ETV Bharat / bharat

ಮಹಿಳೆಗೆ ದಿಢೀರ್ ಅನಾರೋಗ್ಯ: ಜೋಧ್‌ಪುರದಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ - ETV Bharath Kannada news

ಮಹಿಳಾ ಪ್ರಯಾಣಿಕರೊಬ್ಬರು ಅಸ್ವಸ್ಥರಾಗಿದ್ದು ಸೌದಿ ಅರೇಬಿಯಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಜೋಧ್‌ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

IndiGo flight makes emergency landing
ಆಗಸದಲ್ಲಿದ್ದಾಗ ಪ್ರಯಾಣಿಕರೊಬ್ಬರಿಗೆ ಆರೋಗ್ಯ ಸಮಸ್ಯೆ
author img

By

Published : Feb 7, 2023, 5:53 PM IST

ಜೋಧ್‌ಪುರ (ರಾಜಸ್ಥಾನ) : ಸೌದಿ ಅರೇಬಿಯಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಯೋ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ದಿಢೀರ್ ಅನಾರೋಗ್ಯ ಉಂಟಾಗಿತ್ತು. ಹಾಗಾಗಿ, ಜೋಧ್‌ಪುರ ವಿಮಾನ ನಿಲ್ದಾಣದಲ್ಲಿ ವಿಮಾನ ಇಂದು ಬೆಳಿಗ್ಗೆ 10:45 ರ ಸುಮಾರಿಗೆ ತುರ್ತು ಭೂಸ್ಪರ್ಶ ಮಾಡಿದೆ. ಬಳಿಕ ಅಸ್ವಸ್ಥಗೊಂಡ ಮಹಿಳೆಯನ್ನು ಗೋಯಲ್ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗದೇ ಆಕೆ ಮೃತಪಟ್ಟಿದ್ದರು.

61 ವರ್ಷದ ಮಿಶ್ರಾ ಬಾನೊ ಮೃತಪಟ್ಟ ಮಹಿಳೆ. ಇವರು ಜಮ್ಮು ಕಾಶ್ಮೀರದ ಹಜಾರಿಬಾಗ್ ನಿವಾಸಿ. ಪೊಲೀಸರ ಪ್ರಕಾರ, ಮೃತ ಮಹಿಳೆಯೊಂದಿಗೆ ಆಕೆಯ ಮಗ ಮುಜಾಫರ್ ಕೂಡ ಪ್ರಯಾಣಿಸುತ್ತಿದ್ದರು. ಇಂಡಿಗೋ ಏರ್​ ಲೈನ್ಸ್​ ನೀಡಿರುವ ಮಾಹಿತಿಯಂತೆ, ಬೆಳಿಗ್ಗೆ 10:45 ರ ಸುಮಾರಿಗೆ ಜೋಧ್‌ಪುರ ಎಟಿಸಿಯಲ್ಲಿ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲು ವಿನಂತಿಸಲಾಗಿತ್ತು. ನಂತರ ಎಟಿಸಿ, ಪಾರ್ಕಿಂಗ್ ಸ್ಥಳದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದೆ. ವಿಮಾನದಲ್ಲಿದ್ದ ವೈದ್ಯರು ಪ್ರಯಾಣಿಕರಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ್ದರು. ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಮೃತರ ಕುಟುಂಬಕ್ಕೆ ಏರ್‌ಲೈನ್ಸ್ ಸಂತಾಪ ಸೂಚಿಸಿದೆ.

ಇದನ್ನೂ ಓದಿ: ಪಕ್ಷಿ ಡಿಕ್ಕಿ: ಏರ್ ಏಷ್ಯಾ ವಿಮಾನ ತುರ್ತು ಭೂಸ್ಪರ್ಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.