ETV Bharat / bharat

Menu in braille: ಅಂಧರಿಗಾಗಿ ಬ್ರೈಲ್‌ ಮೆನು ಪರಿಚಯಿಸಿದ ರೆಸ್ಟೋರೆಂಟ್.. ಸ್ವಾವಲಂಬನೆ ಮತ್ತು ಸ್ವತಂತ್ರ ಜೀವನಕ್ಕೆ ದಾರಿ - ಈಟಿವಿ ಭಾರತ ಕರ್ನಾಟಕ

ಮಧ್ಯಪ್ರದೇಶದ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯ ಯಂಗ್ ಇಂಡಿಯನ್ಸ್ ಗ್ರೂಪ್ ಬ್ರೈಲ್ ಮೆನು ಎಂಬ​ ಪರಿಕಲ್ಪನೆಯನ್ನು ಪರಿಚಯಿಸಿ ಅಂಧರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಗುರಿಯನ್ನು ಹೊಂದಿದೆ.

indore-restaurant-introduces-menus-in-braille-creating-a-more-inclusive-world-for-the-blind
ಅಂಧರಿಗಾಗಿ ಬ್ರೈಲ್‌ ಮೆನು ಪರಿಚಯಿಸಿದ ರೆಸ್ಟೊರೆಂಟ್: ಎಲ್ಲಿ ಗೊತ್ತಾ?
author img

By ETV Bharat Karnataka Team

Published : Sep 3, 2023, 10:16 PM IST

ಇಂದೋರ್(ಮಧ್ಯಪ್ರದೇಶ): ಇಲ್ಲಿನ ಗುರುಕೃಪಾ ಎಂಬ ರೆಸ್ಟೋರೆಂಟ್ ಅಂಧರಿಗಾಗಿ ಬ್ರೈಲ್ ಮೆನುವನ್ನು ಪರಿಚಯಿಸಿದೆ. ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಯ ಯಂಗ್ ಇಂಡಿಯನ್ಸ್ ಗ್ರೂಪ್​ ಈ ಪರಿಕಲ್ಪನೆಯ ಪರಿಚಯಿಸುವ ಮೂಲಕ ಅಂಧರನ್ನು ಸ್ವಾವಲಂಬಿಗಳನ್ನಾಗಿ ಮತ್ತು ಸ್ವತಂತ್ರರನ್ನಾಗಿ ಮಾಡುವ ಗುರಿಯನ್ನು ಹೊಂದಿದೆ.

ಈ ಬಗ್ಗೆ ಯಂಗ್ ಇಂಡಿಯನ್ಸ್ ಗ್ರೂಪ್​ನ ಅಧ್ಯಕ್ಷೆ ಭಾವನಾ ಗನೆಡಿವಾಲ್ ಮಾತನಾಡಿ, ನಾವು ಮಹೇಶ್ ಅಂಧರ ಸಂಸ್ಥೆಯಿಂದ ವಿಜಯನಗರದ ಗುರುಕೃಪಾ ರೆಸ್ಟೋರೆಂಟ್​ಗೆ 46 ಅಂಧ ಮಕ್ಕಳನ್ನು ಕರೆತಂದಿದ್ದೇವೆ. ಅವರನ್ನು ಇಲ್ಲಿಗೆ ಕರೆತಂದಿರುವ ಮುಖ್ಯ ಉದ್ದೇಶವೆನೆಂದರೆ ಅವರು ಯಾರ ಸಹಾಯವೂ ಇಲ್ಲದೆ ಆತ್ಮವಿಶ್ವಾಸದಿಂದ ಬ್ರೈಲ್ ಮೆನು ಮೂಲಕ ತಮಗೆ ಇಷ್ಟವಾದ ಆಹಾರವನ್ನು ತಾವೇ ಆರ್ಡರ್ ಮಾಡಬಹುದು. ಇದರಿಂದ ಅವರಲ್ಲಿ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ. ನಾವು ಇಂದೋರ್‌ನ ಇತರೆ ರೆಸ್ಟೋರೆಂಟ್‌ಗಳಲ್ಲಿಯೂ ಈ ಪರಿಕಲ್ಪನೆಯನ್ನು ಪರಿಚಯಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಹೇಳಿದರು.

ಅಂಧ ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯಿಸಿ, ಬ್ರೈಲ್ ಮೆನು ಎಂಬ ಪರಿಕಲ್ಪನೆ ಅಂಧರಿಗೆ ಹೆಚ್ಚು ಸಂತೋಷವನ್ನು ತಂದಿದೆ. ಅವರು ಈಗ ತಮ್ಮ ಆಹಾರವನ್ನು ತಾವೇ ಆರ್ಡರ್ ಮಾಡಬಹುದು. ರೆಸ್ಟೋರೆಂಟ್​ನಲ್ಲಿ ಎಲ್ಲರೂ ಪ್ರತ್ಯೇಕ ಆರ್ಡರ್ ನೀಡಿದರು. ಕೆಲವರು ಫಿಂಗರ್ ಚಿಪ್ಸ್ ಆರ್ಡರ್ ಮಾಡಿದರೆ, ಮತ್ತೆ ಕೆಲವರು ನೂಡಲ್ಸ್ ಆರ್ಡರ್ ಮಾಡಿದರು. ನಾವು ಎಂದಿಗೂ ಈ ರೀತಿ ಮೆನು ಕಾರ್ಡ್ ಅಭ್ಯವಾಗುತ್ತದೆ ಮತ್ತು ಅದರಲ್ಲಿ ಏನನ್ನಾದರೂ ಆರ್ಡರ್ ಮಾಡಲು ಸಾಧ್ಯವಾಗುತ್ತದೆ ಎಂದು ಯೋಚಿಸಿರಲಿಲ್ಲ" ಎಂದು ಸಂತಸ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿ ಪ್ರೇರಣಾ ಮಾತನಾಡಿ, ನಾವು ಏನಾದರೂ ತಿನ್ನಲು ಹೊರಗೆ ಹೋದಾಗಲೆಲ್ಲಾ ಆರ್ಡರ್​ ಮಾಡಲು ಇತರರ ಮೇಲೆ ಅವಲಂಬಿತಳಾಗಬೇಕಾಗುತ್ತದೆ. ಈಗ ಬ್ರೈಲ್​ ಮೆನುವಿನಿಂದ ನಾವು ಯಾರ ಮೇಲೂ ಅವಲಂಬಿತರಾಗುವುದಿಲ್ಲ. ಈಗ ನಾವು ಮೆನು ಕಾರ್ಡ್ ಗಳನ್ನು ಓದಬಹುದು ಮತ್ತು ನಾವೇ ಸ್ವಂತವಾಗಿ ಏನನ್ನಾದರೂ ಆರ್ಡರ್ ಮಾಡಬಹುದು ಎಂದು ಸಂತಸ ಹಂಚಿಕೊಂಡರು.

ಯಂಗ್ ಇಂಡಿಯನ್ಸ್ ಗ್ರೂಪ್​ನ ನೈನಾ ನವ್ಲಾನಿ ಮಾತನಾಡಿ, ಈ ಸಂಸ್ಥೆ ಕೇವಲ ಒಂದು ರೆಸ್ಟೋರೆಂಟ್​ನಲ್ಲಿ ಮಾತ್ರವಲ್ಲದೇ ಶೀಘ್ರದಲ್ಲೇ ಇಂದೋರ್​ನ ಇತರೆ ಹೋಟೆಲ್ ಮತ್ತು ರೆಸ್ಟೋರೆಂಟ್​ಗಳಲ್ಲೂ ಬ್ರೈಲ್ ಮೆನು ಕಾರ್ಡ್​ಗಳನ್ನು ಪರಿಚಯಿಸಲು ಉದ್ದೇಶಿಸಿದೆ. ಇದೊಂದು ಸಣ್ಣ ಪರಿಕಲ್ಪನೆ. ನಾವು ಹೋಟೆಲ್​ಗೆ ಹೋಗಿ ನಮಗೆ ಇಷ್ಟವಾದ ಆಹಾರವನ್ನು ಆರ್ಡರ್ ಮಾಡುವುದು ಸುಲಭ. ಆದರೆ ಅಂಧರು ಇಂತಹ ಸಣ್ಣ ವಿಷಯಗಳಿಗೂ ಸಹ ಇನ್ನೊಬ್ಬರ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಹೀಗಾಗಿ ನಮ್ಮ ಕಡೆಯಿಂದ ಅವರಿಗೆ ಇದೊಂದು ಸಣ್ಣ ಸಹಾಯವಾಗಿದೆ. ಇದರಿಂದ ಅವರು ಸ್ವಾವಲಂಬಿಗಳಾಗಬಹುದು ಮತ್ತು ಅವರು ಇಷ್ಟಪಡುವ ಆಹಾರವನ್ನು ಸ್ವತಃ ತಾವೇ ಆರ್ಡರ್ ಮಾಡಬಹುದು. ಇದನ್ನು ಪ್ರತಿ ಹೋಟೆಲ್​ನಲ್ಲಿಯೂ ಪರಿಚಯಿಸಬೇಕು" ಎಂದರು.

ಇದನ್ನೂ ಓದಿ: ಅಂಧರಿಗೆ ಶಾಪಿಂಗ್​ ವೇಳೆ ಕುಳಿತುಕೊಳ್ಳಲು ಜಾಗ ಹುಡುಕುವ, ಗಿರಾಣಿ ವಸ್ತು ಹುಡುಕುವ ಸ್ಮಾರ್ಟ್​ ವಾಕಿಂಗ್​ ಸ್ಟಿಕ್​ ಅಭಿವೃದ್ಧಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.