ETV Bharat / bharat

ಅಪ್ರಾಪ್ತೆಗೆ ಜನಿಸಿದ ಮಗುವನ್ನ ಅತ್ಯಾಚಾರ ಆರೋಪಿಗೆ ನೀಡಿದ ದೆಹಲಿ ಹೈಕೋರ್ಟ್​​ - ನವಜಾತ ಗಂಡು ಶಿಶು

ಅಪ್ರಾಪ್ತೆಗೆ ಜನಿಸಿದ ನವಜಾತ ಶಿಶು(infant born)ವಿನ ಜವಾಬ್ದಾರಿ ಅತ್ಯಾಚಾರವೆಸಗಿರುವ ವ್ಯಕ್ತಿ ತೆಗೆದುಕೊಳ್ಳಬೇಕು ಎಂದು ದೆಹಲಿ ಹೈಕೋರ್ಟ್​ ಆದೇಶ ಹೊರಡಿಸಿದೆ. ಬಾಲಕಿ ಅಪ್ರಾಪ್ತೆಯಾಗಿರುವ ಕಾರಣ ಶೆಲ್ಟರ್​ ಹೋಂನಲ್ಲಿ ವಾಸ ಮಾಡುವಂತೆ ಸೂಚನೆ ನೀಡಿದೆ..

Delhi High Court
Delhi High Court
author img

By

Published : Nov 15, 2021, 8:45 PM IST

Updated : Nov 15, 2021, 8:50 PM IST

ನವದೆಹಲಿ : ಅಪ್ರಾಪ್ತ ಬಾಲಕಿ ಜೊತೆಗಿನ ಸಂಬಂಧದಿಂದಾಗಿ ಜನಿಸಿದ ನವಜಾತ ಗಂಡು ಶಿಶುವನ್ನ ಇದೀಗ ಅತ್ಯಾಚಾರ ಆರೋಪಿಗೆ ನೀಡಿ ದೆಹಲಿ ಹೈಕೋರ್ಟ್(Delhi High Court)​ ಆದೇಶ ಹೊರಡಿಸಿದೆ. ಈ ವೇಳೆ ಮಗುವಿನ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಕೋರ್ಟ್​ಗೆ ಆರೋಪಿ ಹಾಗೂ ಪೋಷಕರು ಭರವಸೆ ನೀಡಿದ್ದಾರೆ.

9ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ ಬಾಲಕಿ ಕಳೆದ ಮಾರ್ಚ್​ ತಿಂಗಳಲ್ಲಿ ಶಾಲೆಗೆ ತೆರಳಿದ್ದಾಗ ಅಪಹರಣ ಮಾಡಲಾಗಿತ್ತು. ಈ ವೇಳೆ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಎಫ್​​ಐಆರ್(FIR)​ ದಾಖಲು ಮಾಡಿಕೊಳ್ಳಲಾಗಿತ್ತು.

ಏಪ್ರಿಲ್​​ 15ರಂದು ಬಾಲಕಿಯನ್ನ ಪತ್ತೆ ಮಾಡಲಾಗಿತ್ತು. ಈ ವೇಳೆ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆಕೆ ಐದು ತಿಂಗಳ ಗರ್ಭಿಣಿ ಎಂಬುದು ಗೊತ್ತಾಗಿತ್ತು. ಇದರ ಬಗ್ಗೆ ವಿಚಾರಣೆ ನಡೆಸಿದಾಗ ತಾನು ವ್ಯಕ್ತಿಯೋರ್ವನೊಂದಿಗೆ ಸಮ್ಮತದ ಸಂಬಂಧ ಇಟ್ಟುಕೊಂಡಿದ್ದು, ಆತನೊಂದಿಗೆ ಮದುವೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಳು. ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಚಾರ್ಜ್​ಶೀಟ್ ಸಿದ್ಧಪಡಿಸಿ ಕೋರ್ಟ್​ಗೆ ಸಲ್ಲಿಕೆ ಮಾಡಿದ್ದರು.

ಬಾಲಕಿಗೆ ಹೆರಿಗೆ ಆಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ವಿಚಾರಣೆ ಕೈಗೆತ್ತಿಕೊಂಡ ದೆಹಲಿ ಹೈಕೋರ್ಟ್​, ಬಾಲಕಿ ಅಪ್ರಾಪ್ತಳಾಗಿರುವ ಕಾರಣ ಮಗುವಿನ ಜವಾಬ್ದಾರಿ ಹೊರಲು ಸಾಧ್ಯವಿಲ್ಲ. ಹೀಗಾಗಿ, ಅದರ ರಕ್ಷಣೆಯನ್ನ ಅತ್ಯಾಚಾರವೆಸಗಿರುವ ಆರೋಪಿ ತೆಗೆದುಕೊಳ್ಳಬೇಕು ಎಂದಿದೆ. ಇದೇ ವೇಳೆ ಬಾಲಕಿ ವಯಸ್ಕಳಾಗುವವರೆಗೂ ಶೆಲ್ಟರ್​ ಹೋಂನಲ್ಲಿ ಇರುವಂತೆ ನ್ಯಾಯಮೂರ್ತಿ ಮುಕ್ತಾ ಗುಪ್ತಾ(Justice Mukta Gupta) ತಿಳಿಸಿದ್ದಾರೆ.

Last Updated : Nov 15, 2021, 8:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.