ETV Bharat / bharat

IndiGo: ಕೋವಿಡ್ ಲಸಿಕೆ ಪಡೆದ ಪ್ರಯಾಣಿಕರಿಗೆ ಇಂಡಿಗೋ ಸ್ಪೆಷಲ್ ಆಫರ್‌!

ಕೋವಿಡ್ ಲಸಿಕೆಯ ಒಂದು ಅಥವಾ ಎರಡು ಡೋಸ್ ಪಡೆದ ತನ್ನ ಪ್ರಯಾಣಿಕರಿಗೆ ಇಂಡಿಗೋ ವಿಶೇಷ ಆಫರ್​ ಪ್ರಕಟಿಸಿದೆ.

author img

By

Published : Jun 24, 2021, 1:54 PM IST

IndiGo launches special discount on its flights for vaccinated customers
ವಿಶೇಷ ಆಫರ್ ಪ್ರಕಟಿಸಿದ ಇಂಡಿಗೋ

ನವದೆಹಲಿ: ಕೋವಿಡ್ ಲಸಿಕೆ ಪಡೆದುಕೊಳ್ಳುವುದನ್ನು ಉತ್ತೇಜಿಸುವ ಸಲುವಾಗಿ ಲಸಿಕೆ ಪಡೆದ ಪ್ರಯಾಣಿಕರಿಗೆ ಇಂಡಿಗೋ ವಿಮಾನಯಾನ ಸಂಸ್ಥೆ ವಿಶೇಷ ಡಿಸ್ಕೌಂಟ್ ಆಫರ್ ಪ್ರಕಟಿಸಿದೆ. ಇಂಡಿಗೋ ಈ ರೀತಿ ಆಫರ್​ ನೀಡಿದ ಮೊದಲ ವಿಮಾನಯಾನ ಸಂಸ್ಥೆಯಾಗಿದೆ.

ಸಂಸ್ಥೆಯ ಮಾಹಿತಿ ಪ್ರಕಾರ, ಕೋವಿಡ್ ಲಸಿಕೆಯ ಒಂದು ಅಥವಾ ಎರಡೂ ಡೋಸ್​ ಪಡೆದವರು ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುವುದಾದರೆ, ಬುಕ್ಕಿಂಗ್ ವೇಳೆ ಒಟ್ಟು ಟಿಕೆಟ್​ ದರಲ್ಲಿ ಶೇ.10 ರಷ್ಟು ರಿಯಾಯಿತಿ ಸಿಗಲಿದೆ.

'ವ್ಯಾಕ್ಸಿ ಫೇರ್'​ ಎಂಬ ಹೆಸರಿನಲ್ಲಿ ಈ ವಿಶೇಷ ಆಫರ್ ಇಡಲಾಗಿದ್ದು, ಕೋವಿಡ್ ಲಸಿಕೆ ಪಡೆದ 18 ವರ್ಷ ಮೇಲ್ಪಟ್ಟ ಭಾರತೀಯ ಪ್ರಯಾಣಿಕರಿಗೆ ಮಾತ್ರ ಇದರ ಸೌಲಭ್ಯ ಸಿಗಲಿದೆ ಎಂದು ಇಂಡಿಗೋ ತನ್ನ ವೆಬ್​​ಸೈಟ್​​ನಲ್ಲಿ ತಿಳಿಸಿದೆ.

ಡಿಸ್ಕೌಂಟ್ ಆಫರ್ ಪಡೆಯಬೇಕಾದರೆ ಪ್ರಯಾಣಿಕರು ಕೇಂದ್ರ ಆರೋಗ್ಯ ಸಚಿವಾಲಯದಿಂದ ಸಿಗುವ ಲಸಿಕಾ ಪ್ರಮಾಣ ಪತ್ರವನ್ನು ತರಬೇಕು ಅಥವಾ ಆರೋಗ್ಯ ಸೇತು ಆ್ಯಪ್​ನಲ್ಲಿ ಲಸಿಕೆ ಪಡೆದ ಮಾಹಿತಿಯನ್ನು ಏರ್​​ಪೋರ್ಟ್ ಚೆಕ್ಕಿಂಗ್ ಕೌಂಟರ್​ ಬಳಿ ತೋರಿಸಬೇಕು. ಪ್ರಯಾಣಿಕರಿಗೆ ತಮ್ಮ ಟಿಕೆಟ್ ದರದ ಮೇಲೆ ರಿಯಾಯಿತಿ ಸಿಗಲಿದೆ ಎಂದು ಇಂಡಿಗೋ ಹೇಳಿದೆ.

ಇದನ್ನೂ ಓದಿ: 'ಮೋದಿ' ಉಪನಾಮ ಕುರಿತ ವಿವಾದಿತ ಹೇಳಿಕೆ: ಮಾನಹಾನಿ ಪ್ರಕರಣದಲ್ಲಿ ಕೋರ್ಟ್‌ಗೆ ಹಾಜರಾದ ರಾಹುಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.