ETV Bharat / bharat

ಕೇವಲ 69.50 ಚದರ ಅಡಿ ವಿಸ್ತೀರ್ಣದ ಮಳಿಗೆ; 1.72 ಕೋಟಿ ರೂಗೆ ಬಿಡ್.. 30 ವರ್ಷ ಗುತ್ತಿಗೆ

ಇಂದೋರ್ ಅಭಿವೃದ್ಧಿ ಪ್ರಾಧಿಕಾರದ (ಐಡಿಎ) ಮೇಲ್ವಿಚಾರಣೆಯಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮಳಿಗೆ ಭೋಗ್ಯಕ್ಕೆ ತೆಗೆದುಕೊಳ್ಳಲು, ದೇವಾಲಯದ ಅಧಿಕಾರಿಗಳು ಕನಿಷ್ಠ ಮೂಲ ಬೆಲೆಯನ್ನು 30 ಲಕ್ಷ ರೂ. ಗೆ ನಿಗದಿ ಪಡಿಸಿದ್ದರು. ಆದರೆ ಮಳಿಗೆ ಮೂಲ ದರಕ್ಕಿಂತ ಆರು ಪಟ್ಟು ಹೆಚ್ಚು ಬಿಡ್​ಗೆ ಹರಾಜಾಗಿದೆ ಎಂದು ಅಧಿಕಾರಿ ಹೇಳಿದರು.

indore flower shop of khajrana temple complex
30 ವರ್ಷ ಗುತ್ತಿಗೆಗೆ 1.72 ಕೋಟಿ ರೂ ಬಿಡ್ ಪಡೆದ 69.50 ಚದರ ಅಡಿ ವಿಸ್ತೀರ್ಣದ ಮಳಿಗೆ
author img

By

Published : Oct 27, 2022, 10:31 AM IST

ಇಂದೋರ್(ಮಧ್ಯಪ್ರದೇಶ): ಇಂದೋರ್ ನಗರದ ಪ್ರಸಿದ್ಧ ಖಜರಾನಾ ಗಣೇಶ ದೇವಸ್ಥಾನ ಸಂಕೀರ್ಣದಲ್ಲಿರುವ ಕೇವಲ 69.50 ಚದರ ಅಡಿ ವಿಸ್ತೀರ್ಣದ ಪೂಜಾ ಸಾಮಗ್ರಿ ಮಾರಾಟ ಮಳಿಗೆಯು 1.72 ಕೋಟಿ ರೂ.ಗಳ ಬೃಹತ್ ಬಿಡ್​ಗೆ ಹರಾಜಾಗಿದೆ. 30 ವರ್ಷಗಳ ಗುತ್ತಿಗೆಗೆ ಈ ಮಳಿಗೆಗೆ ಬಿಡ್​ ಕರೆಯಲಾಗಿತ್ತು. ಇದರ ಮೂಲ ಬೆಲೆ ರೂ. 30 ಲಕ್ಷ ನಿಗದಿ ಮಾಡಲಾಗಿತ್ತು.

ಆದರೆ ಮಳಿಗೆ 1.72 ಕೋಟಿ ರೂಗಳ ಮೂಲ ದರಕ್ಕೆ ಹರಾಜಾಗಿದೆ. ಈ ಮೂಲಕ ದೇಶದಲ್ಲಿ ವಾಣಿಜ್ಯ ಆಸ್ತಿಗೆ ಸಲ್ಲಿಕೆಯಾದ ಅತ್ಯಧಿಕ ದರದ ಬಿಡ್​ಗಳಲ್ಲಿ ಇದೂ ಒಂದಾಗಿದೆ ಎಂದು ದೇಗುಲದ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ವಾಣಿಜ್ಯ ಮಳಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸ್ಥಳೀಯ ನಿವಾಸಿಯೊಬ್ಬರು 1.72 ಕೋಟಿ ರೂ.ಗಳನ್ನು ಪಾವತಿಸಲು ಮುಂದಾಗಿದ್ದು, '1-ಎ' ಮಳಿಗೆಯನ್ನು 30 ವರ್ಷಗಳ ಅವಧಿಗೆ ಭೋಗ್ಯಕ್ಕೆ ತೆಗೆದುಕೊಂಡಿದ್ದಾರೆ. ಇದರ ವಾಸ್ತವಿಕ ವಿಸ್ತೀರ್ಣ 69.50 ಚದರ ಅಡಿ ಅಂದರೆ ಪ್ರತಿ ಚದರ ಅಡಿಗೆ 2.47 ಲಕ್ಷ ರೂ. ಎಂದು ಅವರು ಮಾಹಿತಿ ನೀಡಿದ್ದಾರೆ.

ಗುತ್ತಿಗೆ ಷರತ್ತುಗಳ ಪ್ರಕಾರ, ಅಂಗಡಿಯನ್ನು ಹೂವುಗಳು, ಪ್ರಸಾದ (ಭಕ್ತಿಯ ಅರ್ಪಣೆ) ಮತ್ತು ಇತರ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡಲು ಮಾತ್ರ ಬಳಸಬಹುದು. ಇಂದೋರ್ ಅಭಿವೃದ್ಧಿ ಪ್ರಾಧಿಕಾರದ (ಐಡಿಎ) ಮೇಲ್ವಿಚಾರಣೆಯಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮಳಿಗೆಯನ್ನು ಭೋಗ್ಯಕ್ಕೆ ತೆಗೆದುಕೊಳ್ಳಲು, ದೇವಾಲಯದ ಅಧಿಕಾರಿಗಳು ಕನಿಷ್ಠ ಮೂಲ ಬೆಲೆಯನ್ನು 30 ಲಕ್ಷ ರೂ.ಗೆ ನಿಗದಿಪಡಿಸಿದ್ದಾರೆ. ಅಂಗಡಿಯು ಮೂಲ ದರಕ್ಕಿಂತ ಆರು ಪಟ್ಟು ಹೆಚ್ಚು ಬಿಡ್​ಗೆ ಹರಾಜಾಗಿದೆ ಎಂದು ಅಧಿಕಾರಿ ಹೇಳಿದರು.

ಮಧ್ಯಪ್ರದೇಶ ಮತ್ತು ದೇಶದ ಇತರ ಭಾಗಗಳಿಂದ ಪ್ರತಿದಿನ ಹೆಚ್ಚಿನ ಸಂಖ್ಯೆಯ ಭಕ್ತರು ಖಜರಾನಾ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ದೇವಾಲಯದ ಸಮೀಪ ಇರುವ ಹೂವು, ಪ್ರಸಾದ ಮತ್ತು ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ವ್ಯಾಪಾರ ಚೆನ್ನಾಗಿ ನಡೆಯುತ್ತದೆ.

ಇದನ್ನೂ ಓದಿ: ಐಪಿಎಲ್​ 2023: ಡಿಸೆಂಬರ್​​ನಲ್ಲಿ ಮಿನಿ ಹರಾಜು, ಬಿಡ್ ಮಾಡಲು ತಂಡಗಳ ಬಳಿ ಉಳಿದ ಹಣವೆಷ್ಟು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.