ETV Bharat / bharat

ವಿಶೇಷಚೇತನ ಮಗುವಿನ ವಿಮಾನ ಪ್ರಯಾಣಕ್ಕೆ ಅಡ್ಡಿ.. ತನಿಖೆಗೆ ಸೂಚಿಸಿದ ಸಚಿವ ಸಿಂಧಿಯಾ

ವಿಮಾನ ನಿಲ್ದಾಣದಲ್ಲಿ ವಿಶೇಷಚೇತನ ಮಗು ಹೊಂದಿರುವ ಕುಟುಂಬದ ಪ್ರಯಾಣವನ್ನು ತಡೆದ ಇಂಡಿಗೋ ಸಂಸ್ಥೆಯ ನಡೆಯನ್ನು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಟೀಕಿಸಿದ್ದಾರೆ.

author img

By

Published : May 9, 2022, 11:02 PM IST

indigo-bars-specially
ಸಚಿವ ಸಿಂಧಿಯಾ

ರಾಂಚಿ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ವಿಶೇಷಚೇತನ ಮಗುವಿನ ಕುಟುಂಬದ ಪ್ರಯಾಣವನ್ನು ತಡೆದ ಇಂಡಿಗೋ ಸಂಸ್ಥೆಯ ನಡೆಯನ್ನು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಖಂಡಿಸಿದ್ದಾರೆ. ಅಲ್ಲದೇ, ಇಂತಹ ಘಟನೆಯನ್ನು ಸಹಿಸಲಾಗದು. ಮನುಷ್ಯರ ಜೊತೆ ಈ ರೀತಿ ನಡೆದುಕೊಳ್ಳಬಾರದು. ಘಟನೆಯನ್ನು ಸಂಸ್ಥೆಯೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ರಾಂಚಿ ವಿಮಾನ ನಿಲ್ದಾಣದಲ್ಲಿ ಭಾನುವಾರದಂದು ವಿಶೇಷಚೇತನ ಮಗುವನ್ನು ತಮ್ಮೊಂದಿಗೆ ಕರೆದುಕೊಂಡು ಬಂದಿದ್ದ ಕುಟುಂಬವನ್ನು ಇಂಡಿಗೋ ಏರ್​ಲೈನ್ಸ್​ ಸಿಬ್ಬಂದಿ ತಡೆದಿದ್ದರು. ಈ ಬಗ್ಗೆ ಫೇಸ್‌ಬುಕ್​ನಲ್ಲಿ ಪೋಸ್ಟ್​ ಹಾಕಿದ್ದ ಪ್ರಯಾಣಿಕನೊಬ್ಬ 'ಇದು ತಾರತಮ್ಯ ಮತ್ತು ಅವಮಾನದ ಘಟನೆ' ಎಂದು ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೇ, ಈ ಕುರಿತು ಚಿತ್ರಗಳು ಮತ್ತು ವಿಡಿಯೋವನ್ನು ಹಂಚಿಕೊಂಡಿದ್ದರು.

  • There is zero tolerance towards such behaviour. No human being should have to go through this! Investigating the matter by myself, post which appropriate action will be taken. https://t.co/GJkeQcQ9iW

    — Jyotiraditya M. Scindia (@JM_Scindia) May 9, 2022 " class="align-text-top noRightClick twitterSection" data=" ">

ಇತರೆ ಪ್ರಯಾಣಿಕರ ಹಿತದೃಷ್ಟಿಯಿಂದ ವಿಶೇಷಚೇತನ ಮಗುವನ್ನು ವಿಮಾನದಲ್ಲಿ ಪ್ರಯಾಣ ಮಾಡಲು ಅವಕಾಶ ನೀಡಲಿಲ್ಲ ಎಂದು ಇಂಡಿಗೋ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ. ಆದರೆ, ಈ ಘಟನೆಯನ್ನು ಟ್ವೀಟ್​ ಮಾಡಿರುವ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಘಟನೆಯ ಬಗ್ಗೆ ತನಿಖೆ ನಡೆಸಲು ಏರ್​ಲೈನ್ಸ್​ಗೆ ಸೂಚಿಸಿದ್ದಾರೆ.

ಅಲ್ಲದೇ, ಘಟನೆಯ ಬಳಿಕ ವಿಮಾನಯಾನ ಸಂಸ್ಥೆಯು ಆ ಮಗುವಿನ ಕುಟುಂಬಕ್ಕೆ ಹೋಟೆಲ್ ವಾಸ್ತವ್ಯವನ್ನು ಒದಗಿಸಿದೆ. ಅವರು ಮರುದಿನ ತಮ್ಮ ಗಮ್ಯಸ್ಥಾನಕ್ಕೆ ತೆರಳಲು ಅನುವು ಮಾಡಿಕೊಟ್ಟಿದ್ದಾರೆ. ಅಲ್ಲದೇ, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಎಂದು ಸಂಸ್ಥೆ ತಿಳಿಸಿದೆ.

ಓದಿ: ವಿಧಾನಸಭೆ ಗೇಟ್​​​ನಲ್ಲಿ ಖಲಿಸ್ತಾನ್​ ಧ್ವಜ ಹಾರಿಸಿದ್ದು ನಾವೇ: ಒಪ್ಪಿಕೊಂಡ SFJಯಿಂದ ವಿಡಿಯೋ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.