ETV Bharat / bharat

ತಾಂತ್ರಿಕ ದೋಷ: ರಾಂಚಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಐಜಿಐಗೆ ವಾಪಸ್​

author img

By

Published : Aug 5, 2023, 12:59 PM IST

ತಾಂತ್ರಿಕ ದೋಷದಿಂದಾಗಿ ರಾಂಚಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ದೆಹಲಿ ವಿಮಾನ ನಿಲ್ದಾಣದಲ್ಲಿ ವಾಪಸ್ ಬಂದಿಳಿದಿದೆ. ಪ್ರಯಾಣಿಕರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Indigo flight
ಇಂಡಿಗೋ ವಿಮಾನ

ನವದೆಹಲಿ: ರಾಂಚಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ತಾಂತ್ರಿಕ ದೋಷದ ಕಾರಣ ಇಂದು ಬೆಳಗ್ಗೆ ಟೇಕ್ ಆಫ್ ಆದ ಒಂದು ಗಂಟೆಯೊಳಗೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣಕ್ಕೆ ಮರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂಡಿಗೋ ವಿಮಾನ ಸಂಖ್ಯೆ 6E-2172ರ ಪೈಲಟ್ ವಿಮಾನದಲ್ಲಿನ ತಾಂತ್ರಿಕ ದೋಷದ ಬಗ್ಗೆ ಘೋಷಿಸಿದರು. ಬಳಿಕ ವಿಮಾನ ಐಜಿಐ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದೆ. "ವಿಮಾನದಲ್ಲಿ ತಾಂತ್ರಿಕ ದೋಷವಿದ್ದು, ನಾವು ದೆಹಲಿ ವಿಮಾನ ನಿಲ್ದಾಣಕ್ಕೆ ಹಿಂತಿರುಗುತ್ತಿದ್ದೇವೆ ಎಂದು ಪೈಲಟ್ ಘೋಷಿಸಿದರು. ನಾವು ಹಾರಾಟದ ಸಮಯದಲ್ಲಿ ವಿಮಾನದಲ್ಲಿ ಕಂಪನ ವಾತಾವರಣ ಅನುಭವಿಸಿದ್ದೇವೆ" ಎಂದು ಪ್ರಯಾಣಿಕರೊಬ್ಬರು ಹೇಳಿದರು.

ಇಂಡಿಗೋ ವಿಮಾನ ರಾಷ್ಟ್ರ ರಾಜಧಾನಿಯಿಂದ ಬೆಳಗ್ಗೆ 7-40 ರ ಸುಮಾರಿಗೆ ಹೊರಟು ಬೆಳಗ್ಗೆ 8.20ಕ್ಕೆ ಮರಳಿತು. ಇಂಡಿಗೋ ಸಿಬ್ಬಂದಿ ಪ್ರಯಾಣಿಕರಿಗೆ ಮತ್ತೊಂದು ವಿಮಾನವನ್ನು ವ್ಯವಸ್ಥೆಗೊಳಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಘಟನೆಯ ಬಗ್ಗೆ ವಿಮಾನಯಾನ ಸಂಸ್ಥೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.

ತುರ್ತು ಭೂಸ್ಪರ್ಶ ಮಾಡಿದ ಇಂಡಿಗೋ ವಿಮಾನ: ಶುಕ್ರವಾರ ಮುಂಜಾನೆ, ವಿಮಾನದ ಎರಡು ಎಂಜಿನ್‌ಗಳಲ್ಲಿ ಒಂದರಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ದೆಹಲಿಗೆ ಹೊರಟಿದ್ದ ವಿಮಾನವು ಪಾಟ್ನಾದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಇಂಡಿಗೋ ವಿಮಾನ 6E 2433 ದೆಹಲಿಗೆ ಪಾಟ್ನಾ ವಿಮಾನ ನಿಲ್ದಾಣದಿಂದ ನಿರ್ಗಮಿಸಿದ ಮೂರು ನಿಮಿಷಗಳ ನಂತರ ಒಂದು ಎಂಜಿನ್ ನಿಷ್ಕ್ರಿಯವಾಗಿದೆ ಎಂದು ವರದಿಯಾಗಿತ್ತು.

181 ಜನರು ಪ್ರಯಾಣಿಸುತ್ತಿದ್ದ 6E 2433 ಸಂಖ್ಯೆಯ ವಿಮಾನ ಇದಾಗಿದ್ದು, ಇದರ ಒಂದು ಎಂಜಿನ್​ ನಿಷ್ಕ್ರೀಯಗೊಂಡ ಕಾರಣದಿಂದ ತುರ್ತು ಲ್ಯಾಂಡಿಂಗ್​ ಮಾಡಿರುವುದಾಗಿ ಅಧಿಕೃತ ಮೂಲಗಳು ತಿಳಿಸಿದ್ದವು. ಬೆಳಗ್ಗೆ 9 ಗಂಟೆ 8 ನಿಮಿಷಕ್ಕೆ ಇಂಡಿಗೋ ವಿಮಾನ ದೆಹಲಿಗೆ ಪ್ರಯಾಣ ಬೆಳೆಸಿತ್ತು. ಟೆಕ್​ಆಫ್​ ಆದ 3 ನಿಮಷಕ್ಕೆ ಅಂದರೆ 9 ಗಂಟೆ 11 ನಿಮಿಷಕ್ಕೆ ವಿಮಾನದ ಎಂಜಿನ್​ ನಿಷ್ಕ್ರೀಯಗೊಂಡಿದೆ. ಕೂಡಲೇ ಇನದನ್ನು ಗಮನಿಸಿದ ಪೈಲಟ್ ಪಾಟ್ನಾದ ​ಜಯಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತ ಲ್ಯಾಂಡಿಂಗ್​ ಮಾಡಿದ್ದಾರೆ. ವಿಮಾನ ಟೇಕ್​​ಆಫ್​ ಆದ ವೇಳೆ, ಪ್ರಯಾಣಿಕರ ಹೊರತು ಪಡಿಸಿ 8 ಜನ ಸಿಬ್ಬಂದಿ ಇದ್ದರು. ಪ್ರಯಾಣಿಕರ ಮುಂದಿನ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿದ್ದವು.

ಇದನ್ನೂ ಓದಿ: ತಾಂತ್ರಿಕ ದೋಷದಿಂದ ಟೇಕ್​ ಆಫ್​ ಆದ ಮೂರೇ ನಿಮಿಷಕ್ಕೆ ತುರ್ತು ಭೂಸ್ಪರ್ಶ ಮಾಡಿದ ಇಂಡಿಗೋ ವಿಮಾನ : 181 ಪ್ರಯಾಣಿಕರೂ ಸುರಕ್ಷಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.