಂದ ಮಾನಸಿಕ ಅಸ್ವಸ್ಥರಿಗಾಗಿ ಕಾರ್ಯ ನಿರ್ವಹಿಸುತ್ತಿದ್ದ ಈ ಆಶ್ರಮದ ಮೇಲೆ ದಾಳಿ ನಡೆಸಿದ್ದಾರೆ. ಕಳೆದ ಫೆ. 10ರಂದು ಈ ಆಶ್ರಮದ ಮೇಲೆ ದಾಳಿ ನಡೆಸಿದಾಗ ಅಧಿಕಾರಿಗಳಿಗೆ ಇಲ್ಲಿನ ದಾರುಣ ಘಟನೆಗಳು ಬೆಳಕಿಗೆ ಬಂದಿದ್ದು, 150 ಮಾನಸಿಕ ಅಸ್ವಸ್ಥರನ್ನು ರಕ್ಷಿಸಿ, ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ಈ ದಾಳಿ ನಡೆಯುತ್ತಿದ್ದಂತೆ ಈ ಆಶ್ರಮದ ಅನೇಕ ರಹಸ್ಯಗಳು ಹೊರಗೆ ಬರಲಾರಂಭಿಸಿದೆ. ಈ ಆಶ್ರಮದಲ್ಲಿದ್ದ 16 ಮಂದಿ ಕಣ್ಮರೆಯಾಗಿದ್ದು, ಇವರೆಲ್ಲಾ ಎಲ್ಲಿದ್ದಾರೆ ಎಂಬುದು ಇದುವರೆಗೂ ಪತ್ತೆಯಾಗಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಇಲ್ಲಿನ ಸಿಬ್ಬಂದಿ ಮತ್ತು ಮಾನಸಿಕ ಅಸ್ವಸ್ಥರು ಅಶುಚಿತ್ವದ ವಾತಾವರಣದಲ್ಲಿ ಕಾಲ ಕಳೆಯುತ್ತಿರುವುದು ಬೆಳಕಿಗೆ ಬಂದಿದೆ. ಇದರ ಜೊತೆಗೆ ಸಾಮಾಜಿಕ ಕಾರ್ಯಕತ್ರ ರಾಜಮ್ಮಲ್​ ಕೂಡ ಈ ಆಶ್ರಮದಲ್ಲಿ ಅನೇಕ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವ ಸಂಬಂಧ ದೂರು ಸಲ್ಲಿಸಿದ್ದು, ಈ ದೂರಿನ ಅನುಸಾರ ಕೂಡ ತನಿಖೆ ನಡೆಸಲಾಗಿದೆ.

ಆಶ್ರಮದ ಮೇಲೆ ದಾಳಿ ನಡೆಸುತ್ತಿದ್ದ ಸುದ್ದಿ ತಮಿಳುನಾಡಿನಾದ್ಯಂತ ಹಬ್ಬುತ್ತಿದ್ದಂತೆ, ಜಿಲ್ಲಾ ಅಧಿಕಾರಿಗಳು ಕೂಡ ಅದರ ಗಂಭೀರತೆ ಅರಿತು, ಅಲ್ಲಿನ ಆಶ್ರಮಕ್ಕೆ ಭೇಟಿ ನೀಡಿದ್ದು, ಅಲ್ಲಿದ್ದ ಜನರನ್ನು ರಕ್ಷಿಸಿ, ವಿಲ್ಲುಪುರಂ ಗವರ್ನಮೆಂಟ್​ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ಸೇರಿಸಿದ್ದಾರೆ. ಆಶ್ರಮದಲ್ಲಿ ಮಾನಸಿಕ ಅಸ್ವಸ್ಥರಿಗೆ ಸರಿಯಾದ ಮಾನಸಿಕ ಚಿಕಿತ್ಸೆ ನೀಡಿರಲಿಲ್ಲ ಎಂಬ ಮಾಹಿತಿ ಈ ವೇಳೆ ಬಹಿರಂಗಗೊಂಡಿದೆ. ತನಿಖೆಯ ಆಳಕ್ಕೆ ಪೊಲೀಸರಿಗೆ ಹೋದಾಗ ಅಲ್ಲಿದ್ದ ಸಂತ್ರಸ್ತರ ಮೇಲಿನ ಗಾಯಗಳು ಕಂಡು ಬಂದಿವೆ ಎಂದು ಹೇಳಲಾಗಿದೆ. ಅಲ್ಲದೇ, ಅಲ್ಲಿದ್ದ ಮಾನಸಿಕ ಅಸ್ವಸ್ಥ ಮಹಿಳೆಯರಿಗೆ ಡ್ರಗ್ಸ್​ ನೀಡಿ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ತಿಳಿದು ಬಂದಿದೆ.

ಇನ್ನು ಈ ಆಶ್ರಮ ನಡೆಸುತ್ತಿದ್ದ ಜುಬಿನ್​ ಬೇಬಿ, ಮಾನಸಿಕ ಅಸ್ವಸ್ಥರು ಮತ್ತು ಅಸಹಯಕರನ್ನು ಬೆದರಿಸಲು ಎರಡು ಮಂಗಗಳನ್ನು ಸಾಕಿದ್ದರು. ಈ ಮಂಗಗಳನ್ನು ಬಿಟ್ಟಿ ಕಚ್ಚಿಸುತ್ತಿದ್ದ ಪರಿಣಾಮ ಸಂತ್ರಸ್ತರ ಮೈ ಮೇಲೆ ಕಚ್ಚಿದ ಗಾಯದ ಗುರುತುಗಳು ಪತ್ತೆಯಾಗಿವೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಈ ಘಟನೆ ಸಂಬಂಧ ಪೊಲೀಸರು 13 ಸೆಕ್ಷನ್​ ಅಡಿ ಆಶ್ರಮದ ಆಡಳಿತಗಾರ ಮತ್ತು ಕಾರ್ಯ ನಿರ್ವಹಿಸುತ್ತಿದ್ದ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ ನಾಲ್ವರನ್ನು ನಿನ್ನೆಯೇ ಬಂಧಿಸಲಾಗಿದೆ. ಆಶ್ರಮ ನಡೆಸುತ್ತಿದ್ದ ಜುಬಿನ್​ ಬೇಬಿ ಕೂಡ ಮಂಗಗಳ ಕಡಿತಕ್ಕೆ ಒಳಗಾಗಿದ್ದು, ಆತನನ್ನು ಮುಂದ್ಯಂಬಕ್ಕಂ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜುಬಿನ್​ ಹೆಂಡತಿ ಮರಿಯಾ ಜುಬಿನ್​ ಕೂಡ ಅನಾರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಅವರನ್ನು ಆಸ್ಪತ್ರೆಯ ಆವರಣದಲ್ಲಿ ಬಂಧಿಸಲಾಗಿದೆ. ಈ ಆಶ್ರಮದ ಮತ್ತೊಂದು ಬ್ರಾಂಚ್​ನಲ್ಲಿ 13 ಮಹಿಳೆಯರು ಸೇರಿದಂತೆ 25 ಮಂದಿಯನ್ನು ರಕ್ಷಿಸಲಾಗಿದೆ. ಅವರನ್ನೆಲ್ಲಾ ವಿಲ್ಲಪುರಂ ಸರ್ಕಾರಿ ವೈದ್ಯಕೀಯ ಕಾಲೇಜ್​ ಆಸ್ಪತ್ರೆಯ ಮನೋವೈದ್ಯಕೀಯ ಘಟಕದಲ್ಲಿ ದಾಖಲಿಸಲಾಗಿದೆ.

ಇದನ್ನೂ ಓದಿ: ಆತ್ಮಹತ್ಯೆ ದಾರಿ ಕುರಿತು ಇಂಟರ್​ನೆಟ್​ನಲ್ಲಿ ಮಾಹಿತಿ ಹುಡುಕಾಟ: ಪೊಲೀಸರಿಂದ ಉಳಿಯಿತು ಯುವಕನ ಪ್ರಾಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.