ಜಮ್ಮು ಮತ್ತು ಕಾಶ್ಮೀರ: ಭಾರತದ ಗಡಿ ಪ್ರದೇಶದಲ್ಲಿ ಅದೆಷ್ಟೇ ಎಚ್ಚರಿಕೆವಹಿಸಿದರೂ ನುಸುಳುಕೋರರು ವಿಫಲ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಇಂದು ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಗ್‌ಧಾರ್ ಸೆಕ್ಟರ್ ಗಡಿಯಲ್ಲಿ ಭಾರತದೊಳಗೆ ನುಸುಳಲು ಯತ್ನಿಸಿದ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ. ಈ ಕುರಿತು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಗಡಿ ಭದ್ರತಾ ಪಡೆ ಮತ್ತು ಪೊಲೀಸರು ಜಂಟಿಯಾಗಿ ತಂಗ್‌ಧರ್‌ನ ಅಮ್ರೋಹಿ ಪ್ರದೇಶದಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದರು. ಈ ವೇಳೆ ಒಳನುಸುಳಲು ಯತ್ನಿಸಿದ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದ ಸುತ್ತ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
-
Army & Kupwara police in a joint #operation foiled an #infilitration bid by neutralising a #terrorist on #LoC in Amrohi area of #Tangdhar Sector. Incriminating materials, arms & ammunition recovered. Search operation in progress. Further details shall follow.@JmuKmrPolice
— Kashmir Zone Police (@KashmirPolice) August 6, 2023 " class="align-text-top noRightClick twitterSection" data="
">Army & Kupwara police in a joint #operation foiled an #infilitration bid by neutralising a #terrorist on #LoC in Amrohi area of #Tangdhar Sector. Incriminating materials, arms & ammunition recovered. Search operation in progress. Further details shall follow.@JmuKmrPolice
— Kashmir Zone Police (@KashmirPolice) August 6, 2023Army & Kupwara police in a joint #operation foiled an #infilitration bid by neutralising a #terrorist on #LoC in Amrohi area of #Tangdhar Sector. Incriminating materials, arms & ammunition recovered. Search operation in progress. Further details shall follow.@JmuKmrPolice
— Kashmir Zone Police (@KashmirPolice) August 6, 2023
ಪೂಂಚ್, ರಾಜೌರಿ ಜಿಲ್ಲೆಯಲ್ಲಿ ಮುಂದುವರೆದ ಕಾರ್ಯಾಚರಣೆ: ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಬರಿಯಾಮಾ ಪ್ರದೇಶದಲ್ಲಿ ಇಂದು ಬೆಳಗ್ಗೆ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆಯಿತು. ಗುಂಡಿನ ದಾಳಿಯಲ್ಲಿ ಓರ್ವ ಭಯೋತ್ಪಾದಕನನ್ನು ಕೊಲ್ಲಲಾಗಿದೆ. ಇನ್ನೊಬ್ಬ ಉಗ್ರನಿಗಾಗಿ ಶೋಧ ನಡೆಯುತ್ತಿದೆ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಎಡಿಜಿಪಿ ಮುಖೇಶ್ ಸಿಂಗ್ ಹೇಳಿದರು.
ರಾಜೌರಿ ಜಿಲ್ಲೆಯಲ್ಲಿ ಸಕ್ರಿಯರಾಗಿದ್ದ ಉಗ್ರರನ್ನು ಪೊಲೀಸರು ಸುತ್ತುವರೆದಾಗ ಆತ ಗುಂಡು ಹಾರಿಸಲು ಪ್ರಾರಂಭಿಸಿದ್ದಾನೆ. ಈ ವೇಳೆ ಸೇನೆ ಮತ್ತು ಅರೆಸೇನಾ ಪಡೆಗಳು ಒಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇದೇ ಪ್ರದೇಶದಲ್ಲಿ 2-3 ಭಯೋತ್ಪಾದಕ ಗುಂಪುಗಳು ಇನ್ನೂ ಸಕ್ರಿಯವಾಗಿದ್ದು, ಅವರನ್ನು ಸೆದೆಬಡಿಯಲು ಭದ್ರತಾ ಪಡೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಜಮ್ಮು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೀಡಾಗಿರುವವ ಪಾಕಿಸ್ತಾನಿ ಭಯೋತ್ಪಾದಕ ಎಂದು ತಿಳಿದುಬಂದಿದೆ. ಒಂದು ಎಕೆ-47 ರೈಫಲ್, ಐದು ಮ್ಯಾಗಜೀನ್‌ಗಳು, ನಾಲ್ಕು ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಆತನ ಪಾಕಿಸ್ತಾನಿ ಗುರುತುಗಳಿರುವ ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ ಎಂದು ಮುಖೇಶ್ ಸಿಂಗ್ ಹೇಳಿದರು. ಸ್ಥಳೀಯ ಜನರ ಸಹಕಾರದೊಂದಿಗೆ ಈ ಪ್ರದೇಶದಲ್ಲಿ ಶಾಂತಿ ಕಾಪಾಡಲಾಗುತ್ತಿದೆ ಎಂದು ಸೇನೆ ಹೇಳಿದೆ.
ಇದನ್ನೂ ಓದಿ: Army encounter: ರಜೌರಿಯಲ್ಲಿ 2ನೇ ದಿನಕ್ಕೆ ಕಾಲಿಟ್ಟ ಗುಂಡಿನ ಚಕಮಕಿ: ಓರ್ವ ಭಯೋತ್ಪಾದಕ ಹತ