ಜೈಪುರ : ಖ್ಯಾತ ಕೈಗಾರಿಕೋದ್ಯಮಿ ಲಕ್ಷ್ಮಿ ನಿವಾಸ್ ಮಿತ್ತಲ್ ರಾಜಸ್ಥಾನದಲ್ಲಿ 4,500 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಪಾರ್ಕ್ ಸ್ಥಾಪಿಸಲು ಇಚ್ಚಿಸಿದ್ದಾರೆ. ಸೌರಶಕ್ತಿಯ ಹೂಡಿಕೆಗೆ ಸಂಬಂಧಿಸಿದಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಮಿತ್ತಲ್ ಭೇಟಿಯಾಗಿದ್ದಾರೆ.
ಈ ವೇಳೆ ನವೀಕರಿಸಬಹುದಾದ ಇಂಧನದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ನಿಗಮದ ಸಿಎಂಡಿ, ಸುಬೋಧ್ ಕುಮಾರ್ ಗುಪ್ತಾ, ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಅಶುತೋಷ್ ಪೆಡ್ನೇಕರ್ ಮತ್ತು ವಿಶೇಷ ಕಾರ್ಯದರ್ಶಿ ಅಮಿತ್ ಢಾಕಾ ಉಪಸ್ಥಿತರಿದ್ದರು.
ಮುಖ್ಯಮಂತ್ರಿಯವರ ನಿವಾಸದಲ್ಲಿ ನಡೆದ ಸಭೆಯಲ್ಲಿ, ಕೈಗಾರಿಕೋದ್ಯಮಿ ಲಕ್ಷ್ಮಿ ನಿವಾಸ್ ಮಿತ್ತಲ್ , ತಮ್ಮ ಕಂಪನಿಯಾದ ಹೆಚ್‌ಎಂಇಎಲ್ (ಹೆಚ್‌ಪಿಸಿಎಲ್-ಮಿತ್ತಲ್ ಎನರ್ಜಿ ಲಿಮಿಟೆಡ್) ಮೂಲಕ ರಾಜಸ್ಥಾನದಲ್ಲಿ ಸೋಲಾರ್ ಪಾರ್ಕ್ ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದರು.
ಇದೇ ವೇಳೆ ರಾಜಸ್ಥಾನದಲ್ಲಿ ಸೌರಶಕ್ತಿ ಕ್ಷೇತ್ರದಲ್ಲಿ ಹೂಡಿಕೆಯ ಅಪಾರ ಸಾಧ್ಯತೆಗಳ ನಡುವೆ ಸರ್ಕಾರದ ನೀತಿಗಳು ಹೂಡಿಕೆಯನ್ನು ಉತ್ತೇಜಿಸಲು ಹೊರಟಿವೆ ಎಂದು ರಾಜ್ಯ ಸರ್ಕಾರವು ಲಕ್ಷ್ಮಿ ನಿವಾಸ್ ಮಿತ್ತಲ್‌ಗೆ ಭರವಸೆ ನೀಡಿತು.