ETV Bharat / bharat

ಖಾಕಿ ಕೆಲಸಕ್ಕೊಂದು ಸೆಲ್ಯೂಟ್​​... ವೃದ್ಧೆಯ ಪ್ರಾಣ ಉಳಿಸಿದ ಪೊಲೀಸರು​! - ಪ್ರಜ್ಞೆ ತಪ್ಪಿದ್ದ ವೃದ್ಧೆ

ಪ್ರಜ್ಞೆ ತಪ್ಪಿ ಬಿದ್ದಿದ್ದ ವೃದ್ಧೆಯೋರ್ವಳನ್ನ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲು ಮಾಡಿದ ಪೊಲೀಸರು ಆಕೆಯ ಪ್ರಾಣ ಉಳಿಸಿದ್ದಾರೆ.

Indore police saved the life of an elderly woman  Elderly lady indore police  ಮಧ್ಯಪ್ರದೇಶ ಇಂದೋರ್​ ವೃದ್ಧೆಯ ಪ್ರಾಣ ಉಳಿಸಿದ ಪೊಲೀಸ್  ಪ್ರಜ್ಞೆ ತಪ್ಪಿದ್ದ ವೃದ್ಧೆ  madhya pradesh
ವೃದ್ಧೆಯ ಪ್ರಾಣ ಉಳಿಸಿದ ಪೊಲೀಸ್
author img

By

Published : May 25, 2021, 3:28 AM IST

Updated : May 25, 2021, 7:05 AM IST

ಇಂದೋರ್​(ಮಧ್ಯಪ್ರದೇಶ): ಸದಾ ಒಂದಿಲ್ಲೊಂದು ಮಾನವೀಯ ಕಾರ್ಯಗಳಿಂದಾಗಿ ಎಲ್ಲ ಕಡೆಯಿಂದ ಮೆಚ್ಚುಗೆಗೆ ಪಾತ್ರರಾಗುವ ಪೊಲೀಸರು, ಸದ್ಯ ಮತ್ತೊಂದು ಎಲ್ಲರ ಪ್ರೀತಿಗೆ ಪಾತ್ರರಾಗುವ ಕೆಲಸ ಮಾಡಿದ್ದಾರೆ.

ಘಟನೆ ನಡೆದಿರುವುದು ಮಧ್ಯಪ್ರದೇಶದ ಇಂದೋರ್​ನಲ್ಲಿ. ಅಪಾರ್ಟ್​​ಮೆಂಟ್​​ವೊಂದರ ನಾಲ್ಕನೇ ಮಹಡಿಯಲ್ಲಿ ವಾಸವಾಗಿದ್ದ ವೃದ್ಧೆಯೋರ್ವಳ ಪ್ರಾಣ ಉಳಿಸಿದ್ದಾರೆ. ಫ್ಲಾಟ್​ನಲ್ಲಿ ಏಕಾಂಗಿಯಾಗಿ ವಾಸವಾಗಿರುವ ವೃದ್ಧೆಯ ಪತಿ ಮತ್ತು ಮಕ್ಕಳು ಆಸ್ಟ್ರೇಲಿಯಾದಲ್ಲಿದ್ದಾರೆ. ಸದ್ಯ ಲಾಕ್​ಡೌನ್​ ಆಗಿರುವ ಕಾರಣ ವೃದ್ಧೆ ಆಸ್ಟ್ರೇಲಿಯಾಗೆ ತೆರಳಲು ಸಾಧ್ಯವಾಗದೇ ಇಲ್ಲೇ ಉಳಿದುಕೊಂಡಿದ್ದರು.

ವೃದ್ಧೆಯ ಪ್ರಾಣ ಉಳಿಸಿದ ಪೊಲೀಸ್

ಹಲವು ದಿನಗಳಿಂದ ಏಕಾಂಗಿಯಾಗಿ ವಾಸ ಮಾಡ್ತಿದ್ದರು. ಕೆಲ ದಿನಗಳಿಂದ ವೃದ್ಧೆ ವಾಸವಾಗಿದ್ದ ಮನೆಯ ಗೇಟ್​ ಓಪನ್​ ಆಗಿರಲಿಲ್ಲ. ಹೀಗಾಗಿ ನೆರೆಹೊರೆಯವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪಲಾಸಿಯಾ ಪೊಲೀಸರು ಸ್ಥಳಕ್ಕಾಗಮಿಸಿ ಮನೆ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಈ ವೇಳೆ ವೃದ್ಧೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಹಳ್ಳಿಗಳೇ ಇದೀಗ ಕೊರೊನಾ ಹಾಟ್​​ಸ್ಪಾಟ್​... ಒಂದೇ ಊರಲ್ಲಿ 10 ದಿನದಲ್ಲಿ 11 ಸಾವು

ತಕ್ಷಣವೇ ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ವೇಳೆ ಸೂಕ್ತ ಚಿಕಿತ್ಸೆ ನೀಡಿರುವ ಕಾರಣ ಚೇತರಿಸಿಕೊಂಡಿದ್ದಾರೆ. ಇದೀಗ ಇಂದೋರ್​ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇದರ ಜತೆಗೆ ಎಸ್ಪಿ ಬಹುಮಾನ ಸಹ ಘೋಷಣೆ ಮಾಡಿದ್ದಾರೆ.

ವೃದ್ಧೆಗೆ ಈಗಾಗಲೇ ಕ್ಯಾನ್ಸರ್​ ಶಸ್ತ್ರಚಿಕಿತ್ಸೆ ಆಗಿದ್ದು, ದೇಹದಲ್ಲಿ ಸೋಡಿಯಂ ಮಟ್ಟ ಕುಸಿತಗೊಳ್ಳುತ್ತಿದ್ದಂತೆ ಪ್ರಜ್ಞೆ ತಪ್ಪುತ್ತಾಳೆಂದು ತಿಳಿದು ಬಂದಿದೆ. ವೃದ್ಧೆಗೆ ಇಬ್ಬರು ಗಂಡು ಮಕ್ಕಳು ಹಾಗೂ ಗಂಡನಿದ್ದು, ಅವರು ಆಸ್ಟ್ರೇಲಿಯಾದಲ್ಲಿ ವಾಸ ಮಾಡುತ್ತಿದ್ದಾರೆ. ಮಹಿಳೆ ಮೇಲಿಂದ ಮೇಲೆ ಆಸ್ಟ್ರೇಲಿಯಾ-ಇಂದೋರ್​ಗೆ ಭೇಟಿ ನೀಡುತ್ತಾರೆ. ಘಟನೆ ನಡೆದ ಬಳಿಕ ಪಲಾಸಿಯಾ ಪೊಲೀಸರು ವೃದ್ಧೆ ಮೇಲೆ ನಿಗಾ ಇಟ್ಟಿದ್ದಾರೆ.

Last Updated : May 25, 2021, 7:05 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.