ETV Bharat / bharat

ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಎಚ್ಚರ: ಹಾರರ್​ ವಿಡಿಯೋದಿಂದ ಪ್ರಭಾವಿತನಾಗಿ ಬಾಲಕ ಏನಾದ ನೋಡಿ! - ಪುಣೆಯ ಪಿಂಪ್ರಿ ಚಿಂಚ್‌ವಾಡ್‌ ಪ್ರದೇಶ

ಆಟವಾಡುವಾಗ ಬಾಲಕ ಗೊಂಬೆಗೆ ಬಟ್ಟೆಯಿಂದ ಕುತ್ತಿಗೆ ಬಿಗಿದಿದ್ದಾನೆ. ಇದರಿಂದ ಆ ಗೊಂಬೆ ಸತ್ತಿದೆ ಎಂದು ತಿಳಿದು, ನಂತರ ತನ್ನ ಬಾಯಿಯಲ್ಲಿ ಬಟ್ಟೆ ತುರುಕಿಕೊಂಡು ಹಾಗೂ ಮುಖಕ್ಕೆ ಸುತ್ತಿಕೊಂಡಿದ್ದಾನೆ. ಪರಿಣಾಮ ಅಲ್ಲಿಯೇ ಉಸಿರುಗಟ್ಟಿ ಬಾಲಕ ಮೃತಪಟ್ಟಿದ್ದಾನೆ ಎಂದು ಹೇಳಲಾಗ್ತಿದೆ.

A boy Influenced by horror video and hangs herself
ಮೊಬೈಲ್​ನಲ್ಲಿ ಹಾರರ್​ ವಿಡಿಯೋ ನೋಡಿ ಪ್ರಭಾವಿತನಾದ ಬಾಲಕ ಆತ್ಮಹತ್ಯೆ
author img

By

Published : Jun 1, 2022, 6:01 PM IST

ಪುಣೆ (ಮಹಾರಾಷ್ಟ್ರ): ಮಹಾರಾಷ್ಟ್ರದ ಪುಣೆಯಲ್ಲಿ ಆತಂಕದ ಮತ್ತು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮೊಬೈಲ್​ನಲ್ಲಿ ಹಾರರ್ ವಿಡಿಯೋಗಳನ್ನು ನೋಡಿ ಅದರಿಂದಲೇ ಪ್ರಭಾವಿತನಾದ ಎಂಟು ವರ್ಷದ ಬಾಲಕನೋರ್ವ ಗೊಂಬೆಗೆ ನೇಣು ಬಿಗಿದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುಣೆಯ ಪಿಂಪ್ರಿ-ಚಿಂಚ್‌ವಾಡ್‌ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ಈ ಬೆಚ್ಚಿಬೀಳಿಸುವ ಘಟನೆ ನಡೆದಿದೆ.

ಮನೆಯಲ್ಲಿ ತಾಯಿ ತನ್ನ ಕೆಲಸದಲ್ಲಿ ತೊಡಗಿದ್ದಾಗ ಈ ಬಾಲಕ ಆಟವಾಡುವಾಗ ಮೊದಲು ತನ್ನ ಬಳಿಯಿದ್ದ ಗೊಂಬೆಗೆ ಬಟ್ಟೆಯಿಂದ ಕುತ್ತಿಗೆ ಬಿಗಿದಿದ್ದಾನೆ. ಇದರಿಂದ ಆ ಗೊಂಬೆ ಸತ್ತಿದೆ ಎಂದು ತಿಳಿದು, ನಂತರ ಅದೇ ಬಟ್ಟೆಯನ್ನು ತನ್ನ ಬಾಯಿಯಲ್ಲಿ ತುರುಕಿಕೊಂಡು ಹಾಗೂ ಮುಖಕ್ಕೆ ಸುತ್ತಿಕೊಂಡಿದ್ದಾನೆ. ಪರಿಣಾಮ ಅಲ್ಲಿಯೇ ಉಸಿರುಗಟ್ಟಿ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗ್ತಿದೆ.

ಈ ಘಟನೆಯಿಂದ ಪೊಲೀಸರೇ ಶಾಕ್​ ಆಗಿದ್ದಾರೆ. ಮೊಬೈಲ್​ನಲ್ಲಿ ಹಾರರ್​ ವಿಡಿಯೋಗಳನ್ನು ಬಾಲಕ ನೋಡುತ್ತಿದ್ದ. ಅದರಿಂದಲೇ ಪ್ರಭಾವಿತನಾಗಿ ಆತ ಹೀಗೆ ಮಾಡಿದ್ದಾನೆ ಎಂದು ವಾಕಾಡ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸತ್ಯವಾನ್ ಮಾನೆ ತಿಳಿಸಿದ್ದಾರೆ. ಅಲ್ಲದೇ, ಮಕ್ಕಳ ಮೇಲೆ ಪೋಷಕರು ನಿಗಾ ಇಡುತ್ತಲೇ ಇರಬೇಕೆಂದೂ ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: 14ರ ಬಾಲೆ ಮೇಲೆ ಮಾಂತ್ರಿಕನಿಂದ ಅತ್ಯಾಚಾರ: ನೀಚ ಕೃತ್ಯಕ್ಕೆ ತಾಯಿಯಿಂದಲೇ ಸಹಕಾರ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.